ಖರ್ತನಾಕ್ ವಂಚಕ ದಂಪತಿ

ಬೆಂಗಳೂರು

       ಬ್ಯಾಂಕ್‍ನಿಂದ ಸಾಲ ಕೊಡಿಸುವುದಾಗಿ ನಂಬಿಸಿ ಖರ್ತನಾಕ್ ವಂಚಕ ದಂಪತಿ ವಂಚಿಸಿ ಪ್ರಕರಣ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

       ಬ್ಯಾಂಕ್‍ನಿಂದ ಸಾಲ ಕೊಡಿಸೋದಾಗಿ ಹೇಳಿ ಕೆಂಪರಾಜು ಹಾಗೂ ಮುತ್ತುಲಕ್ಷ್ಮಿ ಎಂಬ ದಂಪತಿಗಳು ವಂಚಿಸಿದ್ದಾರೆ. ಇವರು ಒಂಟಿ ಮಹಿಳೆಯರು ಹಾಗೂ ಮನೆಯಲ್ಲಿ ಗಂಡಸರಿಲ್ಲದ ಕುಟುಂಬವನ್ನೇ ಗುರಿಯಾಗಿಸಿಕೊಂಡು ಸಾಲ ಕೆಲಸ ಕೊಡಿಸ್ತೀನಿ ಎಂದು ಹಣ ಪಡೆದು ನಂತರ ಧಮ್ಕಿ ಹಾಕಿ ಪರಾರಿಯಾಗುತ್ತಿದ್ದರು.

       ಇತ್ತೀಚೆಗೆ ನಳಿನಿ ಎಂಬ ಮಹಿಳೆಗೆ ಸುಮಾರು 1.30 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ನಳಿನಿ ಮಗಳು ಹರ್ಷಿಣಿ ಎಂಬುವವರಿಗೆ ಇದೇ ತಿಂಗಳು ಮದುವೆಯಿತ್ತು. ಮಗಳ ಮದುವೆಗೂ ಸಹಾಯವಾಗುತ್ತೆ,ಸಾಲ ತಗೋಳಿ ಎಂದು ಖರ್ತನಾಕ್ ದಂಪತಿ ಹೇಳಿದ್ದರು ಮಾತ್ರವಲ್ಲದೇ ಮಗಳಿಗೆ ಸರ್ಕಾರಿ ಉದ್ಯೋಗ ಕೊಡಿಸ್ತೇನೆ,ನಂಬಿಸಿ ನಳಿನಿಯಿಂದ 1.30 ಲಕ್ಷ ಹಣ ಪಡೆದು ವಂಚಿಸಿದ್ದ ಹಣ ಕೇಳಲು ಹೋದರೆ ಧಮ್ಕಿ ಹಾಕುತ್ತಿದ್ದಾರೆ ಎಂದು ಮೋಸ ಹೋದ ಮಹಿಳೆ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link