ಕೊರಟಗೆರೆ:-
ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುಮಕೂರು ತಾಲ್ಲೂಕ್ ಕೋರ ಹೋಬಳಿ ಕಲ್ಸಟ್ ಕುಂಟೆ ಗ್ರಾಮದಲ್ಲಿ ನಡೆದ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಅಶ್ವಮೇಧಾ ಕಲ್ಸಟ್ ಕುಂಟೆ ಪ್ರಥಮ ಸ್ಥಾನ ಪಡೆಯಿತು ಮತ್ತು 20 ಸಾವಿರ ನಗದು ಬಹುಮಾನ ಜೊತೆಗೆ
ಹಿರಿಯ ಆಟಗಾರ ಶಿವು ಸರಣಿ ಸ್ರೇಷ್ಠ ಪ್ರಶಸ್ತಿ ಪಡೆದರು.
ಶರಣು ಶ್ರೇಷ್ಠ ಪ್ರಶಸ್ತಿ ಪಡೆದ ಶಿವು ಮಾತನಾಡಿ ಗ್ರಾಮೀಣ ಪ್ರದೇಶದ ಯುವಕರು ಮೋಜು ಮುಷ್ತಿಯಿಂದ ಗಾಂಜಾ ಸೇರಿದಂತೆ ಮಾದಕ ವ್ಯಸನದಿಂದ ಸಮಾಜಕಂಟಕರಾಗುತ್ತಿದ್ದು, ಇವುಗಳಿಂದ ಮುಕ್ತಿ ಹೊಂದಲು ಆರೋಗ್ಯಕರ ಸಮಾಜ ಸೃಷ್ಟಿಸಲು ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡಬೇಕು, ಹಳೆಯ ಕ್ರೀಡೆಗಳ ಜೊತೆಗೆ ಕ್ರಿಕೆಟ್ ನಂತಹ ಆಟಗಳಲ್ಲಿ ಯುವಕರು ಹೆಚ್ಚು ಆಸಕ್ತಿ ವಹಿಸಿ ಆರೋಗ್ಯವಂತ ಸಮಾಜದ ಸೃಷ್ಟಿಗೆ ಕಾರುಣಿ ಭೂ ತರಬೇಕು ಎಂದು ಅಭಿಪ್ರಾಯಪಟ್ಟರು .
