ಕಾಟೇರನ ದರ್ಶನಕ್ಕಾಗಿ ಅಭಿಮಾನಿಗಳಲ್ಲಿ ಹೆಚ್ಚಿದ ಕಾತರ…..!

ಬೆಂಗಳೂರು: 

      ಅಭಿಮಾನಿಗಳ ಪಾಲಿನ ಡಿ ಬಾಸ್‌  ದರ್ಶನ್ ಅಭಿನಯದ ಚಿತ್ರದ ಬಿಡುಗಡೆಯು ದೊಡ್ಡ ಸಂಭ್ರಮಾಚರಣೆಯಂತೆ ಭಾಸವಾಗುತ್ತಿದೆ. ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಡಿಸೆಂಬರ್ 29ರ ಮಧ್ಯರಾತ್ರಿಯಿಂದಲೇ ಕಾಟೇರವನ್ನು ಕಣ್ತುಂಬಿಕೊಳ್ಳಲು ಅವಕಾಶವಿದ್ದು, ದರ್ಶನ್ ಅಭಿಮಾನಿಗಳು ಈಗಾಗಲೇ ಮುಂಗಡ ಟಿಕೆಟ್ ಬುಕಿಂಗ್ ಮಾಡಿಕೊಂಡು ಕಾಯುತ್ತಿದ್ದಾರೆ. ನಂತರ ಮುಂಜಾನೆ 5 ಗಂಟೆಗೆ ಪ್ರದರ್ಶನ ಆರಂಭವಾಗಲಿವೆ.

     ಪ್ರತಿ ಚಿತ್ರಮಂದಿರದಲ್ಲಿ ವಾರಾಂತ್ಯದಲ್ಲಿ ಸುಮಾರು 6 ರಿಂದ 7 ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಮುಂಗಡ ಟಿಕೆಟ್ ಬುಕಿಂಗ್‌‌ನಲ್ಲಿ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿದ್ದು, ಚಿತ್ರಮಂದಿರದ ಮಾಲೀಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈ ಚಿತ್ರಕ್ಕೆ ವ್ಯಕ್ತವಾಗುತ್ತಿರುವ ಬೇಡಿಕೆ ಕುರಿತು ಹೇಳಿದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ‘ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿಯೂ ಕಾಟೇರ ಸಿನಿಮಾ ಪ್ರದರ್ಶನಕ್ಕೆ ಗಮನಾರ್ಹ ಬೇಡಿಕೆ ಕೇಳಿಬಂದಿದೆ’ ಎನ್ನುತ್ತಾರೆ. 

   ಕಾಟೇರ ಸಿನಿಮಾ ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ 550 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿದೆ. ಹೆಚ್ಚಿನ ಬೇಡಿಕೆಯಿಂದಾಗಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. 

   ‘ನಾವು ಕಾಟೇರಾಗಾಗಿ ರಾಜ್ಯಾದ್ಯಂತ 1000ಕ್ಕೂ ಹೆಚ್ಚು ಪ್ರದರ್ಶನಗಳನ್ನು ನಿರೀಕ್ಷಿಸುತ್ತಿದ್ದೇವೆ. ಕಾಟೇರಾದಂತಹ ಕನ್ನಡ ಚಿತ್ರಕ್ಕೆ ಈ ರೀತಿಯ ಬೇಡಿಕೆ ವ್ಯಕ್ತವಾಗಿರುವುದು ಸಂತಸ ತಂದಿದೆ. ಇದು ನಟ, ನಿರ್ದೇಶಕ ಮತ್ತು ಇಡೀ ತಂಡದ ಸಾಮೂಹಿಕ ಪ್ರಯತ್ನದ ಫಲಿತಾಂಶ ಎಂದು ನಾನು ನಂಬುತ್ತೇನೆ’ ಎಂದು ನಿರ್ಮಾಪಕರು ತಿಳಿಸಿದ್ದಾರೆ. 

   ರಾಕ್‌ಲೈನ್‌ ಸಿನಿಮಾಸ್‌ನಲ್ಲಿ ಮಧ್ಯರಾತ್ರಿಯಿಂದಲೇ ಶೋಗಳು ಶುರುವಾಗಲಿದ್ದು, ಒಂದು ಸಾವಿರ ರೂಪಾಯಿ ಮೌಲ್ಯದ ಎಲ್ಲಾ ಟಿಕೆಟ್‌ಗಳು ಕೇವಲ ಒಂದು ಗಂಟೆಯೊಳಗೆ ಮಾರಾಟವಾಗಿವೆ. 1000 ರೂ. ದರದ ಟಿಕೆಟ್‌ಗಳನ್ನು ಹೊಂದಿರುವ ಮೊದಲ ಕನ್ನಡ ಚಿತ್ರ ಕಾಟೇರ ಎಂದು ರಾಕ್‌ಲೈನ್ ವೆಂಕಟೇಶ್ ಬಹಿರಂಗಪಡಿಸಿದ್ದಾರೆ. 

    ‘ಆರಂಭದಲ್ಲಿ, ಕನ್ನಡ ಚಿತ್ರವೊಂದನ್ನು ಈ ಟಿಕೆಟ್ ದರ ನೀಡಿ ನೋಡಲಾಗುತ್ತದೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಆದರೆ, ಅಂತಹ ಅನುಮಾನಗಳನ್ನು ವ್ಯಕ್ತಪಡಿಸುವುದು ಕೂಡ ಕನ್ನಡ ಚಿತ್ರರಂಗಕ್ಕೆ ತೋರಿಸುವ ಅಗೌರವ ಎಂದು ನಾನು ಭಾವಿಸುತ್ತೇನೆ. ಆದ್ದರಿಂದಲೇ, ನಾವು ಟಿಕೆಟ್ ದರವನ್ನು 1000 ರೂ.ಗೆ ನಿಗದಿಪಡಿಸಿದ್ದೇವೆ ಮತ್ತು ಈಗ ಎಲ್ಲಾ ಪ್ರದರ್ಶನಗಳು ಸಂಪೂರ್ಣವಾಗಿ ಬುಕ್ ಆಗಿವೆ’ ಎನ್ನುತ್ತಾರೆ ರಾಕ್‌ಲೈನ್ ವೆಂಕಟೇಶ್.

     ಕನ್ನಡ ಚಿತ್ರರಂಗದ ಸಂಭ್ರಮವನ್ನು ಉಳಿಸಿಕೊಳ್ಳಲು ಕನ್ನಡ ತಾರೆಯರು ವರ್ಷಕ್ಕೆ ಕನಿಷ್ಠ ಎರಡು ಚಿತ್ರಗಳನ್ನು ಮಾಡಬೇಕು ಎಂದು ಅವರು ಒತ್ತಿ ಹೇಳಿದರು. ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆಯಾದ ಇತರ ಭಾಷೆಯ ಚಿತ್ರಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ‘ಇದರಿಂದ ಮೂಲ ಕನ್ನಡ ಸಿನಿಮಾಗಳ ನಿರ್ಮಾಣಗಳು ಉದ್ಯಮದಿಂದ ಕಣ್ಮರೆಯಾಗಬಹುದು. ಕನ್ನಡ ಚಿತ್ರರಂಗದ ಆಚರಣೆಯನ್ನು ಪುನರುಜ್ಜೀವನಗೊಳಿಸುವುದು ಕನ್ನಡ ತಾರೆಯರನ್ನು ಅವಲಂಬಿಸಿದೆ. ಅವರು ಹೆಚ್ಚಿನ ಕನ್ನಡ ಸಿನಿಮಾಗಳನ್ನು ಮಾಡುವ ಮತ್ತು ಪ್ರಚಾರ ಮಾಡುವ ಅಗತ್ಯವಿದೆ ಎನ್ನುತ್ತಾರೆ ಅವರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap