ಪಕ್ಷಾಂತರ ನಿಷೇಧ ಕಾಯ್ದೆ ಮಹತ್ವ ಕಳೆದುಕೊಂಡಿದೆ : ಬಿ.ಎಲ್.ಶಂಕರ್

ತುಮಕೂರು

    ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗಳು, ಕರ್ನಾಟಕದಲ್ಲಿ ಹಿಂದಿನ ವಿಧಾನಸಭೆ ಅವಧಿಯಲ್ಲಿ ನಡೆದ ರಾಜಕೀಯ ಪಕ್ಷಾಂತರಗಳನ್ನು ನೋಡಿದರೆ ಪಕ್ಷಾಂತರ ನಿಷೇಧ ಕಾಯ್ದೆ ನಗೆಪಾಟಲೀಗಾಡಿ ಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ವಿಧಾನಪರಿಷತ್ ಮಾಜಿ ಸಭಾಪತಿ ಹಾಗೂ ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಅಭಿಪ್ರಾಯಪಟ್ಟರು.

    ಅವರು ನಗರದ ಕನ್ನಡ ಭವನದಲ್ಲಿ ವೀಚಿ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ 2022ನೇ ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ರಾಜೀವ್‌ಗಾಂಧಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪಕ್ಷಾಂತರವನ್ನು ತಡೆಯಲು ಜಾರಿಗೊಳಿಸಲಾದ ಪಕ್ಷಾಂತರ ನಿಷೇಧ ಕಾಯ್ದೆ ನಂತರದಲ್ಲಿ ಮಾರ್ಪಾಡುಗಳೊಂದಿಗೆ ಮಹತ್ವ ಕಳೆದುಕೊಂಡಿದೆ.

    ಒಂದು ಪಕ್ಷದಲ್ಲಿ ಗೆದ್ದು ಅಧಿಕಾರಕ್ಕೋಸ್ಕರ ಮತ್ತೊಂದು ಪಕ್ಷಕ್ಕೆ ರಾಜೀನಾಮೆ ನೀಡಿ ಮತ್ತೆ ಆರಿಸಿಬರುವ ಹೊಸ ಸ್ವರೂಪದ ಅನೈತಿಕ ಪಕ್ಷಾಂತರ ಚಾಲ್ತಿಗೆ ಬಂದಿದೆ. ಮಹಾರಾಷ್ಟçದಲ್ಲಿ ವಿಪಕ್ಷ ನಾಯಕರಾಗಿದ್ದವರು ಏಕಾಏಕಿ ತನ್ನ ಗುಂಪಿನೊAದಿಗೆ ಆಡಳಿತ ಪಕ್ಷದ ಜೊತೆ ಸೇರಿ ಡಿಸಿಎಂ ಆಗುತ್ತಾರೆ. ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿರುವ ನಿಯಮಗಳನ್ನು ಸರಿಯಾಗಿ ಪ್ರಯೋಗಿಸದಿರುವುದೇ ಇಂತಹ ಅನರ್ಥಗಳಿಗೆ ಎಡೆಮಾಡುತ್ತಿದೆ ಎಂದರು.

    ಚುನಾವಣೆಯಲ್ಲಿ ಹಂಚುತ್ತಿರುವ ಕಪ್ಪು ಹಣ ನೋಡಿದರೆ ದೇಶದಲ್ಲಿ ರ‍್ಯಾಯ ಆರ್ಥಿಕ ವ್ಯವಸ್ಥೆಯಿರುವುದು ಗೋಚರಿಸುತ್ತಿದೆ. ಜಾತಿ ಮತ್ತು ಹಣದ ಪ್ರಭಾವದಲ್ಲಿ ಚುನಾವಣೆಗಳು ನಡೆಯುತ್ತಿದ್ದು, ಚುನಾವಣೆಯಲ್ಲಿ ಹಣ ಹಂಚಲು ಮನಸ್ಸು ಒಪ್ಪದ ಕಾರಣಕ್ಕೆ ನಾನು ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು 2008ರಲ್ಲಿ ಘೋಷಿಸಿದೆ. ಆದರೆ ಸಾಮಾಜಿಕ ಜಾಗೃತಿ, ಸಂಘಟನೆ ಬಲಪಡಿಸಲು ವ್ಯವಸ್ಥೆಯಲ್ಲಿ ಮುಂದುವರಿದಿದ್ದು, ಇತ್ತೀಚಿನ ರಾಜಕಾರಣಿಗಳು, ಜನಪ್ರತಿನಿಧಿಗಳು ಮಾಧ್ಯಮ, ಸಾಹಿತ್ಯ ಪ್ರಕಾರಗಳಲ್ಲಿ ಬರುವ ಟೀಕೆ, ವಿಮರ್ಶೆಗಳನ್ನು ಸಹಿಸದÀಂತಾಗಿದ್ದಾರೆ . ಹಿಂದೆ ಟಿಎಸ್‌ಆರ್, ಲಂಕೇಶ್ ಅವರು ಅಂಕಣ ಬರೆದರೆಂದು ಸರ್ಕಾರಗಳು ಪ್ರತಿಸ್ಪಂದಿಸುವ ಸೂಕ್ಷö್ಮ ಸಂವೇದನೆ ಇರುತ್ತಿತ್ತು. ಈಗ ಅದೆಲ್ಲ ನಶಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಬೆಳವಣಿಗೆಯೆಂದರು.

     ಸಾಮಾನ್ಯ ಕೃಷಿಕರಾಗಿ ವೀಚಿ ಅವರು ಮಾಡಿರುವ ಸಾಹಿತ್ಯ, ಪ್ರಾಮಾಣಿಕ ರಾಜಕೀಯ ಸಾಧನೆಯನ್ನು ಪ್ರಶಂಸಿಸಿದ ಎಂದ ಬಿ.ಎಲ್.ಶಂಕರ್ ಅವರು ಇಂತಹ ಶ್ರೇಷ್ಠ ಸಾಧಕರ ಹೆಸರಲ್ಲಿ ಪ್ರೊ.ಎಸ್‌ಜಿಎಸ್, ಎಸ್.ನಾಗಣ್ಣ ಮತ್ತಿತರರ ನೇತೃತ್ವದಲ್ಲಿ ವೀಚಿ ಸಾಹಿತ್ಯ ಪ್ರತಿಷ್ಠಾನದವರು ಸಾಹಿತಿಗಳು, ವಿವಿಧ ಕ್ಷೇತ್ರದ ಸಾಧಕರನ್ನು ಪ್ರತೀ ವರ್ಷ ಗುರುತಿಸಿ ಗೌರವಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆAದು ಕರೆಸಿಕೊಳ್ಳುತ್ತಿರುವ ಮಾಧ್ಯಮ ಹಾಗೂ ಸಾಹಿತ್ಯ ಒಂದೇ ಪ್ರಕಾರದ್ದಾಗಿವೆ. ಸಮಾಜವನ್ನು ತಿದ್ದುವ ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆಂದರು.

    ಇದೇ ವೇಳೆ ಸಾಹಿತಿ ಗಂಗಾಧರ ಬೀಚನಹಳ್ಳಿ ಅವರಿಗೆ ವೀಚಿ ಸಾಹಿತ್ಯ ಪ್ರಶಸ್ತಿ, ಡಾ.ಶಿವಲಿಂಗಪ್ಪ ಕೆ.ಹಂದಿಹಾಳ್ ಅವರಿಗೆ ವೀಚಿ ಯುವ ಸಾಹಿತ್ಯ ಪ್ರಶಸ್ತಿ, ಕೃಷಿಕ ಎಸ್.ಶಂಕರಪ್ಪ ಅಮ್ಮನಘಟ್ಟ ಅವರಿಗೆ ಕನಕಕಾಯಕ ಪ್ರಶಸ್ತಿ, ಕೋಲಾಟ ಕಲಾವಿದ ದೊಡ್ಡಮಲ್ಲಯ್ಯ ಕೋಡಿಪಾಳ್ಯ ಅವರಿಗೆ ವೀಚಿ ಜಾನಪದ ಪ್ರಶಸ್ತಿ ನಗದು ಬಹುಮಾನ ನೀಡಿ ಗೌರವಿಸಲಾಯಿತು.

   ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಕವಿ ವೀಚಿ ಕುರಿತು ಮಾತನಾಡಿ ಅಪ್ಪಟ ಕೃಷಿಕರಾಗಿ, ಸಂವೇದನಾಶೀಲ ಬರಹಗಾರರಾಗಿ, ಕವಿಪ್ರಜ್ಞೆಯ ರಾಜಕಾರಣಿ ಯಾಗಿದ್ದವರು ವೀಚಿ ಕಾವ್ಯನಾಮದಿಂದ ಖ್ಯಾತರಾಗಿದ್ದ ತುಮಕೂರಿನ ಚಿಕ್ಕವೀರಯ್ಯ ಅವರು.

    ಕೆ.ಆರ್.ನಾಯಕ್, ವೀಚಿ, ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ ಅವರ ತ್ರಿಮೂರ್ತಿ ಜೋಡಿ ಇಡೀ ರಾಜಕಾರಣ, ಸಾಮಾಜಿಕ ಸಂಕಟಗಳನ್ನು ಕಟುವಾಗಿ ವಿಮರ್ಶಿಸುವ ನಿಷ್ಠುರವಾದಿಗಳೆನಿಸಿದ್ದರು. ಸಾಧಾರಣ ಬಿಳಿ ಜುಬ್ಬಾ, ಪೈಜಾಮ ಧರಿಸಿ ಸೈಕಲ್ ಏರಿ ಬರುತ್ತಿದ್ದ ವೀಚಿ ಅವರು ಬೇಂದ್ರೆ, ಅಡಿಗರಂತಹ ಹಿರಿಯ ಸಾಹಿತಿಗಳ ಒಡನಾಡಿಗಳೆನಿಸಿದ್ದರು. ಇಂದು ಪ್ರತಿಷ್ಠಾನದ ಪ್ರಶಸ್ತಿ ಸ್ವೀಕರಿಸುತ್ತಿರುವವರೆಲ್ಲರೂ ತಮ್ಮ ಕ್ಷೇತ್ರದಲ್ಲಿ ಪ್ರಾಮಾಣಿಕ ಸಾಧನೆ ಮಾಡಿದವರಾಗಿದ್ದಾರೆಂದರು.

    ತೀರ್ಪುಗಾರರ ಪರವಾಗಿ ಹಿರಿಯ ಪತ್ರಕರ್ತ ಲೇಖಕ ರಘುನಾಥ ಚ.ಹ.ಅವರು ಮಾತನಾಡಿ ಅತ್ಯಂತ ಮುಕ್ತ ಪಾರದರ್ಶಕವಾಗಿ ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ಟ್ರಸ್ಟ್ ಸಹಕಾರ ನೀಡಿತು ಎಂದರು. ಪ್ರತಿಷ್ಠಾನದ ಕಾರ್ಯಾಧ್ಯಕ್ಷರು, ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಅಧ್ಯಕ್ಷತೆ ವಹಿಸಿದ್ದರು. ತೀರ್ಪುಗಾರ ಡಾ.ಚಿತ್ತಯ್ಯ ಪೂಜಾರ್, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಪ್ರತಿಷ್ಠಾನದ ಅಧ್ಯಕ್ಷ ಎಂ.ಬಸವಯ್ಯ, ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಎಚ್.ನಾಗರಾಜು, ಡಾ.ಹನುಮೇಗೌಡ ಹಾಗೂ ಪ್ರಶಸ್ತಿ ಪುರಸ್ಕೃತರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಣಿಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು. ಬಿ.ಮರುಳಯ್ಯ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap