ತಪ್ಪುಗಳನ್ನು ಕಾಂಗ್ರೆಸ್ ಮೌಲ್ಯಮಾಪನ ಮಾಡಿ ಸರಿಪಡಿಸಿಕೊಳ್ಳಲಿದೆ : ಡಿ ಕೆ ಶಿವಕುಮಾರ್‌

ಬೆಂಗಳೂರು:

   ರಾಜ್ಯದಲ್ಲಿ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆಗೆ ಕಾರಣಗಳನ್ನು ತಿಳಿಯಲು ಕಾಂಗ್ರೆಸ್ ಕೇಂದ್ರ ನಾಯಕರು ಗುರುವಾರ ರಾಜ್ಯದ ಕಾಂಗ್ರೆಸ್ ನಾಯಕರೊಂದಿಗೆ ಸರಣಿ ಸಭೆ ನಡೆಸಿದರು.

   ಸಭೆ ಕುರಿತು ಮಾತನಾಡಿದ ಡಿಕೆ.ಶಿವಕುಮಾರ್ ಅವರು, ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷ 1 ಕ್ಷೇತ್ರದಲ್ಲಿ ಮಾತ್ರ ಗೆದ್ದಿತ್ತು. ಈ ಬಾರಿ ಆ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಆದರೆ, ನಮ್ಮ ನಿರೀಕ್ಷೆಯಂತೆ 14-15 ಸ್ಥಾನಗಳು ಬಂದಿಲ್ಲ ಲೋಕಸಭೆ ಚುನಾವಣೆಯ ತಪ್ಪುಗಳನ್ನು ಕಾಂಗ್ರೆಸ್ ಮೌಲ್ಯಮಾಪನ ಮಾಡಿ ಸರಿಪಡಿಸಿಕೊಳ್ಳಲಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಎದುರಿಸಲು ಸಿದ್ಧವಾಗಲಿದೆ ಎಂದು ಹೇಳಿದ್ದಾರೆ.

   ಎಐಸಿಸಿ ಸತ್ಯಶೋಧನಾ ಸಮಿತಿಯ ಸಮ್ಮುಖದಲ್ಲಿ ಪಕ್ಷದ ಕಾರ್ಯವೈಖರಿ ಮೌಲ್ಯಮಾಪನ ನಡೆಯುತ್ತಿದೆ. ಈ ಪ್ರಕ್ರಿಯೆ ದೇಶಾದ್ಯಂತ ನಡೆಯುತ್ತಿದೆ. ರಾಜ್ಯದ ನಾಲ್ಕು ಭೌಗೋಳಿಕ ಪ್ರದೇಶಗಳಿಗೆ ನಮ್ಮ ವರದಿಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಚರ್ಚಿಸಿ ಲೋಪದೋಷಗಳನ್ನು ಪತ್ತೆ ಮಾಡುತ್ತೇವೆಂದು ತಿಳಿಸಿದರು.

   ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಿದ ಸೂಕ್ಷ್ಮ ಅಂಶಗಳನ್ನು ನಾವು ಅರ್ಥಮಾಡಿಕೊಳ್ಳಬೇಕು. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಲಾಭವಿದೆ ಎಂದು ತಿಳಿದಿದ್ದೆವು, ಮುಂದಿನ ಚುನಾವಣೆಯಲ್ಲಿ ಅವರ ವಿರುದ್ಧ ಹೋರಾಡಲು ನಾವು ಸಿದ್ಧರಾಗಬೇಕು.

   ಸತ್ಯಶೋಧನಾ ಸಮಿತಿಯು ಶುಕ್ರವಾರ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿಗಳು ಮತ್ತು ಇತರ ಮುಖಂಡರೊಂದಿಗೂ ಸಭೆ ನಡೆಸುತ್ತಿದೆ. ಸಮಿತಿಯು ತನ್ನ ವರದಿಯನ್ನು ಎಐಸಿಸಿಗೆ ನೀಡಲಿದೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap