ಸಿಲಿಂಡರ್‌ ನಲ್ಲಿ ಬೆಂಕಿ : ಟೀ ಹೋಟೆಲ್‌ ಬೆಂಕಿಗೆ ಆಹುತಿ….!

ಮಧುಗಿರಿ :

   ಆಕಸ್ಮಿಕವಾಗಿ ಗ್ಯಾಸ್ ಸಿಲಿಂಡರ್ ನಲ್ಲಿ ಬೆಂಕಿ ಕಾಣಿಸಿ ಕೊಂಡ ಪರಿಣಾಮ ಟೀ ಹೋಟೆಲ್ ಆಗ್ನಿಗೆ ಆಹುತಿ ಯಾಗಿರುವ ಘಟನೆ ಬುಧವಾರ ಬೆಳಗ್ಗೆ ಸುಮಾರು 6 ಘಂಟೆಯ ಸಮಯ ದಲ್ಲಿ ನಡೆದಿದೆ.

    ಪಟ್ಟಣದ ಮಧುಗಿರಿ ಪಾವಗಡ ರಸ್ತೆಯ ಸಮೀಪದ ಅಂಬೇಡ್ಕರ್ ವೃತ್ತದ ಬಳಿ ಘಟನೆ ಸಂಭವಿಸಿದೆ. ರಸ್ತೆಯ ಸಮೀಪ ಅಸ್ಲಂ ಎನ್ನುವವರಿಗೆ ಸೇರಿದ ಎಬಿಟಿ ಹೋಟೆಲ್ ಇದಾಗಿದ್ದು ಅಸ್ಲಂ ಎಂದಿನಂತೆ ಟೀ ಮಾಡುತ್ತಿರುವಾಗ ಗ್ಯಾಸ್ ಸಿಲಿಂಡರ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿ ಕೊಂಡಿದ್ದು ತಳ್ಳುವ ಗಾಡಿಯು ಸೇರಿದಂತೆ ಸುಮಾರು 40 ಸಾವಿರ ಬೆಲೆ ಬಾಳುವ ಪಾತ್ರೆಗಳಿಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಹೋಗಿವೆ. ಆಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮುಂದೆ ಆಗಬಹುದಾದ ಅನಾಹುತ ವನ್ನು ತಪ್ಪಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap