ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ; ಹತ್ತು ಜಿಲ್ಲೆಗಳು ಇನ್ನೂ ಡೇಂಜರ್

ಬೆಂಗಳೂರು:

     ಕೋವಿಡ್ ನಿಯಂತ್ರಣಕ್ಕೆ ಲಾಕ್​ಡೌನ್ ಅಗತ್ಯವಿಲ್ಲ ಎಂಬ ನಿಲುವನ್ನು ಸರ್ಕಾರ ತಳೆದಿದ್ದರೂ, ಮೈಸೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಸೇರಿ 10 ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿರುವುದು ಕಳವಳಕಾರಿಯಾಗಿದೆ.

ಈ ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.19ಕ್ಕಿಂತ ಹೆಚ್ಚಿದೆ.

ಕೋವಿಡ್ 3ನೇ ಅಲೆಯಲ್ಲಿ ಒಮಿಕ್ರಾನ್ ನಿರೀಕ್ಷೆಗೂ ಮೀರಿ ಸೋಂಕು ಹರಡುತ್ತಿದೆ. (ಆರ್​ಟಿ ವ್ಯಾಲ್ಯೂ 5 ತಲುಪಿದೆ) ಅಂದರೆ ಒಬ್ಬ ಸೋಂಕಿತ ಐವರಿಗೆ ಸೋಂಕು ಹರಡುತ್ತಿದ್ದಾರೆ. ಹೀಗಾಗಿ ರಾಜ್ಯದ್ಯಂತ ಅಲ್ಲದಿದ್ದರೂ, 10 ಜಿಲ್ಲೆಗಳಲ್ಲಿ ಕಠಿಣ ಕ್ರಮ ಜಾರಿಗೊಳಿಸುವಂತೆ ಹಾಗೂ ಕೋವಿಡ್ ಲಸಿಕೆ ವಿತರಣೆ ಚುರುಕುಗೊಳಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಜ.16ರಂದು ದಿನದ ಸೋಂಕು ಪ್ರಮಾಣ ದರ ಶೇ. 19.15 ದಾಖಲಾದರೆ ಮೈಸೂರಿನಲ್ಲಿ ಶೇ. 30.93, ರಾಮನಗರ ಶೇ. 26.76, ಹಾಸನ ಶೇ. 26.22, ಮಂಡ್ಯ ಶೇ. 24.15, ಬೆಂಗಳೂರು ಗ್ರಾಮಾಂತರ ಶೇ. 22.31 ಪ್ರಕರಣ ವರದಿಯಾಗಿದೆ.

ಇನ್ನು ಬೆಂಗಳೂರು ನಗರ ಶೇ. 22.15, ತುಮಕೂರು ಶೇ. 21.55, ಕೋಲಾರ ಶೇ. 20.21, ಶಿವಮೊಗ್ಗ ಶೇ. 19.95, ಕಲಬುರಗಿ ಶೇ. 19.59 ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಜಿಲ್ಲೆಗಳಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಬೇಕಿದೆ.

ನಿಯಮ ಪಾಲನೆ ಅತ್ಯವಶ್ಯಕ: 

ಸದ್ಯ ಆಸ್ಪತ್ರೆ ದಾಖಲಾತಿ ಶೇ. 5-6 ಇದೆಯಾದರೂ, ಸೋಂಕು ಏರಿಕೆಯಾಗಬಾರದೆಂದರೆ, ಎಲ್ಲರೂ ಕೋವಿಡ್ ನಿಯಮ ಪಾಲಿಸುವಂತೆ ಜಾಗೃತಿ ಮೂಡಿಸಬೇಕು. ಮನೆ ಆರೈಕೆಯಲ್ಲಿರುವ ಸೋಂಕಿತರ ಮೇಲೆ ನಿಗಾ ಇರಿಸಬೇಕು.

ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯುವಂತೆ ವ್ಯವಸ್ಥೆ ಮಾಡಬೇಕು. ಆಸ್ಪತ್ರೆಗಳಲ್ಲಿರುವ ಸೋಂಕಿತರಿಗೆ ಸಮಪರ್ಕ ಚಿಕಿತ್ಸೆ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಜ್ಞರು ಸೂಚಿಸಿದ್ದಾರೆ.

       ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಐಸಿಎಂಆರ್ ಸೂಚನೆ ಮೇರೆಗೆ ಕೋವಿಡ್ ಪರೀಕ್ಷೆ ಸಂಖ್ಯೆ ಕಡಿಮೆ ಮಾಡಲಾಗಿದೆ. ರೋಗ ಲಕ್ಷಣ ಇರುವವರಿಗೆ ಮಾತ್ರ ಪರೀಕ್ಷೆಗೆ ಸೂಚಿಸಲಾಗಿದೆ.

         3ನೇ ಅಲೆಯಲ್ಲಿ ಒಮಿಕ್ರಾನ್ ಅತ್ಯಂತ ವೇಗವಾಗಿ ಸೋಂಕು ಹರಡುತ್ತಿದ್ದು, ಆರ್​ಟಿ ವ್ಯಾಲ್ಯೂ 5 ತಲುಪಿದೆ. 90ಕ್ಕಿಂತ ಹೆಚ್ಚು ಪ್ರಕರಣಗಳು ಎ ಸಿಮ್ಟಮ್ಯಾಟಿಕ್ ಆಗಿದೆ. ಆದಾಗಿಯೂ ಸೋಂಕು ಪ್ರಮಾಣ ದರ ಶೇ. 5ಕ್ಕಿಂತ ಹೆಚ್ಚಿರುವುದರಿಂದ ಮುಂದಿನ ಸಭೆಯಲ್ಲಿ ಈ ಕುರಿತು ರ್ಚಚಿಸಿ ಸೂಕ್ತ ತೀರ್ಮಾನ ತೆಗೆದುಕೊಂಡ ಸರ್ಕಾರಕ್ಕೆ ತಿಳಿಸಲಾಗುವುದು.

ರಾಜ್ಯದಲ್ಲಿ ಒಂದೆಡೆ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೆ, ಮತ್ತೊಂದೆಡೆ ಸೋಂಕು ಲಕ್ಷಣ ಹೊಂದಿರುವವರಿಗೆ ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಹಾಗೂ ಶೀತಜ್ವರ (ಐಎಲ್​ಐ) ಬಾಧಿಸುತ್ತಿದೆ. ನಗರದ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ ಒಂದರಲ್ಲೇ ನಿತ್ಯ 10 ಸಾರಿ ಹಾಗೂ 30 ಐಎಲ್​ಐ ಪ್ರಕರಣ ದಾಖಲಾಗುತ್ತಿದ್ದು, ಈ ಪೈಕಿ ಶೇ. 60 ಕೋವಿಡ್ ಸೋಂಕು ದೃಢಪಡುತ್ತಿದೆ.

ಇದರಿಂದಾಗಿ ಕಳೆದ 4-5 ದಿನಗಳಿಂದ ತೀವ್ರ ಉಸಿರಾಟದ ಸಮಸ್ಯೆ ಹಾಗೂ ಶೀತಜ್ವರದಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕೊಂಚ ಹೆಚ್ಚಿದೆ. ನಗರ ಇತರೆ ಆಸ್ಪತ್ರೆಗಳಲ್ಲೂ ಸಾರಿ ಹಾಗೂ ಐಎಲ್​ಐ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap