ಚಾಮುಂಡಿ ಬೆಟ್ಟ:
ಚಾಮುಂಡಿ ಬೆಟ್ಟದ ನಂದಿ ಮಾರ್ಗದ ರಸ್ತೆಯಲ್ಲಿ ಭೂಕುಸಿತವಾದ ಬಳಿಕ ಇದೀಗ 400 ವರ್ಷಗಳ ಪುರಾತನ ನಂದಿ ವಿಗ್ರಹದ ಮೈಮೇಲೆ ಬಿರುಕು ಬಿಟ್ಟಿರುವುದು ಕಂಡುಬಂದಿದೆ.ಬಿರುಕು ಮೂಡಿರುವ ಜಾಗದಲ್ಲಿ ನೀರು ಶೇಖರಣೆ ಆಗುತ್ತಿದ್ದು ವಿಗ್ರಹದ ಮೂಲ ಸ್ವರೂಪಕ್ಕೆ ಧಕ್ಕೆಯಾಗಲಿದೆ ಎಂಬ ಆತಂಕ ಶುರುವಾಗಿದೆ.
ನಂದಿ ವಿಗ್ರಹದ ಬಿರುಕಿನ ಬಗ್ಗೆ ಪಾರಂಪರಿಕ ತಜ್ಞರು ಎರಡು ವರ್ಷಗಳ ಹಿಂದೆಯೇ ವರದಿ ನೀಡಿದ್ದರು ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ. ಎರಡು ವರ್ಷದ ಹಿಂದೆ ಬಿರುಕಿನ ಅಗಲ ಎರಡು ಅಂಗಲದಷ್ಟಿತ್ತು. ಈಗ ಅದು ಜಾಸ್ತಿಯಾಗಿದೆ.
ತುಮಕೂರು ಪಾವಗಡದಲ್ಲಿ ವಿದ್ಯಾರ್ಥಿಗಳನ್ನು ಆಟೋ ಟಾಪ್ ಮೇಲೆ ಕೂರಿಸಿ ಆಟೋ ಚಲಾಯಿಸಿದ ಚಾಲಕ!
ನಂದಿ ವಿಗ್ರಹದ ಬಲ ಭಾಗದಲ್ಲಿ ಮೂಡಿರುವ ಬಿರುಕಿಗೆ ಕೊಬ್ಬರಿ ಲೇಪನ ಮಾಡಲಾಗಿದೆ. ಬಿರುಕು ಮುಚ್ಚಲು ಶೀಘ್ರದಲ್ಲೇ ಟೆಂಡರ್ ಕರೆದು ಬಿರುಕು ಮುಚ್ಚಲಾಗುವುದು. ಇದಕ್ಕಾಗಿ 5 ಲಕ್ಷ ರೂ. ಅನುದಾನ ಮೀಸಲಿರಿಸಲಾಗಿದೆ ಎಂದು ಪುರಾತತ್ವ ಇಲಾಖೆ ಆಯುಕ್ತರಾದ ಪೂರ್ಣಿಮಾ ಹೇಳಿದ್ದಾರೆ.
ಈ ಮುಂಚೆ ನಂದಿ ವಿಗ್ರಹದ ಮೇಲೆ ಬಳಿದಿದ್ದ ವಿಶೇಷ ಬಣ್ಣ, ಮಳೆ, ಬಿಸಿಲು, ಗುಡುಗಿನಿಂದ ವಿಗ್ರಹಕ್ಕೆ ರಕ್ಷಣೆ ಸಿಗುತ್ತಿತ್ತು. ಆದರೆ ಇತ್ತೀಚೆಗೆ ಮಹಾಮಸ್ತಕಾಭಿಷೇಕ ನೆರವೇರಿಸುವ ಉದ್ದೇಶದಿಂದ ರಾಸಾಯನಿಕ ವಸ್ತುಗಳ ಬಳಕೆ ಮಾಡಿ ಬಿರುಕು ತೆಗೆಯಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








