ದಿನೇ ದಿನೆ ಹೆಚ್ಚಾಗುತ್ತಿದೆ ವೆಸ್ಟ್‌ ನೈಲ್‌ ಸೋಂಕು….!

ಮೈಸೂರು:

  ಕೇರಳ ರಾಜ್ಯದಲ್ಲಿ ವೆಸ್ಟ್ ನೈಲ್ ಜ್ವರ ಹೆಚ್ಚಾಗಿ ತಲೆದೋರಿದ್ದು, ಮೈಸೂರು ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.ಹೆಚ್ ಡಿ ಕೋಟೆ ತಾಲ್ಲೂಕಿನ ಬಾವಲಿ ಚೆಕ್ ಪೋಸ್ಟ್ ನಲ್ಲಿ ಆರೋಗ್ಯಾಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದು, ಗಡಿಯೊಳಗೆ ಬಂದು ಹೋಗುವ ವಾಹನಗಳ ಸವಾರರ ಮೇಲೆ ಕಟ್ಟೆಚ್ಚರ ವಹಿಸಿದ್ದಾರೆ.

    ಕೇರಳದಲ್ಲಿ ಕಾಣಿಸಿಕೊಂಡ ಜ್ವರಕ್ಕೆ ಮೈಸೂರು ಗಡಿಭಾಗದಲ್ಲಿ ಅಲರ್ಟ್ ಮಾಡಲಾಗಿದೆ. ಈ ಹಿಂದೆ ಕೋವಿಡ್, ಹಂದಿಜ್ವರ, ನಿಫಾ ಕೇರಳದಲ್ಲಿ ಕಾಣಿಸಿಕೊಂಡು ರಾಜ್ಯಕ್ಕೆ ಹರಡಿತ್ತು. ಮೊದಲ ಪ್ರಕರಣಗಳು ಕಂಡು ಬಂದಿದ್ದ ಕೇರಳ ರಾಜ್ಯ. ಕೇರಳ ಗಡಿ ಮೂಲಕ ಮೈಸೂರಿಗೆ ಪ್ರವೇಶ ಪಡೆಯುವ ರೋಗಗಳು. ಆದ್ದರಿಂದ ಅಲರ್ಟ್ ಘೋಷಿಸಲಾಗಿದೆ.

   ತೀವ್ರ ಅನಾರೋಗ್ಯದ ಲಕ್ಷಣಗಳೆಂದರೆ ಅಧಿಕ ಜ್ವರ, ತಲೆನೋವು, ಕುತ್ತಿಗೆ ಬಿಗಿತ, ಮೂರ್ಛೆ ಹೋದಂತೆ ಆಗುವುದು, ದಿಗ್ಭ್ರಮೆಗೊಳ್ಳುವುದು, ಕೋಮಾ, ನಡುಕ, ಸೆಳೆತ, ಸ್ನಾಯು ದೌರ್ಬಲ್ಯ, ದೃಷ್ಟಿ ನಷ್ಟ, ಮರಗಟ್ಟುವಿಕೆ ಮತ್ತು ಪಾರ್ಶ್ವವಾಯು. ತೀವ್ರ ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಹಲವಾರು ವಾರಗಳು ಅಥವಾ ತಿಂಗಳುಗಳು ತೆಗೆದುಕೊಳ್ಳಬಹುದು.

    ಶೇಕಡಾ 80ರಷ್ಟು ಮಂದಿಯಲ್ಲಿ ಲಕ್ಷಣರಹಿತವಾಗಿದ್ದರೆ ಇನ್ನು ಕೆಲವರಲ್ಲಿ ಜ್ವರ, ತಲೆನೋವು, ಆಯಾಸ, ದೇಹದ ನೋವು, ವಾಕರಿಕೆ, ದದ್ದು ಮತ್ತು ಊದಿಕೊಂಡ ಗ್ರಂಥಿಗಳಂತಹ ರೋಗ ಲಕ್ಷಣಗಳು ಕಂಡುಬರುತ್ತದೆ.

    ವೆಸ್ಟ್ ನೈಲ್ ವೈರಸ್ ಸೋಂಕಿಗೆ ಒಳಗಾದ ಸುಮಾರು 150 ವ್ಯಕ್ತಿಗಳಲ್ಲಿ ಒಬ್ಬರು ಹೆಚ್ಚು ತೀವ್ರವಾದ ಕಾಯಿಲೆಯನ್ನು ಹೊಂದಿರುತ್ತಾರೆ. ತೀವ್ರ ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಹಲವಾರು ವಾರಗಳು ಅಥವಾ ತಿಂಗಳುಗಳು ತೆಗೆದುಕೊಳ್ಳಬಹುದು.

    ಎಚ್.ಡಿ.ಕೋಟೆ ತಾಲೂಕು ಆರೋಗ್ಯಾಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ಗಡಿ ಭಾಗದಲ್ಲಿ ಹಲವರಲ್ಲಿ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿದೆ. ಜ್ವರ, ತಲೆನೋವು, ಶೀತದಿಂದ ರೋಗಿಗಳು ಬಳಲುತ್ತಿದ್ದಾರೆ. ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಸ್ಯಾಂಪಲ್ ರವಾನಿಸಲಾಗಿದೆ.

    ನೈಲ್ ಜ್ವರದ ಪ್ರಕರಣಗಳು ಕೇರಳ ರಾಜ್ಯದ ಮೂರು ಜಿಲ್ಲೆಗಳಾದ ತ್ರಿಶೂರ್, ಮಲಪ್ಪುರಂ ಮತ್ತು ಕೋಝಿಕ್ಕೋಡ್ ನಲ್ಲಿ ವರದಿಯಾಗಿದೆ. ಸೋಮವಾರ ಒಬ್ಬ ವ್ಯಕ್ತಿ ವೈರಲ್ ಕಾಯಿಲೆಯಿಂದ ಮೃತಪಟ್ಟಿದ್ದು, ಇತ್ತೀಚಿನ ದಿನಗಳಲ್ಲಿ ಆರು ಪ್ರಕರಣಗಳು ವರದಿಯಾಗಿವೆ.

    ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಈ ಪ್ರದೇಶಗಳಲ್ಲಿ ಜಾಗರೂಕರಾಗಿರಲು ಸೂಚಿಸಿದ್ದಾರೆ ಮತ್ತು ಸೊಳ್ಳೆ ನಿಯಂತ್ರಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆದೇಶಿಸಿದ್ದಾರೆ.

    ವೆಸ್ಟ್ ನೈಲ್ ವೈರಸ್ (WNV) ಸೊಳ್ಳೆಯಿಂದ ಹರಡುವ, ಏಕ-ತಂತು ಆರ್ ಎನ್ ಎ ವೈರಸ್ ಆಗಿದೆ. ಇದು ಫ್ಲೇವಿವೈರಸ್ ಮತ್ತು ಜಪಾನೀಸ್ ಎನ್ಸೆಫಾಲಿಟಿಸ್ ಮತ್ತು ಹಳದಿ ಜ್ವರವನ್ನು ಉಂಟುಮಾಡುವ ವೈರಸ್ ಗಳಿಗೆ ಸಂಬಂಧಿಸಿದ್ದಾಗಿದೆ.

    ಕ್ಯೂಲೆಕ್ಸ್ ಜಾತಿಯ ಸೊಳ್ಳೆಗಳು ಪ್ರಸರಣಕ್ಕೆ ಪ್ರಮುಖ ಕಾರಣಗಳಾಗಿರುತ್ತದೆ. ಸೋಂಕಿತ ಸೊಳ್ಳೆಗಳು ವೈರಸ್‌ ಗೆ ಪ್ರಮುಖ ಕಾರಣವಾಗಿರುವುದರಿಂದ ಪಕ್ಷಿಗಳು ಸೇರಿದಂತೆ ಮನುಷ್ಯರು ಮತ್ತು ಪ್ರಾಣಿಗಳಲ್ಲಿ ರೋಗವನ್ನು ಹರಡುತ್ತವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap