ಬೆಂಗಳೂರು:
ಬ್ಯಾಂಕ್ ಎಟಿಎಂಗೆ ಹಣ ತುಂಬಿಸಬೇಕಿದ್ದ 1 ಕೋಟಿ ರೂ. ಹಣದ ಜೊತೆ ಕಸ್ಟೋಡಿಯನ್ ಪರಾರಿಯಾಗಿರುವ ಘಟನೆ ವರದಿಯಾಗಿದೆ . ಬೆಂಗಳೂರಿನ ಮಡಿವಾಳ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ರಾಜೇಶ್ ಮೇಸ್ತಾ ಎಂಬಾತನೇ ಕೋಟಿ ಹಣದ ಜೊತೆಗೆ ಎಸ್ಕೇಪ್ ಆಗಿರುವ ಆರೋಪಿ.
ಆರೋಪಿ ರಾಜೇಶ್ ಮೇಸ್ತಾ ಎಟಿಎಂಗಳಿಗೆ ಹಣ ತುಂಬಿಸುವ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿಮಿಟೆಡ್ ಸಂಸ್ಥೆಯ ನೌಕರನಾಗಿದ್ದ. ಕಳೆದ 11 ವರ್ಷದಿಂದ ಸಂಸ್ಥೆಯಲ್ಲಿ ಈತ ಕೆಲಸ ಮಾಡುತ್ತಿದ್ದ. ಆದರೆ ಜನವರಿ ಅಂತ್ಯದಲ್ಲಿ ಇದ್ದಕ್ಕಿದ್ದಂತೆ ಪೋನ್ ಸ್ವಿಚ್ ಅಪ್ ಮಾಡಿ ಎಸ್ಕೇಪ್ ಆಗಿದ್ದ.
ಇದರಿಂದ ಅನುಮಾನಗೊಂಡು ಸಂಸ್ಥೆಯಿಂದ ರಾಜೇಶ್ ಹಣ ತುಂಬಿಸುತ್ತಿದ್ದ ಎಟಿಎಂಗಳ ಆಡಿಟ್ ನಡೆದಿದೆ. ಈ ವೇಳೆ 1 ಕೋಟಿ 3 ಲಕ್ಷ ರೂ. ಹಣದ ಸಮೇತ ಆರೋಪಿ ಪರಾರಿಯಾಗಿರುವುದು ಗೊತ್ತಾಗಿದೆ. ಸದ್ಯ ಈ ಬಗ್ಗೆ ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರಿಂದ ಆರೋಪಿಗಾಗಿ ಹುಡುಕಾಟ ನಡೆದಿದೆ.