ಬೆಂಗಳೂರು:
ತೆರಿಗೆ ಪಾವತಿಸದೆ ಇದ್ದ ಮಂತ್ರಿ ಮಾಲ್’ಗೆ ಶಾಕ್ ನೀಡಲು ಮುಂದಾಗಿದ್ದ ಬಿಬಿಎಂಪಿ ಬರಿಗೈಯಲ್ಲಿ ವಾಪಸ್ಸಾಗಿದೆ .ಇನ್ನು ಮಂತ್ರಿ ಮಾಲ್ ಆಸ್ತಿ ಜಪ್ತಿ ಪ್ರಕ್ರಿಯೆಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಬಿಬಿಎಂಪಿ ಕೈಬಿಡಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ .
ಇನ್ನು ನಮಗೆ ದಾಳಿ ವೇಳೆ ನ್ಯಾಯಾಲಯದ ಆದೇಶದ ಬಗ್ಗೆ ಮಾಹಿತಿ ಇರಲಿಲ್ಲ ಎಂದಿದ್ದಾರೆ ಅಧಿಕಾರಿಗಳು ಹೀಗಾಗಿ ದಾಳಿ ವೇಳೆ ವಶಕ್ಕೆ ಪಡೆದಿದ್ದ ಚರಾಸ್ತಿಗಳನ್ನು ಹಿಂದಕ್ಕೆ ನೀಡಿದೆ ಎಂದು ತಿಳಿದುಬಂದಿದೆ.ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಸಿ.ಯೋಗೇಶ್ ಮಾತನಾಡಿ, ಪಶ್ಚಿಮ ವಲಯದಲ್ಲಿ ನಂಬರ್ ಒನ್ ತೆರಿಗೆ ಸುಸ್ತಿದಾರರೆಂದರೆ ಮಂತ್ರಿ ಮಾಲ್ ಆಗಿದೆ, ಸುಮಾರು 40 ಕೋಟಿ ರೂ. ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿದೆ ಎಂದು ಹೇಳಿದ್ದಾರೆ.
“2018 ರಿಂದ ಇಲ್ಲಿಯವರೆಗೆ ಆಸ್ತಿ ತೆರಿಗೆ ಬಾಕಿ 42.63 ಕೋಟಿ ರೂ.ಗೆ ಏರಿಕೆಯಾಗಿದೆ. ಶನಿವಾರ ಬೆಳಗ್ಗೆ ಅಧಿಕಾರಿಗಳು ತೆರಳಿ ಮಂತ್ರಿ ಮಾಲ್‌ನಿಂದ ಚರ ಆಸ್ತಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಆರಂಭದಲ್ಲಿ ನ್ಯಾಯಾಲಯದ ಆದೇಶದ ಬಗ್ಗೆ ಮಾಲ್ ಅಧಿಕಾರಿಗಳು ನಮಗೆ ತಿಳಿಸಲಿಲ್ಲ. ನಂತರ ನ್ಯಾಯಾಲಯದ ಆದೇಶವನ್ನು ತೋರಿಸಿದರು. ನಂತರ ನಾವು ದಾಳಿಯನ್ನು ಕೈಬಿಟ್ಟು, ವಶಕ್ಕೆ ಪಡೆದಿದ್ದ ಚರಾಸ್ತಿಗಳನ್ನು ವಾಪಸ್ ನೀಡಬೇಕಾಯಿತು ಎಂದು ತಿಳಿಸಿದ್ದಾರೆ.
ಬಿಬಿಎಂಪಿ ಕಾಯ್ದೆಯ ಸೆಕ್ಷನ್ 148(1)ರ ಅಡಿಯಲ್ಲಿ ಅಟ್ಯಾಚ್ ಮೆಂಟ್ ವಾರೆಂಟ್ ಜಾರಿ ಮಾಡಲಾಗಿತ್ತು ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.‘‘202ರಲ್ಲಿ ಮಾಲ್ ಅಧಿಕಾರಿಗಳು 10.4 ಕೋಟಿ ರೂ. ಚೆಕ್ ನೀಡಿದ್ದರು, ಆದರೆ, ಆ ಚೆಕ್ ಬೌನ್ಸ್ ಆಗಿದೆ’’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ