ದಲಿತ ಸಂಘಟನೆಗಳ ಒಕ್ಕೂಟದಿಂದ ಸರದಿ ಧರಣಿ ಸತ್ಯಾಗ್ರಹ

ಬೆಂಗಳೂರು:

   ರಾಜ್ಯದಲ್ಲಿ 17 ಬಜೆಟ್ ಗಳನ್ನು ಮಂಡಿಸುತ್ತಿರುವ ಮುಖ್ಯಮಂತ್ರಿಗಳು ಎಸ್.ಸಿ./ಎಸ್.ಟಿ. ಜನಾಂಗಗಳ ಸರ್ವತೋಮುಖ ಅಭಿವೃದ್ಧಿಗಾಗಿ ಮಾತ್ರ ಮೀಸಲಿಟ್ಟಿರುವ ಎಸ್.ಸಿ.ಪಿ./ಟಿ.ಎಸ್.ಪಿ. ಹಣವನ್ನು ಗ್ಯಾರಂಟಿಗಳಂತಹ ಅನ್ಯ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಂಡಿರುವ ತಮ್ಮ ಸರ್ಕಾರದ ದಲಿತ ವಿರೋಧಿ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ.

   ಹೀಗೆ ದುರ್ಬಳಕೆ ಆಗಿರುವ ದಲಿತ ಜನಾಂಗಗಳ ಹಿಂಬಾಕಿ ಹಣವನ್ನು ಇಂದಿನ ಬಜೆಟ್ ಮೂಲಕ ವಾಪಸ್ಸು ಪಡೆದು ಈ ಜನಾಂಗಗಳ ಅಭಿವೃದ್ಧಿಗೆ ಬಳಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ ಎಂದು ಅಧ್ಯಕ್ಷರಾದ ಡಾ. ಎಂ ವೆಂಕಟಸ್ವಾಮಿ ತಿಳಿಸಿದರು. ಹಾಗೆಯೇ 2025-26ರ ಬಜೆಟ್‌ನಲ್ಲಿ ಎಸ್.ಸಿ./ಎಸ್.ಟಿ. ಜನಾಂಗಗಳ ಹಣವನ್ನು ಗ್ಯಾರಂಟಿಗಳಿಗೆ ಅವರ ಬಳಸದೆ ಅಭಿವೃದ್ಧಿಗಾಗಿ ಮಾತ್ರ ಬಳಸುವಂತಾಗಬೇಕು. ಎಸ್.ಸಿ.ಪಿ./ಟಿ.ಎಸ್.ಪಿ. ಕಾಯ್ದೆಯಲ್ಲಿ ಬೇರೆ ಉದ್ದೇಶಗಳಿಗೆ ದುರ್ಬಳಕೆ ಮಾಡಲು ಅವಕಾಶ ಮಾಡಿಕೊಡಿರುವ 7ಡಿ ಕಲಂ ಅನ್ನು ರದ್ದುಪಡಿಸಿದ ಹಾಗೆ 7ಸಿ ಕಲಂ ಅನ್ನು ಸಹಾ ರದ್ದುಪಡಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದರು.

   ಪ್ರತಿಭಟನೆಯಲ್ಲಿ ಅಧ್ಯಕ್ಷರಾದ ವೆಂಕಟಸ್ವಾಮಿ , ಲಯನ್ ಬಾಲಕೃಷ್ಣ, ಸಿ ಎಸ್ ರಘು, ಅರುಣ್ ಟೈಗರ್, ಲಯನ್ ಮಂಜುನಾಥ, ಬನಶಂಕರಿ ನಾಗು, ವೇಲು, ಚಲವಾದಿ ಸುರಿ, ಆರ್ ಚಂದ್ರಶೇಖರ, ರೂಪಕಾಲ, ಜಿಸಿ ವೆಂಕಟರಮಣಪ್ಪ, ಅಂಬರೀಷ್ ಡಿ. ಎಂ , ಪುರುಷೋತ್ತಮ್ ಸೇರಿದಂತೆ ಅನೇಕ ಗಣ್ಯರು ಭಾಗಿ…

Recent Articles

spot_img

Related Stories

Share via
Copy link