ಗದಗ:
ತಳ್ಳು ತಳ್ಳು ಐಸ್ಸಾ.. ಇನ್ನು ತಳ್ಳು ಐಸ್ಸಾ ಅಂತ ನೂಕಿ ಸರ್ಕಾರಿ ವಾಹನ ಸ್ಟಾರ್ಟ್ ಮಾಡಲು ಸಿಬ್ಬಂದಿಗಳು ಹರಸಾಹಸ ಪಡುತ್ತಿರುವ ಘಟನೆ ಗದಗನಲ್ಲಿ ಕಂಡುಬಂದಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಬಿಸಿ, ಸರ್ಕಾರಿ ವಾಹನಗಳಿಗೂ ತಟ್ಟಿದಂತಿದೆ. ಗದಗ ಜಿಲ್ಲಾಡಳಿತ ಭವನ ಬಳಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ವ ಶಿಕ್ಷಣ ಅಭಿಯಾನಕ್ಕೆ ಸಂಬಂಧಿಸಿದ ವೆಹಿಕಲ್ ಸ್ಟಾರ್ಟ್ ಆಗುತ್ತಿಲ್ಲ.
KA- 42 G-0492 ಎಂಬ ವಾಹನ ನಿತ್ಯ ಸಿಬ್ಬಂದಿಗಳನ್ನು ಹೈರಾಣು ಮಾಡುತ್ತಿದೆ. ಅನೇಕ ಸಿಬ್ಬಂದಿಗಳು ಸೇರಿ ಈ ಡಕೋಟಾ ವಾಹನ ಸ್ಟಾರ್ಟ್ ಮಾಡಲು ಹರಸಾಹಸ ಪಟ್ಟರು. ಸರಿಯಾಗಿ ನಿರ್ವಹಣೆ ಆಗದ ಸರ್ಕಾರದ ಡಕೋಟಾ ವಾಹನಗಳಿಂದ ಸಿಬ್ಬಂದಿಗಳು ಬೇಸತ್ತಿದ್ದಾರೆ. ಶಿಕ್ಷಣ ಇಲಾಖೆಯ ಸರ್ಕಾರಿ ವಾಹನಕ್ಕೆ ಗ್ರಹಣ ಹಿಡಿದಂತಿದೆ. ನಿರ್ವಹಣೆ ಇಲ್ಲದ ವಾಹನಗಳ ಸ್ಥಿತಿಯಿಂದ ಸಿಬ್ಬಂದಿಗಳು ಸಾರ್ವಜನಿಕರು ಸರ್ಕಾರಕ್ಕೆ ಹಾಗೂ ಅಧಿಕಾರಿ ವರ್ಗದವರಿಗೆ ಹಿಡಿಶಾಪ ಹಾಕುವಂತಾಗಿದೆ.
ಒಟ್ನಲ್ಲಿ ಸರ್ಕಾರ ಯಾವುದ್ಯಾವುದಕ್ಕೊ ಸಾಕಷ್ಟು ಹಣ ಖರ್ಚು ಮಾಡುತ್ತೆ. ಸಾರ್ವಜನಿಕ ಸೇವೆಗಾಗಿ ಓಡಾಡುವ ಅಧಿಕಾರಿಗಳ ವಾಹನ ರಿಪೇರಿಗೆ ಹಿಂದೇಟಾಕೋದು ಎಷ್ಟು ಸರಿ ಅನ್ನೊ ಟೀಕೆಗಳು ಕೇಳಿಬರುತ್ತಿವೆ. ಈಗಲಾದ್ರೂ ಈತರದ ಸಮಸ್ಯೆಗಳನ್ನು ಆಲಿಸಿ ಸಮಸ್ಯೆಯಿಂದ ಮುಕ್ತಿ ಪಡೆಯಲಿ ಅನ್ನೋದೇ ನಮ್ಮ ಉದ್ದೇಶ.








