ರಾಜ್ಯವೇ ತಲೆ ತಗ್ಗಿಸೋ ಕೆಲಸ ಮಾಡಿದ್ದು ನಿಮ್ಮ ಮಗ : ಡಿ ಕೆ ಸುರೇಶ್‌

ಬೆಂಗಳೂರು:

     ಎಚ್.ಡಿ ಕುಮಾರಸ್ವಾಮಿ ಹಾಗೂ ಡಿ.ಕೆ ಬ್ರದರ್ಸ್ ಮಧ್ಯೆ ಪೆನ್ಡ್ರೈವ್ ಫೈಟ್ ಜೋರಾಗ್ತಿದೆ. ಚಿಲ್ಲರೆ ಅಣ್ತಮ್ಮ ಎಂದಿದ್ದ ಕುಮಾರಸ್ವಾಮಿ ವಿರುದ್ಧ ಸಂಸದ ಡಿಕೆ ಸುರೇಶ್  ಕೆರಳಿ ಕೆಂಡವಾಗಿದ್ದಾರೆ. ರಾಜ್ಯವೇ ತಲೆ ತಗ್ಗಿಸೋ ಚಿಲ್ಲರೆ ಹಾಗೂ 420 ಕೆಲಸ ಮಾಡಿದ್ದು ನಿಮ್ಮ ಮಗ.

    ತಾಕತ್ತಿದ್ದರೆ ಹೆಣ್ಣುಮಕ್ಕಳಿಗೆ  ಗೌರವ ಕೊಡೋದು ಕಲೀರಿ. ನಮ್ಮ ಬಗ್ಗೆ ಮಾತನಾಡದಿದ್ರೆ ನಿಮಗೆ ಊಟ ಸೇರಲ್ಲ ಅನ್ನೋದು ಗೊತ್ತಿದೆ ಅಂತಾ ಕುಮಾರಸ್ವಾಮಿ ವಿರುದ್ಧ ಡಿ.ಕೆ ಸುರೇಶ್ ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದಾರೆ. 

    ಇಡೀ ರಾಜ್ಯವೇ ತಲೆ ತಗ್ಗಿಸೋ ಚಿಲ್ಲರೆ, 420 ಕೆಲಸ ಮಾಡಿರೋದು ನಿಮ್ಮ ‘ಮಗ’ ಕುಮಾರಸ್ವಾಮಿ ಅವರೇ! ಮಾತೆತ್ತಿದರೆ ಡಿ ಕೆ ಬ್ರದರ್ಸ್ ಅಂತ ಹೇಳೋ ನಿಮಗೆ ನಮ್ಮ ಬಗ್ಗೆ ಮಾತನಾಡದಿದ್ದರೆ ಊಟ ಸೇರಲ್ಲ ಎಂದು ನಮಗೂ ಗೊತ್ತು. ತಾಕತ್ತಿದ್ದರೆ ಮೊದಲು ಹೆಣ್ಣುಮಕ್ಕಳಿಗೆ ಮರ್ಯಾದೆ ಗೌರವ ಕೊಡೋದು ಕಲೀರಿ ಆಮೇಲೆ ಡಿ ಕೆ ಬ್ರದರ್ಸ್ ಬಗ್ಗೆ ಮಾತನಾಡಿ ಎಂದು ಡಿಕೆ ಸುರೇಶ್ ಕಿಡಿಕಾರಿದ್ದಾರೆ.

ಬೆಳಗ್ಗೆ ಚಿಲ್ಲರೆ ಅಣ್ಣತಮ್ಮಂದಿರು, ವಿಡಿಯೋವನ್ನು ಕುಮಾರಸ್ವಾಮಿಯೇ ಬಿಟ್ಟಿದ್ದಾರೆ. ಈ ಮೊದಲೇ ದೇವರಾಜೇಗೌಡ ಮತ್ತು ಕುಮಾರಸ್ವಾಮಿ ಭೇಟಿಯಾಗಿರಬಹುದು ಎಂದು ಈ 420ಗಳು ಹೇಳಿದ್ದಾರೆ. ಈಗ ಈ ವಿಡಿಯೋ ಮಾಡಿದ ಕಾರ್ತಿಕ್ ಎಲ್ಲಿದ್ದಾನೆ? ಈ ಚಾಲಕ ಕಾರ್ತಿಕ್ ತರಾತುರಿಯಲ್ಲಿ ವಿಡಿಯೋ ಮಾಡಿ ಮಾಧ್ಯಮಗಳಿಗೆ ಕೊಟ್ಟವರು ಯಾರು? ಈಗ ಅವನು ಮಲೇಶಿಯಾದದಲ್ಲಿದ್ದಾನೆ. ಯಾರು ಅವನನ್ನು ವಿದೇಶಕ್ಕೆ ಕಳುಹಿಸಿದ್ದು ಎಂದು ಎಚ್ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದರು.

ನನಗೆ ವಿಷಯಗಳು ಗೊತ್ತಾಗುತ್ತವೆ. ಅವರೇ ನಮ್ಮನ್ನು ಕೆಣಕಿದ್ದು, ಅದರಲ್ಲಿ ನನ್ನನ್ನು ಕೆಣಕಿದ್ದಾರೆ. ಇದಕ್ಕೆಲ್ಲಾ ಏನು ಮಾಡಬೇಕು ಅನ್ನೋದು ಗೊತ್ತಿದೆ. ಇಂತಹದೆನ್ನಲ್ಲಾ ನಾನು ತುಂಬಾ ನೋಡಿದ್ದೇನೆ. ಆ ಕಾರ್ತಿಕ್ ಎಲ್ಲಿದ್ದಾನೆ ಎಂಬುದನ್ನು ಮೊದಲು ಹುಡುಕಿ. ಆನಂತರ ಈ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳಿದರು.

 

Recent Articles

spot_img

Related Stories

Share via
Copy link
Powered by Social Snap