ಬೆಂಗಳೂರು:
ಎಸ್‌ಸಿಎಸ್‌ಪಿ/ಟಿಎಸ್‌ಪಿಗೆ ಮೀಸಲಿಟ್ಟಿದ್ದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಹೋರಾಟ ನಡೆಸುತ್ತಿದ್ದು, ಇದರ ನಡುವಲ್ಲೇ ಸಚಿವ ನಿವಾಸದಲ್ಲಿ ದಲಿತ ನಾಯಕರು ಸಭೆ ಸೇರಿ ಚರ್ಚೆ ನಡೆಸಿದ್ದಾರೆ.
ಗ್ಯಾರಂಟಿಗಳಿಗೆ ದಲಿತರ ಹಣ ನೀಡುವುದರಿಂದ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯ ಮೂಲ ಉದ್ದೇಶ ಈಡೇರಿದಂತೆ ಆಗುವುದಿಲ್ಲ. ಹಾಗಾಗಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ನೀಡದಂತೆ ಮನವಿ ಮಾಡಲು ನಾಯಕರು ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ ನೇತೃತ್ವದಲ್ಲಿ ನಡೆದ ನಡೆದ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಈ ವಿಷಯದ ಬಗ್ಗೆ ಚರ್ಚಿಸಿ, ಸರ್ಕಾರವು ಹಣವನ್ನು ಬೇರೆಡೆಗೆ ತಿರುಗಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.ಸರ್ಕಾರವು ಹಣ ಬೇರೆಡೆಗೆ ತಿರುಗಿಸಿದ ಅನುದಾನವನ್ನು ಅದೇ ಸಮುದಾಯಗಳ ಫಲಾನುಭವಿಗಳಿಗೆ ಬಳಸುತ್ತಿದೆ ಎಂದು ಹೇಳಿಕೊಂಡಿರಬಹುದು, ಆದರೆ ಅದನ್ನು ದೃಢೀಕರಿಸಲು ಯಾವುದೇ ದತ್ತಾಂಶವಿಲ್ಲ ಎಂದು ಶಾಸಕರು ಸಭೆಯಲ್ಲಿ ತಿಳಿಸಿದರು.ಬಜೆಟ್‌ನಲ್ಲಿ ಅಲ್ಪಸಂಖ್ಯಾತರು ಮತ್ತು ಒಬಿಸಿಗಳಿಗೆ ಹಂಚಿಕೆಯಾದ ಅನುದಾನವನ್ನು ಸಮುದಾಯಗಳ ಫಲಾನುಭವಿಗಳಿಗೆ ನಿಧಿಗಾಗಿ ಬಳಸುತ್ತಿಲ್ಲ. ಆದರೆ, ಎಸ್‌ಸಿ/ಎಸ್‌ಟಿಗಳನ್ನೇಕೆ ಹಗುರವಾಗಿ ಪರಿಗಣಿಸಿದೆ? ಎಂದು ಪ್ರಶ್ನಿಸಿದರು.
