ತಿಪಟೂರು : ಅಪಘಾತದಿಂದಾಗಿ ಗೋವುಗಳು ರಕ್ಷಣೆ

 ತಿಪಟೂರು : 

      ಅಪಘಾತವಾಗಿ ಪ್ರಾಣಾಪಾಯವಾಗುವುದನ್ನು ಕೇಳಿದ್ದೀರಿ ,ಆದರೆ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತವಾಗಿ ಕಸಾಯಿಖಾನೆಗೆ ಸೇರಬೇಕಾದ 32 ಗೋವುಗಳ ಪ್ರಾಣ ರಕ್ಷಣೆಯಾಗಿದೆ.

     ಇತ್ತೀಚೆಗೆ ತಾನೆ ವಿಧಾನಸಭೆಯಲ್ಲಿ ಗೋರಕ್ಷಣೆಯ ಬಗ್ಗೆ ಮತ್ತು ಗೋಹತ್ಯೆ ನಿಷೇದದ ಬಗ್ಗೆ ಚರ್ಚೆನಡೆದು ಗೋವುಗಳನ್ನು ಕೊಲ್ಲುವ ಹಾಗಿಲ್ಲವೆಂದು ಶಾಸನವನ್ನು ಮಾಡಿರುವ ಸಂದರ್ಭದಲ್ಲಿ ಸುಮಾರು 30 ಸಿಮೆಹಸುಗಳ ಗಂಡು ಕರುಗಳ ಜೊತೆ 1 ಹಸು ಮತ್ತು ಒಂದು ಹೋರಿ ಸಹಿತ ವ್ಯಾಪಾರಮಾಡಿಕೊಂಡು 6 ಜನರು ಕೂರುವಂತಹ ಕ್ವಾಲೀಸ್ ಕೆ.ಎ 04ಬಿ 4774 ವಾಹನದಲ್ಲಿ ತುಂಬಿಕೊಂಡು ಹೋಗಲಾಗುತ್ತಿತ್ತು, ಆದರೆ ವಾಹನವು ಮಂಜುನಾಥಪುರದ ಸೋಮವಾರ ರಾತ್ರಿ ಅಪಘಾತವಾಗಿ ವಾಹನ ಚಾಲಕರು ವಾಹನವನ್ನು ಬಿಟ್ಟು ಪಲಾಯನ ಮಾಡಿದ್ದಾರೆ.

      ವಾಹನವನ್ನು ನೋಡಿದ ಸ್ಥಳಿಯರು ಹೊನ್ನವಳ್ಳಿ ಆರಕ್ಷಕ ಠಾಣೆಗೆ ಸುದ್ದಿ ತಿಳಿಸಿದರು. ಈ ಸಂದರ್ಭದಲ್ಲಿ ಬಂದ ಪಶುವೈದ್ಯಾಧಿಕಾರಿಗಳು ಗೋವುಗಳ ಆರೋಗ್ಯವನ್ನು ತಪಾಸಣೆ ಮಾಡಿದರು. ಗೋವುಗಳನ್ನು ಮೈಸೂರಿನ ಚಾಮುಂಡಿ ಬೆಟ್ಟದ ಹತ್ತಿರವಿರುವ ಪಿಂಬಾಲ ಗೋಶಾಲೆಗೆ ಕಳುಹಿಸಿಲಾಗುವುದೆಂದು ಆರಕ್ಷಕರು ತಿಳಿಸಿದ್ದಾರೆ.

   ಮಾರಿದವರು ಯಾರು? :

     ಇಷ್ಟೊಂದು ಸೀಮೆಹಸುಗಳ ಕರುಗಳನ್ನು ಮಾರಿದವರು ಯಾರು ಎಂಬ ಪ್ರಶ್ನೆಯು ಕಾಡುತ್ತಿದೆ. ಮುಖ್ಯವಾಗಿ ಸೀಮೆ ಹಸುವನ್ನು ಸಾಕುವವರು ಹಸು ಗಂಡುಕರುವನ್ನು ಹಾಕಿದ 2-3 ದಿನಗಳಲ್ಲಿಯೇ ಮಾರುತ್ತಾರೆ. ಸರ್ಕಾರ ಗೋವಿನ ಹತ್ಯೆಯನ್ನು ನಿಷೇದ ಮಾಡಿರುವುದು ಸರಿಯೋ ತಪ್ಪೋ ಎಂದು ಚರ್ಚೆನಡೆಯುತ್ತಿರಬೇಕಾದರೆ ಇಂತಹ ಕರುಗಳನ್ನು ಸಾಕುವವರು ಯಾರು ಎಂಬುದು ತಿಳಿಯದಾಗಿದ್ದು ಇದರ ಬಗ್ಗೆ ವಿಸ್ತøತ ಚರ್ಚೆಯಾಗಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap