‘ಕೋಟಿಲಿಂಗೇಶ್ವರಸ್ವಾಮಿ ದೇವಾಲಯ’ ರಾಜ್ಯ ಸರ್ಕಾರದ ವಶಕ್ಕೆ!!

ಕೋಲಾರ :

      ಕೋಲಾರದ ಖ್ಯಾತ ಕೋಟಿಲಿಂಗೇಶ್ವರಸ್ವಾಮಿ ದೇವಾಲಯ ರಾಜ್ಯ ಸರ್ಕಾರದ ವಶಕ್ಕೆ ಬಂದಿದೆ.

      ದೇವಾಲಯವನ್ನು ವಶಕ್ಕೆ ಪಡೆಯುವಂತೆ ಕೆಜಿಎಫ್ ನ ಜಿಲ್ಲಾ 3 ನೆ ಸತ್ರ ನ್ಯಾಯಾಲಯದ ಮಹತ್ವದ ಆದೇಶ ನೀಡಿದ್ದು,        ಇಂದು ಗುರುವಾರ ಕೋರ್ಟ್ ಆದೇಶ ಜಿಲ್ಲಾಧಿಕಾರಿ ಕೈಸೇರಿದ ಬಳಿಕ ನಂತರ ದೇಗುಲ ಸುಪರ್ದಿಗೆ ಕ್ರಮದ ಸಾಧ್ಯತೆ ಇದೆ.

      ಕೆಜಿಎಫ್ ತಾಲೂಕಿನ ಕಮ್ಮಸಂದ್ರ ಗ್ರಾಮದಲ್ಲಿರುವ ಹೆಸರಾಂತ 108 ಅಡಿ ಎತ್ತರದ ಆಕರ್ಷಕ ಶಿವಲಿಂಗ ಕೋಟಿಲಿಂಗೇಶ್ವರ ಮೂರ್ತಿಗಾಗಿ ದಕ್ಷಿಣ ಭಾರತದಲ್ಲಿಯೆ ಹೆಸರು ವಾಸಿಯಾಗಿದೆ. 

          ಆಡಳಿತಾಧಿಕಾರಿ ಪದವಿಗಾಗಿ ಕೆವಿ.ಕುಮಾರಿ ಮತ್ತು ಡಾ.ಶಿವಪ್ರಸಾದ ಮಧ್ಯೆ ಕೋರ್ಟ್ ನಲ್ಲಿದ್ದ ವ್ಯಾಜ್ಯವಿತ್ತು. ಕೋಟ್ಯಂತರ ರೂಪಾಯಿ ಆಸ್ತಿ ಮತ್ತು ವಹಿವಾಟು ಹೊಂದಿರುವ ಈಶ್ವರನ ದೇಗುಲದ ವಿಚಾರ ನ್ಯಾಯಾಲಯದ ಮೆಟ್ಟಿಲು ಏರಿತ್ತು. ಇದೀಗ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಮಿತಿ ರಚಿಸಿ ಕೋರ್ಟ್ ಆದೇಶ ನೀಡಿದೆ. ದೇವಾಲಯದ ಶಾಂತಿ, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸರ್ಕಾರದ ವಶಕ್ಕೆ ದೇವಾಲಯವನ್ನು ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap