ಕಳೆದ ಒಂದೂವರೆ ವರ್ಷಗಳಿಂದ ಇಡೀ ವಿಶ್ವವನ್ನೇ ತನ್ನ ಕಪಿ ಮುಷ್ಟಿಯಲ್ಲಿಟ್ಟುಕೊಂಡು ಕೊರೋನಾ ಜನರ ಜೀವವನ್ನು ಹಿಂಡಿ ಹಿಪ್ಪೆ ಮಾಡಿದೆ. ವಿಶ್ವದಾದ್ಯಂತ ಕೊರೋನಾ ಅಟ್ಟಹಾಸ ಮುಂದುವರೆದಿದೆ.
ಪರಿಸ್ಥಿತಿ ಈಗಿರುವ ಜನರು ಭಯ ಪಡೋದು ಸಹಜ. ನನಗೆ ನೆಗಡಿ, ಕೆಮ್ಮು, ಜ್ವರ ಬಂದುಬಿಟ್ಟಿದೆ ಏನ್ನಪ್ಪಾ ಮಾಡೋದು , ಇದು ಕೊರೊನಾ ಲಕ್ಷಣಗಳೇ ಅಂತ ನೆಗಡಿ, ಜ್ವರ ಕೆಮ್ಮಿಗೆ ಸಿಕ್ಕಾಪಟ್ಟೆ ಮಾತ್ರೆ ತಗೋಬೇಡಿ ಅಂತಾರೆ ತಜ್ಞ ವೈದ್ಯರು.
ಹವಾಮಾನ ಬದಲಾವಣೆ ಯಿಂದ ಉಂಟಾಗುವ ನೆಗಡಿ, ಕೆಮ್ಮು, ಜ್ವರಕ್ಕೂ ಕೋವಿಡ್ ಲಕ್ಷಣಗಳ ಸಾಮ್ಯತೆಯೇ ಇರುವುದರಿಂದ ಜನರು ಆತಂಕಪಡ್ತಾರೆ. ಆದ್ರೆ ನೆಗಡಿ, ಕೆಮ್ಮು ಇರುವವರು 10 ದಿನಗಳವರೆಗೂ ಮನೆಮದ್ದು ತೆಗೆದುಕೊಳ್ಳಿ ಚೇತರಿಕೆ ಕಾಣದಿದ್ದ ಸಮಯದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿ ಡಾಕ್ಟರ್ ಬಳಿ ಹೋಗಿ ಅಂತ ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.
ಯಾವಾಗ ಮಾಡಿಸಬೇಕು ಕೊರೋನಾ ಟೆಸ್ಟ್!
ಶೀತ, ಕೆಮ್ಮು, ಮೈಕೈನೋವು ಕಾಣಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. 10ರಲ್ಲಿ ಏಳು ಜನರಿಗೆ ಈ ರೀತಿಯ
ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಕೊರೋನಾ ಸಂಪರ್ಕಿತರ ಸಂಪರ್ಕಕ್ಕೆ ಬಾರದವರಲ್ಲೂ ಈ ಬಗೆಯ ಲಕ್ಷಣಗಳು ಕಾಣಿಸುತ್ತೆ.
ಕೆಲವರು ಪರೀಕ್ಷೆ ಮಾಡಿಸ್ತಾರೆ. ಪರೀಕ್ಷೆ ಮಾಡಿಸಿದ ಬಹುತೇಕರಲ್ಲಿ ಪಾಸಿಟಿವ್ ಬರುತ್ತೆ. ಹೀಗಾಗಿ ಸಾಮಾನ್ಯ ನೆಗಡಿ, ಜ್ವರ 10 ದಿನಗಳವರೆಗೆ ಕಡಿಮೆಯಾಗದಿದ್ದಾಗ ಕೊರೋನಾ ಪರೀಕ್ಷೆ ಮಾಡಿಸಿ.
ಜನಸಾಮಾನ್ಯರಿಗೆ ವೈದ್ಯರ ಸಲಹೆ.!
ಸಾಮಾನ್ಯ ನೆಗಡಿ, ಕೆಮ್ಮು, ಜ್ವರಕ್ಕೆ ಹೆದರಿ ಸಿಕ್ಕ ಸಿಕ್ಕ ಮಾತ್ರೆ ತಿನ್ನಬೇಡಿ. ಸುಮ್ಮನೆ ಸಿಟಿ ಸ್ಕ್ಯಾನ್, ಎಕ್ಸರೇ ಏನು ಬೇಡಿಸ ಬೇಡಿ ಇದ್ರಿಂದ ಸಮಸ್ಯೆ ಹೆಚ್ಚಾಗುತ್ತೆ. ಯಾರು ಕೊರೋನಾಲಸಿಕೆ ಹಾಕಿಸಿಕೊಂಡಿಲ್ಲವೋ ಅವರಿಗೆ ಕೊರೋನಾ ಬಂದ್ರೆ ಸ್ಥಿತಿ ಬಿಗಡಾಯಿಸುತ್ತೆ. ಮೊದಲ ವಾರ ಕೊರೋನಾದಿಂದ ಯಾವ ಅಪಾಯ ಆಗಲ್ಲ.
ಎರಡನೇ ವಾರದಲ್ಲಿ ಜ್ವರ ಹೆಚ್ಚಾದ್ರೆ ಆಸ್ಪತ್ರೆಗೆ ಹೋಗಿ, ಲಸಿಕೆ ಹಾಕಿಸಿಕೊಂಡವರಲ್ಲಿ ಕೊರೋನಾ ಬಂದ್ರು ಯಾವುದೇ ಸಮಸ್ಯೆ ಆಗಲ್ಲ. ಬೇಗ ಚೇತರಿಸಿಕೊಳ್ಳತ್ತಾರೆ ಅಂತ ವೈದ್ಯರು ತಿಳಿಸಿದ್ದಾರೆ. ಮಾಂಸ, ಮೀನು ಮೊಟ್ಟೆ, ಧಾನ್ಯಗಳಂತ ಪೌಷ್ಠಿಕಾಂಶದ ಆಹಾರ ಸೇವಿಸಿ.
ಶೀತ, ಕೆಮ್ಮಿಗೆ ಏನು ಮಾಡಬೇಕು?
ಶೀತ, ಕೆಮ್ಮು, ಜ್ವರ ಬಂದ್ರೆ ಒಬ್ಬರಿಂದ ಒಬ್ಬರಿಗೆ ಬೇಗ ಹರಡುವುದರಿಂದ ಅಂತರ ಕಾಯ್ದುಕೊಳ್ಳಬೇಕು. ಪ್ರತಿನಿತ್ಯ ಬಿಸಿ ನೀರು ಕುಡಿಯಿರಿ, ದೇಹವನ್ನು ಬೆಚ್ಚಗೆ ಇರಿಸಿಕೊಳ್ಳಿ. ಉಸಿರಾಟದ ತೊಂದರೆ, 99 ಡಿಗ್ರಿ ಮೀರಿ ಜ್ವರವಿದ್ದರೆ ವೈದ್ಯರನ್ನು ಸಂಪರ್ಕಿಸಿ.
ಸರಳ ಔಷಧ ಏನು..?
ಸಾಮಾನ್ಯ ಶೀತ, ಕೆಮ್ಮ, ನೆಗಡಿಗೆ ಮನೆಮದ್ದು ಬಳಸೋದೆ ಉತ್ತಮ. ತುಳಸಿ ಎಲೆ ಹಾಗೂ ಜೇನುತುಪ್ಪಾ ಸೇವಿಸಿ. ವೀಳ್ಯೆದೆಲೆ ರಸವನ್ನು ಹಿಡಿಸೇವಿಸುವುದು ಉತ್ತಮ. ಜ್ವರಕ್ಕೆ ಅಮೃತಬಳಿ ಕಷಾಯ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ.
ಕೆಮ್ಮು ಕಡಿಮೆ ಮಾಡಲು ನಿತ್ಯ ಹಾಲಿಗೆ ಅರಿಶಿನ ಹಾಕಿ ಕುಡಿಯಿರಿ. ಒಂದು ಪಾತ್ರೆಗೆ 4 ಇಂಚಿನಷ್ಟು ದೊಡ್ಡದಿರುವ ಶುಂಠಿ, ಚಕ್ಕೆ, ನಕ್ಷತ್ರ ಮೊಗ್ಗು ಹಾಕಿ ಚೆನ್ನಾಗಿ ಕುದಿಸಿ ತಣ್ಣಗಾದ ಬಳಿಕ ಕುಡಿಯಿರಿ. ಶೀತ ಕಡಿಮೆ ಮಾಡಲು ಸ್ವಲ್ಪ ಬಿಸಿ ನೀರಿಗೆ ನಿಂಬೆರಸ ಮತ್ತು ದಾಲ್ಚಿನ್ನಿ ಸೇರಿಸಿ ಕುಡಿಯಿರಿ.