ಕುಣಿಗಲ್ :
ತಾಲ್ಲೂಕಿನ ನಿಡಸಾಲೆ ಬಂಡಿಹಳ್ಳಿ ಬಳಿಯ ಕ್ರಷರ್ ಒಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಸ್ಫೋಟಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕ್ರಷರ್ ನಡೆಸುತ್ತಿದ್ದವರು ಪರಾರಿಯಾಗಿದ್ದಾರೆ.
ಹುಲಿಯೂರುದುರ್ಗ ಹೋಬಳಿ ನಿಡಸಾಲೆ ಬಂಡಿಹಳ್ಳಿ ಗ್ರಾಮದ ಸಮೀಪ ಇರುವ ಸಿದ್ದು ಕ್ರಷರ್‍ನಲ್ಲಿ ಬಂಡೆ ಸಿಡಿಸುವ ಸ್ಫೋಟಕ ಇರುವ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಡಿವೈಎಸ್‍ಪಿ ರಮೇಶ್, ಸಿಪಿಐ ಗುರುಪ್ರಸಾದ್ ಪಿಎಸ್‍ಐ ವೆಂಕಟೇಶ್ ಮತ್ತು ಸಿಬ್ಬಂದಿಗಳು ದಾಳಿ ನಡೆಸಿದ್ದು ಆ ಸಂದರ್ಭದಲ್ಲಿ ಜಿಲಿಟಿನ್, ಎಲೆಕ್ಟ್ರಾನಿಕ್ ಡಿಟೋರ್ನೇಟ್ ಇತರೆ ಅಪಾಯಕರ ಸ್ಪೋಟಕಗಳು ಪತ್ತೆಯಾಗಿವೆ ಎನ್ನಲಾಗಿದೆ.
ಇತ್ತೀಚೆಗೆ ಶಿವಮೊಗ್ಗದ ಹುಣಸೋಡು ಗ್ರಾಮದ ಕಲ್ಲುಗಣಿಯಲ್ಲಿ ಉಂಟಾದ ಸ್ಪೋಟದಲ್ಲಿ ಹಲವಾರು ಜನ ಮೃತಪಟ್ಟ ಪ್ರಕರಣದ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು ವಿವಿಧ ಕ್ರಷರ್ ಗಳ ಮೇಲೆ ದಾಳಿ ನಡೆಸಿ ಕೆಲವೆಡೆ ಎಚ್ಚರಿಕೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ