ಒಟಿಟಿಗೆ ಎಂಟ್ರಿ ಕೊಡಲು ಕ್ರೈಂ-ಥ್ರಿಲ್ಲರ್‌ ʼಏಳುಮಲೆʼ ಸಜ್ಜು….!

ಬೆಂಗಳೂರು: 

   ಕನ್ನಡ ಸಿನಿಮಾರಂಗದಲ್ಲಿ ಸದ್ಯ ಹೊಸ ಪ್ರತಿಭೆಗಳು ಸದ್ದು ಮಾಡುತ್ತಿದೆ. ಅಂತಹ ಸಿನಿಮಾದಲ್ಲಿ ʼಏಳುಮಲೆʼ  ಕೂಡ ಒಂದು. ಪುನೀತ್ ರಂಗಸ್ವಾಮಿ ಬರೆದು ನಿರ್ದೇಶಿಸಿದ್ದ ʼಏಳುಮಲೆʼ ಸಿನಿಮಾ ತೆರೆಕಂಡು ಪ್ರೇಕ್ಷಕರ ಮನಗೆದ್ದಿದೆ. ಈ ಸ್ಯಾಂಡಲ್‌ವುಡ್‌ ಕ್ರೈಂ-ಥ್ರಿಲ್ಲರ್‌ ನಿಜ ಜೀವನದ ಘಟನೆಗಳನ್ನು ಆಧರಿಸಿ ತಯಾರಾಗಿದೆ. ‘ಏಳುಮಲೆ’ ಸಿನಿಮಾವನ್ನು ತರುಣ್ ಸುಧೀರ್ ನಿರ್ಮಾಣ ಮಾಡಿದ್ದಾರೆ. ಸೆಪ್ಟೆಂಬರ್ 5ರಂದು ಚಿತ್ರಮಂದಿರಗಳಲ್ಲಿ ತೆರೆ ಕಂಡು ದೊಡ್ಡ ಮಟ್ಟಿಗೆ ಯಶಸ್ಸು ಪಡೆದ ಇದೇ ಸಿನಿಮಾ ಇದೀಗ ಒಟಿಟಿಗೆ ಲಗ್ಗೆ ಇಡಲು ಸಜ್ಜಾಗಿದೆ.

   ʼಏಳುಮಲೆʼ ಸಿನಿಮಾ ಬಿಡುಗಡೆಗೂ ಮುನ್ನವೇ ಟ್ರೈಲರ್ ಹಾಗೂ ಟೀಸರ್ ಮೂಲಕ ಗಮನ ಸೆಳೆದಿತ್ತು. ಹೀಗಾಗಿ ಪ್ರೇಕ್ಷಕರು ನಿರೀಕ್ಷೆಯಿಂದಲೇ ಈ ಸಿನಿಮಾವನ್ನು ಕಣ್ತುಂಬಿಕೊಂಡಿದ್ದಾರೆ. ಈ ಸಿನಿಮಾ ಯಾವಾಗ ಒಟಿಟಿಗೆ ಬರುತ್ತೆ ಎಂದು ಬಹುತೇಕರು ಕುತೂಹಲದಿಂದ ಕಾಯುತ್ತಿದ್ದಾರೆ. ಅಂತವರಿಗೆ ಇದೀಗ ಗುಡ್‌ನ್ಯೂಸ್ ಸಿಕ್ಕಿದ್ದು, ಅಕ್ಟೋಬರ್ 17ರಂದು ಚಿತ್ರ ಝೀ 5 ಫ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್‌ ಆಗಲಿದೆ.

   2 ಗಂಟೆ 13 ನಿಮಿಷದ ‘ಏಳುಮಲೆ’ ಸಿನಿಮಾ ಹೆಜ್ಜೆ ಹೆಜ್ಜೆಗೂ ಟ್ವಿಸ್ಟ್, ಕುತೂಹಲ, ಕೌತುಕವನ್ನು ಒಳಗೊಂಡಿದೆ. ಕರ್ನಾಟಕ ಮತ್ತು ತಮಿಳುನಾಡು ಗಡಿ ಪ್ರದೇಶಗಳಲ್ಲಿ ನಡೆಯುವ ಕಥೆಯನ್ನು ಇದಾಗಿದೆ. ಸ್ಯಾಂಡಲ್‌ವುಡ್ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಅವರ ಸಹೋದರ ರಾಣ ನಾಯಕನಾಗಿ ನಟಿಸಿದ್ದು, ಹೊಸ ಪ್ರತಿಭೆ ಪ್ರಿಯಾಂಕಾ ಆಚಾರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

   ಬಹುತೇಕ ಹೊಸ ಕಲಾವಿದರು ಹಾಗೂ ಸಿನಿಮಾ ತಂಡ ಸೇರಿಕೊಂಡು ಮಾಡಿದ್ದ ʼಏಳುಮಲೆʼ ಒಟಿಟಿಯಲ್ಲ ರಿಲೀಸ್‌ ಆದ ಸ್ವಲ್ಪ ದಿನದ ಬಳಿಕ ಝೀ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. 

   2004ರಲ್ಲಿ ನಡೆದ ‘ಆಪರೇಷನ್‌ ಕುಕೂನ್‌’ ಎಂಬ ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ʼಏಳುಮಲೆʼ ಸಿನಿಮಾದ ಕಥೆ ಸಿದ್ಧಪಡಿಸಲಾಗಿದೆ. ಜತೆಗೆ ಸ್ವಲ್ಕ ಕಾಲ್ಪನಿಕತೆಯನ್ನೂ ಬೆರೆಸಿರುವ ನಿರ್ದೇಶಕ ಪುನೀತ್ ರರಂಗಸ್ವಾಮಿ ರೋಚಕವಾಗಿ ತೆರೆಮೇಲೆ ತಂದಿದ್ದಾರೆ. ಜಗಪತಿ ಬಾಬು, ಕಿಶೋರ್ ಮತ್ತು ಟಿ.ಎಸ್. ನಾಗಭರಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Recent Articles

spot_img

Related Stories

Share via
Copy link