ಬೆಂಗಳೂರು
ದಂಡದ ಮೇಲೆ ಸರ್ಕಾರ ಘೋಷಿಸಿದ್ದ ಶೇ.50 ರಷ್ಟು ರಿಯಾಯಿತಿ ಮೇಲೆ ಸೈಬರ್ ಕಳ್ಳರ ಕಣ್ಣು ಬಿದ್ದಿದ್ದು ಎಚ್ಚರಿಕೆ ವಹಿಸುವ ಅಗತ್ಯ ಇದೆ ಎಂದು ಇಲಾಖೆ ತಿಳಿಸಿದೆ.
ಅರ್ಧದಷ್ಟು ರಿಯಾಯಿತಿ ಘೋಷಣೆಯಿಂದಾಗಿ ಕೋಟಿಗಟ್ಟಲೇ ಹಣ ಸರ್ಕಾರದ ಭೊಕ್ಕಸ ಸೇರುತ್ತಿದೆ. ಜನರು ಇದೇ ಉಳಿತಾಯದ ಸಮಯ ಎಂದುಕೊಂಡು ಆನ್‌ಲೈನ್, ಆಫ್‌ಲೈನ್ ವಿಧಾನದಲ್ಲಿ ದಂಡ ಕಟ್ಟಲು ಮುಂದಾಗಿದ್ದಾರೆ. ಆದರೆ ಸೈಬರ್ ವಂಚಕರು ಜನರ ಹಣ ಲಪಟಾಯಿಸಲು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ್ದ ಹಣಪಾವತಿ ಲಿಂಕ್‌ಗಳನ್ನು ವಂಚನೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗೆಂದು ಸ್ವತಃ ಹಿರಿಯ ಪೊಲೀಸ್ ಅಧಿಕಾರಿಗಳೇ ತಿಳಿಸಿದ್ದಾರೆ.








