ದಾಬಸ್ ಪೇಟೆ :
ಇತ್ತೀಚಿಗೆ ಸುರಿಯುತ್ತಿರುವ ಅಧಿಕ ಮಳೆಯಿಂದ ಲಕ್ಕೂರು ಸಮೀಪ ಮಧುಗಿರಿ ಸಂಪರ್ಕಿಸುವ ರಸ್ತೆಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಲಕ್ಕೂರು ಗ್ರಾಮದಿಂದ ಹರಿವ ಕೊಳಚೆ ನೀರು ಮಳೆ ನೀರಿನೊಡನೆ ಬೆರೆತು ರಸ್ತೆಯಲ್ಲಿಯೇ ಹರಿಯುತ್ತಿವೆ.
ಇದೇ ರಸ್ತೆ ಮುಖಾಂತರ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ದೇವರಾಯನದುರ್ಗ ಹಾಗೂ ಗೊರವನಹಳ್ಳಿ ದೇವಾಲಯಗಳಿಗೆ ಬೈಕಿನಲ್ಲಿ ಹೋಗುವ ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ಕೊಳಚೆ ನೀರು ಸಿಡಿಯುತ್ತಿದ್ದು. ಜನರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಾ ಕೊಳಚೆ ನೀರಿನಲ್ಲೇ ಸಾಗುತ್ತಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಸೋಂಪುರದ ಯುವಕ ಯತೀಶ್.ಟಿ ಈ ಭಾಗ ಅಗಲಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ್ದು, ಇಲ್ಲಿ ಇರುವ ಅಂಗಡಿ ಹಾಗೂ ಬೇಕರಿಗಳ ಪ್ಲಾಸ್ಟಿಕ್ ತ್ಯಾಜ್ಯ ರಸ್ತೆ ಬದಿ ಸುರಿಯುತ್ತಿದ್ದು ಇದರಿಂದ ಮಳೆ ನೀರು ಸಾರಾಗವಾಗಿ ಸಾಗಲು ಸಾಧ್ಯವಾಗದೆ ರಸ್ತೆ ಮೇಲೆ ಹರಿಯುತ್ತಿದೆ ಹಾಗಾಗಿ ಗ್ರಾಮ ಪಂಚಾಯ್ತಿಯವರು ಕಸ ವಿಲೇವಾರಿ ಮಾಡಿ ರಸ್ತೆ ಬದಿ ಕಸ ಸುರಿಯುತ್ತಿರುವ ಬೇಕರಿಯವರಿಗೆ ದಂಡ ವಿಧಿಸಬೇಕು ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಶೀಘ್ರದಲ್ಲಿ ಸರಿಪಡಿಸಬೇಕೆಂದು ಆಗ್ರಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
