ದಿವಾಳಿಯತ್ತ ಸಾಗಿದೆ ‘ಕ್ರೆಡಿಟ್ ಸ್ಯೂಸಿ’

ವಾಷಿಂಗ್ಟನ್: 

     ಕಳೆದ ಕೆಲ ದಿನಗಳಿಂದ ಜಾಗತಿಕವಾಗಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿನ ಏರಿಳಿತಗಳನ್ನು ಗಮನಿಸಿದರೆ ಬ್ಯಾಂಕಿನಲ್ಲಿ ದುಡ್ಡು  ಅಮೆರಿಕದಲ್ಲಿ  ಕಳೆದ ಕೆಲವು ದಿನಗಳಿಂದ ಒಂದಾದ ಮೇಲೊಂದರಂತೆ ಬ್ಯಾಂಕುಗಳು ದಿವಾಳಿಯಾಗುತ್ತಿವೆ. ಕಳೆದ 10 ದಿನಗಳಲ್ಲಿ ಅಮೆರಿಕದ 3 ಬ್ಯಾಂಕುಗಳು ದಿವಾಳಿಯಾಗಿರುವ ಬೆನ್ನಲ್ಲೇ ಜಗತ್ತಿನ 8ನೇ ಅತಿ ದೊಡ್ಡ ಬ್ಯಾಂಕ್ ‘ಕ್ರೆಡಿಟ್ ಸ್ಯೂಸಿ’ ನೆಲಕಚ್ಚುವ ಭೀತಿಯಲ್ಲಿದೆ.

   ಕ್ರೆಡಿಟ್ ಸ್ಯೂಸಿ ಬ್ಯಾಂಕ್ 2021ರ ಬಳಿಕ ಸಾಕಷ್ಟು ಹಣಕಾಸು ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪದಿಂದಾಗಿ ಮಾರುಕಟ್ಟೆ ಮೌಲ್ಯವನ್ನು ಶೇ.80 ರಷ್ಟು ಕಳೆದುಕೊಂಡಿದೆ. ಇದೀಗ ಬಾಂಡ್ ಮಾರುಕಟ್ಟೆಯಲ್ಲಿ ಈ ಬ್ಯಾಂಕ್ ಸಾಕಷ್ಟು ಹಣವನ್ನು ಹೊಂದಿದೆ. ಆದರೆ ಬಾಂಡ್ ಮಾರುಕಟ್ಟೆಯೇ ಕುಸಿತದ ಭೀತಿಯಲ್ಲಿದೆ. ಷೇರುಪೇಟೆಗಿಂತಲೂ ಬಾಂಡ್ ಪೇಟೆಯಲ್ಲಿ ಹೆಚ್ಚು ಹಣವಿದೆ. ಒಂದುವೇಳೆ ಬಾಂಡ್ ಪೇಟೆ ಕುಸಿದರೆ ಕ್ರೆಡಿಟ್ ಸ್ಯೂಸಿ ಕೂಡಾ ಕುಸಿದುಹೋಗುವ ಸಾಧ್ಯತೆಯಿದೆ. 

    ಸ್ವಿಡ್ಜರ್‌ಲ್ಯಾಂಡ್  ಮೂಲದ ಕ್ರೆಡಿಟ್ ಸ್ಯೂಸಿ ಬ್ಯಾಂಕ್‌ನ ಷೇರುಗಳು ಬುಧವಾರ ಶೇ.30 ರಷ್ಟು ಕುಸಿದಿದೆ. ಈ ಹಿನ್ನೆಲೆ ಕ್ರೆಡಿಟ್ ಸ್ಯೂಸಿ ಮುಚ್ಚಿಹೋಗುವ ಭೀತಿಯಲ್ಲಿದೆ. ಈ ನಡುವೆ ಸ್ವಿಸ್ ನ್ಯಾಷನಲ್ ಬ್ಯಾಂಕ್ ಕ್ರೆಡಿಟ್ ಸ್ಯೂಸಿಯನ್ನು ಬಲಪಡಿಸಲು 54 ಶತಕೋಟಿ ಡಾಲರ್ ನೀಡಲು ಮುಂದಾಗಿದೆ.

    ಕ್ರೆಡಿಟ್ ಸ್ಯೂಸಿ ಬ್ಯಾಂಕ್ ಕುಸಿಯುವ ಸಾಧ್ಯತೆಯಿದೆ ಎಂದು ಖ್ಯಾತ ಹೂಡಿಕೆ ತಜ್ಞ ರಾಬರ್ಟ್ ಕಿಯೋಸಾಕಿ ಭವಿಷ್ಯ ನುಡಿದಿದ್ದಾರೆ. ಕಳೆದ 10 ದಿನಗಳಲ್ಲಿ ಅಮೆರಿಕದ ಸಿಲ್ವರ್ ಗೇಟ್ ಕ್ಯಾಪಿಟಲ್, ಸಿಲಿಕಾನ್ ವ್ಯಾಲಿ ಹಾಗೂ ಸಿಗ್ನೆಚರ್ ಬ್ಯಾಂಕ್‌ಗಳನ್ನು ಮುಚ್ಚಲಾಗಿದೆ. ಒಂದು ವೇಳೆ ತಜ್ಞರ ಭವಿಷ್ಯದಂತೆ ಕ್ರೆಡಿಟ್ ಸ್ಯೂಸಿ ಬ್ಯಾಂಕ್ ಕೂಡಾ ದಿವಾಳಿಯಾದರೆ ಅಮೆರಿಕದ ಆರ್ಥಿಕತೆ ಬುಡಮೇಲಾಗುವ ಸಾಧ್ಯತೆಯಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap