ಅಕ್ಕಪಕ್ಕದವರನ್ನು ನಂಬಿಸಿ ಕೋಟಿ ಕೋಟಿ ಹಣ ಲೂಟಿ …..!

ಮಂಡ್ಯ

   ಚೂರ್ ಗುರು ಚಂಡಾಲ್ ಶಿಷ್ಯ ಎಂಬ ಗಾದೆ ಮಾತಿಗೆ ಪುಷ್ಟಿ ಕೊಡುವಂತಹ ಘಟನೆಯೊಂದು ಮಂಡ್ಯದಲ್ಲಿ ನಡೆದಿದೆ. ಆದರೆ ಕೊಂಚ ಭಿನ್ನ. ಇಲ್ಲಿ ತಾಯಿ , ಮಗಳು  ಇಬ್ಬರೂ ಸೇರಿಕೊಂಡು ಅಕ್ಕ ಪಕ್ಕದ ಮನೆಯರನೆಲ್ಲ ನಂಬಿಸಿ ಕೋಟಿ ಕೋಟಿ ಹಣ ದೋಚಿ ರಾತ್ರೋ ರಾತ್ರಿ ಮನೆ ಬಿಟ್ಟು ಪರಾರಿಯಾಗಿದ್ದಾರೆ. ತಾಯಿ-ಮಗಳ ಚಾಲಾಕಿತನಕ್ಕೆ ಹಲವು ಕುಟುಂಬಗಳು ಬೀದಿಗೆ ಬಿದ್ದಿವೆ. ಸದ್ಯ ತಾಯಿ, ಮಗಳಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ.  

    ಅಕ್ಕಪಕ್ಕದವರು ಸೇರಿದಂತೆ ನಂಬಿಕಸ್ಥರ ಹೆಸರಲ್ಲಿ ಕೋಟಿಗೂ ಹೆಚ್ಚು ಹಣವನ್ನು ತಾಯಿ-ಮಗಳು ಲೂಟಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಿವಿಧ ಸ್ತ್ರೀಶಕ್ತಿ ಸಂಘಗಳು, ಸ್ವ-ಸಹಾಯ ಸಂಘಗಳು, ಮೈಕ್ರೋ ಫೈನಾನ್ಸ್ ಗಳಲ್ಲಿ ಸಾಲ, ಸಂಘದ ಸದಸ್ಯರ ಹೆಸರಲ್ಲಿ, ನಂಬಿಕಸ್ಥರು, ಪರಿಚಯಸ್ಥರ ಹೆಸರಲ್ಲಿ ಮತ್ತು ನಾಮಿನಿಯಾಗಿ ಸಾಲ ಪಡೆದು ಸಾಲ ಮರು ಪಾವತಿಸದೆ ವಂಚಿಸಿ, ರಾತ್ರೋ ರಾತ್ರಿ ಮನೆ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ತಾಯಿ-ಮಗಳ ಈ ಕಿಲಾಡಿ ಜೋಡಿ ಸಾಲದ ಮೊತ್ತ ಮರು ಪಾವತಿಸದ ಹಿನ್ನೆಲೆ ವಿವಿಧ ಸಂಘಗಳು, ಮೈಕ್ರೋ ಫೈನಾನ್ಸ್​ಗಳು ಸಂಘದ ಸಹ ಸದಸ್ಯರು, ಸಾಲಕ್ಕೆ ಮಧ್ಯಸ್ಥಿಕೆ ವಹಿಸಿದ್ದವರ ದುಂಬಾಲು ಬಿದ್ದಿದ್ದಾರೆ.

    ವಂಚಕ ತಾಯಿ, ಮಗಳ ನಡೆಯಿಂದ 50ಕ್ಕೂ ಹೆಚ್ಚು ಬಡ ಕುಟುಂಬಗಳು ಬೀದಿಗೆ ಬಿದ್ದಿವೆ. ಕೂಲಿನಾಲಿ ಮಾಡಿ, ಸಣ್ಣಪುಟ್ಟ ವ್ಯಾಪಾರ, ವ್ಯವಹಾರ ನಡೆಸುತ್ತಿದ್ದ ಕುಟುಂಬಗಳು, ಮಹಿಳೆಯರನ್ನೇ ಈ ಕಿಲಾಡಿ ಜೋಡಿ ಟಾರ್ಗೆಟ್ ಮಾಡಿ ವಂಚಿಸಿದೆ ಎನ್ನಲಾಗಿದೆ. ಈ ಘಟನೆ ಸಂಬಂಧ ಮೋಸ ಹೋದವರು ಪೂರ್ವ ಪೊಲೀಸ್ ಠಾಣೆಗೆ ದೂರು‌ ನೀಡಿದ್ದಾರೆ. ಆದಷ್ಟು ಬೇಗ ತಾಯಿ-ಮಗಳನ್ನು ಪತ್ತೆ ಹಚ್ಚಿ ಎಂದು ಮನವಿ ಮಾಡಿದ್ದಾರೆ.

Recent Articles

spot_img

Related Stories

Share via
Copy link
Powered by Social Snap