ಭಾರತ : ಏಡಿ ಪ್ರಬೇದಗಳ ಸಂಖ್ಯೆ 75ಕ್ಕೆ ಏರಿಕೆ

ಕಾರವಾರ: 

      ಜಗತ್ತಿನಲ್ಲಿ ದಿನಕ್ಕೊಂದು ಜಾತಿಯ ಜೀವ ವೈವಿದ್ಯತೆ ಬೆಳಕಿಗೆ ಬರುತ್ತದೆ ಇನ್ನು ಲಕ್ಷಾಂತರ ವರ್ಷ ಇತಿಹಾಸ ಹೊಂದಿರುವ ಭಾರತದಂತಹ ನಾಡಿನಲ್ಲಿ ಕೇಳಬೇಕೆ ಈ ಪಟ್ಟಿಗೆ ಹೊಸ ಸೇರ್ಪಡೆಯಾಗಿವೆ  2 ಹೊಸ ಏಡಿ ಪ್ರಭೇದಗಳು, ಆ ಮೂಲಕ ಭಾರತದಲ್ಲಿನ ಓಟ್ಟು ಏಡಿ ಪ್ರಬೇದಗಳ ಸಂಖ್ಯೆ 75ಕ್ಕೇರಿಕೆಯಾಗಿದೆ.

    ಪಶ್ಚಿಮ ಕರಾವಳಿಗೆ ಸಂಪೂರ್ಣವಾಗಿ ಹೊಸದಾದ ಸಿಹಿನೀರಿನ ಏಡಿ ಮತ್ತು ಸಮುದ್ರದ ಏಡಿ ಎಂಬ ಎರಡು ಜಾತಿಯ ಏಡಿಗಳು ನಮ್ಮ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗಿವೆ. 

    ಕರ್ನಾಟಕ ಮೂಲದ ಇಬ್ಬರು ಪರಿಸರ ತಜ್ಞರಾದ ಯಲ್ಲಾಪುರದ ಕೃಷಿಕ, ಪರಿಸರಾಸಕ್ತ ಗೋಪಾಲಕೃಷ್ಣ ಹೆಗಡೆ ಮತ್ತು ಅರಣ್ಯ ಸಿಬ್ಬಂದಿ ಪರಶುರಾಮ ಪ್ರಭು ಭಜಂತ್ರಿ ಅವರ ಜೋಡಿ ಸಮೀರ್ ಕುಮಾರ್ ಪತಿ ಅವರ ಜೊತೆಗೂಡಿ ಸಿಹಿನೀರಿನ ವಿಶಿಷ್ಟ ಏಡಿಯ ಗುರುತು ಪತ್ತೆಹಚ್ಚಿದ್ದಾರೆ. ಈ ಮೂಲಕ ಭಾರತದಲ್ಲಿನ ಏಡಿ ಪ್ರಬೇದಗಳ ಸಂಖ್ಯೆ 75ಕ್ಕೆ ಏರಿಕೆಯಾದಂತಾಗಿದೆ.

      ಹೊಸ ಪ್ರಬೇದದ ಈ ಏಡಿಗೆ ಪುಟ್ಟ ಬಾಲಕಿಯ ಹೆಸರಿಡಲಾಗಿದ್ದು, ಈ ಹೊಸ ಏಡಿಯ ಹೆಸರು “ವೇಲ ಬಾಂಧವ್ಯ”. ವೇಲ ಅಂದರೆ ಈ ಏಡಿಯ ತಳಿಯ ಹೆಸರು. ಏಡಿಯನ್ನು ಪತ್ತೆಹಚ್ಚಿದ ಗೋಪಾಲಕೃಷ್ಣ ಹೆಗಡೆಯವರ ಮಗಳ ಹೆಸರು ಬಾಂಧವ್ಯ. ಈ ಏಡಿ ಕೃಷಿಕರಿಗೆ ಚಿರಪರಿಚಿತ. ಬುಡಕಟ್ಟು ಜನಾಂಗದವರು, ಕೃಷಿಕರ ಒಡನಾಡಿ ಸಂಬಂಧಿಯಂತೆ ಮಳೆಗಾಲದ ಆರಂಭದಲ್ಲಿ ತೋಟಗಳಲ್ಲಿ ಕಂಡುಬರುತ್ತೆ. ಈ ಸಂಬಂಧದ ಸೂಚಕವಾಗಿ “ಬಾಂಧವ್ಯ” ಎಂಬ ಹೆಸರಿಡಲಾಗಿದೆ ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap