ಗುಬ್ಬಿ : ಮ್ಯಾನ್‍ಹೋಲ್‍ಗೆ ಬಿದ್ದಿದ್ದ ಹಸು ರಕ್ಷಣೆ

 ಗುಬ್ಬಿ : 

      ಪಟ್ಟಣದಲ್ಲಿ ನಡೆದಿರುವ ಯುಜಿಡಿ ಕಳಪೆ ಕಾಮಗಾರಿಯಿಂದಾಗಿ ರಾಯವಾರ ಸಂಪರ್ಕ ರಸ್ತೆಯ ಬದಿಯಲ್ಲಿ ಯುಜಿಡಿ ಕಾಮಗಾರಿ ಸಂದರ್ಭದಲ್ಲಿ ನಿರ್ಮಿಸಿರುವ ಮ್ಯಾನ್ ಹೋಲ್ ಮುಚ್ಚಳ ಮುರಿದು ಬಿದ್ದಿದ್ದು ಮೇಯಲು ಬಂದಿದ್ದ ಹಸುವೊಂದು ಗುಂಡಿಗೆ ಬಿದ್ದು ಸಾವು ಬದುಕಿನ ನಡುವೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಹಸು ಗುಂಡಿಗೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಜೆಸಿಬಿ ಯಂತ್ರದ ಸಹಾಯದಿಂದ ಹಸುವನ್ನು ಮೇಲೆತ್ತಿದ್ದಾರೆ.

      ರಾಯವಾರ ರಸ್ತೆಯಲ್ಲಿ ಪ್ರತಿ ನಿತ್ಯ ನೂರಾರು ಜನ ಓಡಾಡುತ್ತಿದ್ದಾರೆ ಆದರೆ ರಸ್ತೆ ಬದಿಯಲ್ಲೆ ಮ್ಯಾನ್ ಹೋಲ್ ಮುಚ್ಚಳವಿಲ್ಲದೆ ಇರುವುದರಿಂದ ವಾಹನ ಸವಾರರು ತೀವೃತರ ಸಮಸ್ಯೆ ಎದುರಿಸುವಂತಾಗಿದೆ ಹಗಲು ವೇಳೆ ಗುಂಡಿ ಕಾಣುತ್ತದೆ ಆದರೆ ರಾತ್ರಿ ವೇಳೆ ವಾಹನ ಸವಾರರಿಗೆ ಮ್ಯಾನ್ ಹೋಲ್ ಕಾಣದೆ ಗುಂಡಿಗೆ ಬೀಳುವ ಸಾಧ್ಯತೆ ಇದೆ ಎನ್ನುತ್ತಾರೆ ಸಾರ್ವಜನಿಕರು.

      ಕಳೆದ ಮೂರು ವರ್ಷಗಳ ಹಿಂದೆ 21 ಕೋಟಿ ರೂ ವೆಚ್ಚದಲ್ಲಿ ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ಆರಂಭವಾಗಿತ್ತು ಆದರೆ ರೊಚ್ಚು ನೀರು ಸಂಸ್ಕರಣಾ ಘಟಕ ನಿರ್ಮಾಣವಾಗದ ಕಾರಣ ಕಾಮಗಾರಿ ಅರ್ಧಕ್ಕೆ ನಿಂತಿದ್ದು 21 ಕೋಟಿ ರೂ ಅನುದಾನದಲ್ಲಿ 17 ಕೋಟಿಯಷ್ಟು ಹಣದಲ್ಲಿ ನಿರ್ಮಿಸಿರುವ ಕಾಮಗಾರಿ ಕಳಫೆಯಾಗಿದ್ದು ಮ್ಯಾನ್ ಹೋಲ್‍ಗಳಿಗೆ ಸಮರ್ಪಕವಾಗಿ ಮುಚ್ಚಳ ಮುಚ್ಚದೆ ಪಟ್ಟಣದ ಹಲವು ಕಡೆಗಳಲ್ಲಿ ತೆರೆದಹಾಗೆ ಇದ್ದರೆ ಇನ್ನು ಕೆಲವು ಕಡೆಗಳಲ್ಲಿ ಮುಚ್ಚಿದ್ದ ಮುಚ್ಚಳ ಮುರಿದು ಬಿದ್ದಿದ್ದು ವಾಹನ ಸವಾರರಿಗೆ ತೀವ್ರತರ ತೊಂದರೆಯಾಗಿದೆ.

      ಸಂಬಂಧಿಸಿದ ಅಧಿಕಾರಿಗಳು ತ್ವರಿತವಾಗಿ ಮ್ಯಾನ್ ಹೋಲ್‍ಗಳ ಮುಚ್ಚಳ ಮುಚ್ಚುವುದರ ಜೊತೆಗೆ ಕಾಮಗಾರಿ ನಡೆದಿರುವ ಸ್ಥಳಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲಮಾಡಿಕೊಡುವಂತೆ ಪಟ್ಟಣದ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮ್ಯಾನ್ ಹೋಲ್‍ಗೆ ಹಸು ಬಿದ್ದಿರುವ ಬಗ್ಗೆ ಮಾಹಿತಿ ಪಡೆದ ತಹಸೀಲ್ದಾರ್ ಡಾ.ಪ್ರದೀಪ್ ಕುಮಾರ್ ಹಿರೇಮಠ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೆ ಸರಿಪಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link