ರಭಸದ ಗಾಳಿ ಮಳೆಗೆ ನೆಲಕ್ಕುರುಳಿದ ಮರಗಳು ಮೈಲನಹಟ್ಟಿ ಸುತ್ತಮುತ್ತ ಮನೆಗಳಿಗೂ ಹಾನಿ : ಅಪಾರ ನಷ್ಟ

ತುಮಕೂರು:

ತುಮಕೂರು ತಾಲ್ಲೂಕಿನ ಕೆಲವು ಭಾಗಗಳಲ್ಲಿ ನಿನ್ನೆ ಸಂಜೆ ವಿಪರೀತ ಗಾಳಿ ಬೀಸಿ ಸಾಕಷ್ಟು ಮರಗಳು ನೆಲಕ್ಕುರುಳಿರುವ ಘಟನೆ ವರದಿಯಾಗಿದೆ.ತುಮಕೂರು ನಗರ ಸೇರಿದಂತೆ ತಾಲ್ಲೂಕಿನ ಹಲವೆಡೆ ಸಂಜೆ ಮಳೆ ಆರಂಭವಾಯಿತು. ಮಳೆಗಿಂತ ಗಾಳಿ ಹೆಚ್ಚು ಬೀಸಿದ ಪ್ರದೇಶಗಳಲ್ಲಿ ಮರಗಳು ಬಿದ್ದು ಹೋಗಿವೆ.

ಜಾನುವಾರುಗಳ ಆಯಂಬುಲೆನ್ಸ್‌ : ನಾಳೆ ಚಾಲನೆ

ಮೈಲನಹಟ್ಟಿ ಮಾರನಹಟ್ಟಿ ಅದಲಾಪುರ ಸುತ್ತ ಮುತ್ತ ಬಾರಿ ಗಾಳಿ ಮಳೆ ಯಿಂದಾಗಿÀ ತುಂಬಾ ಬೆಲೆ ಬಾಳುವಅಡಿಕೆ ಹಾಗೂ ತೆಂಗಿನ ಮರಗಳು ಭೂಮಿಗೆ ಉರುಳಿವೆ. ಅಲ್ಲದೆ ಈ ಭಾಗದ ಸುತ್ತ ಮುತ್ತ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಸಂಜೆ 4 ಗಂಟೆಯಿಂದ ಮಳೆ ಆರಂಭವಾಯಿತು. ಮಳೆಗಿಂತ ಗಾಳಿಯೇ ಅಧಿಕವಾಗಿತ್ತು.

 ರಾಜ್ಯದ ಶಾಲೆಗಳಲ್ಲಿ ಪುಸಕ್ತ ಶೈಕ್ಷಣಿಕ ವರ್ಷದಿಂದಲೇ `ಭಗವದ್ಗೀತೆ’ ಬೋಧನೆ!

ಒಂದೊಂದು ತೋಟದಲ್ಲಿ ಗಾಳಿಯ ರಭಸಕ್ಕೆ 10 ರಿಂದ 20 ಮರಗಳ ತನಕ ಬಿದ್ದು ಹೋಗಿವೆ. ಅಡಿಕೆ ಹಾಗೂ ತೆಂಗಿನ ಮರಗಳು ರಭಸ ಗಾಳಿಗೆ ಬಿದ್ದು ಹೋಗಿದ್ದು ಮನೆಗಳಿಗೂ ಹಾನಿಯಾಗಿವೆ ಎಂದು ಆ ಭಾಗದ ಮುಖಂಡ ಈರೇಗೌಡ ತಿಳಿಸಿದರು.ಗಾಳಿ ಮಳೆಯಿಂದ ಹಾನಿಯಾಗಿರುವ ರೈತರಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ದೊರಕಿಸಿಕೊಡಬೇಕು ಎಂದು ಆಲ್ಲಿನ ಗ್ರಾಮ ಪಂಚಾಯತ್ ಸದಸ್ಯರಾದ ಅನ್ನಪೂರ್ಣ ಒತ್ತಾಯಿಸಿದ್ದಾರೆ.

ಅಂಬುಲೆನ್ಸ್ ಸಿಗದೆ ಬೈಕ್ ನಲ್ಲೇ ಪುತ್ರನ ಶವವನ್ನು ಮನೆಗೆ ಕೊಂಡೊಯ್ದ ತಂದೆ; ಆಂಧ್ರದಲ್ಲಿ ಮತ್ತೊಂದು ಹೃದಯ ವಿದ್ರಾವಕ ಘಟನೆ ಬೆಳಕಿಗೆ

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap