ಎಲ್ಲರೂ ತಪ್ಪದೆ ಕರೋನ ಲಸಿಕೆ ಪಡೆಯಿರಿ

ಕೊರಟಗೆರೆ:


   ಲಸಿಕಾ ಅಭಿಯಾನದಲ್ಲಿ ಶಾಸಕ ಡಾ.ಜಿ.ಪರಮೇಶ್ವರ್ ಕಿವಿಮಾತು

ರಾಜ್ಯದಲ್ಲಿ ಕರೋನ ಮೂರನೆ ಅಲೆ ಪ್ರಾರಂಭವಾಗಿದ್ದು, ತಪ್ಪದೆ ಎಲ್ಲರೂ ಕರೋನ ಲಸಿಕೆಯನ್ನು ಹಾಕಿಸಿಕೊಳ್ಳಿ.

ಮಕ್ಕಳಿಗೆ ಶಾಲೆಯಲ್ಲಿ ಸೇರಿದಂತೆ ಶಾಲೆಯನ್ನು ಬಿಟ್ಟ ಮಕ್ಕಳಿಗೂ ಸಹ ಮನೆ ಹತ್ತಿರ ಹೋಗಿ ಲಸಿಕೆಯನ್ನು ಹಾಕಿ ಎಂದು ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಅವರು ಪಟ್ಟಣದ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಕಂದಾಯ ಇಲಾಖೆ ಹಾಗೂ ಆರೋಗ್ಯ ಇಲಾಖೆ ಏರ್ಪಡಿಸಿದ್ದ ಲಸಿಕಾ ಅಭಿಯಾನ ಹಾಗೂ ಕರೋನದಿಂದ ಮೃತಪಟ್ಟ ಕುಟುಂಬದವರಿಗೆ ಒಂದು ಲಕ್ಷ ರೂ. ಮೌಲ್ಯದ ಚೆಕ್ ವಿತರಿಸಿ ಮಾತನಾಡಿದರು.

ಪ್ರಪಂಚದಲ್ಲಿ ಯಾವುದೇ ಒಂದು ದೇಶವೂ ಕೂಡ ಕೋವಿಡ್‍ನಿಂದ ಮುಕ್ತವಾಗಿಲ್ಲ. ಅಮೇರಿಕಾದಂತಹ ಅಭಿವೃದ್ಧಿ ಹೊಂದಿದ ದೇಶಗಳೆ ಕರೋನದಿಂದ ಎದುರುಸುತ್ತಿರುವ ದುಸ್ಥಿತಿಯನ್ನು ನೋಡಬಹುದಾಗಿದೆ.

ಅಮೇರಿಕಾ ದೇಶದಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಹೈಟೆಕ್ ಆಸ್ಪತ್ರೆಗಳು ಇದ್ದರೂ ಸಹ ಈ ಹೊತ್ತಿನ ದಿನದಲ್ಲಿ ಒಂದು ದಿನಕ್ಕೆ 5 ಲಕ್ಷ ಕರೋನ ಸೋಂಕಿತರು ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಸುಮಾರು 180 ದೇಶಗಳಲ್ಲಿ ಕರೋನ ಕಾಯಿಲೆಗೆ ಔಷಧಿಯನ್ನು ಕಂಡು ಹಿಡಿಯುತ್ತಿದ್ದಾರೆ. ಆದರೂ ಇಲ್ಲಿಯವರೆಗೂ ಔಷಧಿಗಳು ಸಿಕ್ಕಿಲ್ಲ ನಮ್ಮಲ್ಲಿ ಕರೋನ ತಡೆಯಲು 15 ವರ್ಷದ ಮೇಲ್ಪಟ್ಟ ಮಕ್ಕಳ ಲಸಿಕೆಗೆ ಚಾಲನೆ ನೀಡಲಾಗಿದೆ.

ಕರ್ನಾಟಕದಲ್ಲಿ ಒಟ್ಟು 31 ಲಕ್ಷ ಮಕ್ಕಳಿಗೆ ಕರೋನ ಲಸಿಕೆಯನ್ನು ಹಾಕಲಾಗುತ್ತಿದೆ. ನಮ್ಮ ತಾಲ್ಲೂಕಿನಲ್ಲಿ 15 ರಿಂದ 18 ವರ್ಷದ ಸುಮಾರು ಮೂರು ಸಾವಿರ ಮಕ್ಕಳಿಗೆ ಲಸಿಕೆಯನ್ನು ಹಾಕಲಿದ್ದಾರೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಾಹಿದ ಜಮ್‍ಜಮ್, ಇಓ ದೊಡ್ಡಸಿದ್ದಪ್ಪ, ಪಪಂ ಅಧ್ಯಕ್ಷೆ ಭಾರತಿಸಿದ್ದಮಲ್ಲಪ್ಪ, ಮುಖ್ಯಾಧಿಕಾರಿ ಲಕ್ಷ್ಮಣ್‍ಕುಮಾರ್, ಬಿಇಓ ಸುಧಾಕರ್, ಟಿ.ಹೆಚ್‍ಓ ವಿಜಯಕುಮಾರ್, ಸುರೇಂದ್ರನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅರಕೆರೆ ಶಂಕರ್, ಕೋಡ್ಲಹಳ್ಳಿ ಅಶ್ವತ್ಥ ನಾರಾಯಣ್, ಪಪಂ ಸದಸ್ಯರುಗಳಾದ ಬಲರಾಮಯ್ಯ,

ಓಬಳರಾಜು, ನಂದೀಶ್, ತಾಪಂ ಮಾಜಿ ಉಪಾಧ್ಯಕ್ಷ ವೆಂಕಟಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್‍ಕುಮಾರ್, ಮುಖಂಡರುಗಳಾದ ಎಲ್. ರಾಜಣ್ಣ, ಕವಿತಮ್ಮ, ಜಯಮ್ಮ, ಅರವಿಂದ್ ಸೇರಿದಂತೆ ಇತರರು ಇದ್ದರು.

ಕೊರಟಗೆರೆ ಪಟ್ಟಣದ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಕಂದಾಯ ಇಲಾಖೆ ಏರ್ಪಡಿಸಿದ್ದ ಲಸಿಕಾ ಅಭಿಯಾನ ಹಾಗೂ ಕರೋನದಿಂದ ಮೃತಪಟ್ಟ ಕುಟುಂಬದವರಿಗೆ ಒಂದು ಲಕ್ಷ ರೂ. ಮೌಲ್ಯದ ಚೆಕ್‍ನ್ನು ಶಾಸಕ ಡಾ.ಜಿ.ಪರಮೇಶ್ವರ್ ವಿತರಿಸಿದರು.

ತಾಲ್ಲೂಕಿನ ಕರೋನ ಸೋಂಕಿನಿಂದ ಸುಮಾರು 74 ಜನರು ಮರಣ ಹೊಂದಿದ್ದಾರೆ. ಸರ್ಕಾರದಿಂದ 56 ಜನರಿಗೆ ಒಂದು ಲಕ್ಷ ರೂ. ಮೌಲ್ಯದ ಚೆಕ್ ನೀಡಲಾಗಿದೆ.

ಮುಂದಿನ ದಿನಗಳಲ್ಲಿ ಉಳಿದ ಫಲಾನುಭವಿಗಳಿಗೆ ಆದಷ್ಟು ಬೇಗ ಚೆಕ್‍ಗಳನ್ನು ನೀಡುವಂತೆ ತಹಸೀಲ್ದಾರ್ ನಾಹಿದ ಜಮ್‍ಜಮ್ ಅವರಿಗೆ ಸೂಚನೆ ನೀಡಿದ್ದೇನೆ.

-ಡಾ.ಜಿ.ಪರಮೇಶ್ವರ್, ಶಾಸಕ, ಕೊರಟಗೆರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap