ಬೆಂಗಳೂರು
ರಾಜ್ಯದಲ್ಲಿ ಸದ್ಯ ಅಲ್ಲಲ್ಲಿ ಮಳೆ ಶುರುವಾಗಿದೆ. ಬಿಸಿಲಿನಿಂದ ಕಂಗೆಟ್ಟ ಜನರಿಗೆ ಮಳೆ ಕೊಂಚ ರಿಲೀಫ್ ತಂದಿದೆ. ಆದರೆ ನಿರೀಕ್ಷೆಯಂತೆ ಅಂದರೆ ಕೆರೆ, ನದಿಗಳು ತುಂಬುವಂತೆ ಮಳೆಯಾಗಿಲ್ಲ. ಈ ರೀತಿ ಮಳೆಯಾದರೆ ಮಾತ್ರ ರಾಜ್ಯದಲ್ಲಿ ನೀರಿನ ಸಮಸ್ಯೆ ಸುಧಾರಿಸಲು ಸಾಧ್ಯವಾಗಲಿದೆ. ರಾಜ್ಯದ ಬಹುತೇಕ ಕೆರೆ, ನದಿಗಳು ಬರಿದಾಗಿ ಹೋಗಿವೆ.
ಇನ್ನೂ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಕಣ್ಣಳತೆ ದೂರದಲ್ಲಿ ಮಾತ್ರ ನೀರು ಕಾಣಿಸುತ್ತಿದೆ. ರಾಜ್ಯದಲ್ಲಿ ಹಲವೆಡೆ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದರೂ ನಿರೀಕ್ಷಿಸಿದಂತೆ ಮಳೆಯಾಗುತ್ತಿಲ್ಲ. ಆದರೆ ಬೇಸಿಗೆ ಬಿಸಿಲಿಗೆ ನೀರಿನ ಅವಶ್ಯಕತೆ ಹೆಚ್ಚಾಗಿರುವುದರಿಂದ ನಾವು ರಾಜ್ಯದ ಪ್ರಮುಖ ಜಲಾಶಯಗಳಲ್ಲಿನ ನೀರಿನ ಮಟ್ಟವನ್ನು ತಿಳಿಯಬೇಕು.
ಹಾಗಾದರೆ ಕೆಆರ್ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಏಪ್ರಿಲ್ 20ರಂದು ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
1. ಕೆಆರ್ಎಸ್ ಜಲಾಶಯ
ಗರಿಷ್ಠ ನೀರಿನ ಮಟ್ಟ -38.04 ಮೀಟರ್
ಇಂದಿನ ನೀರಿನ ಮಟ್ಟ- 12.28 ಟಿಎಂಸಿ
2. ಹಾರಂಗಿ ಜಲಾಶಯ
ಗರಿಷ್ಠ ನೀರಿನ ಮಟ್ಟ – 871.38 ಮೀಟರ್
ಇಂದಿನ ನೀರಿನ ಮಟ್ಟ – 3.13 ಟಿಎಂಸಿ
3. ಆಲಮಟ್ಟಿ ಜಲಾಶಯ
ಗರಿಷ್ಠ ನೀರಿನ ಮಟ್ಟ- 519.60 ಮೀಟರ್
ಇಂದಿನ ನೀರಿನ ಮಟ್ಟ – 33.07 ಟಿಎಂಸಿ
4. ತುಂಗಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ – 497.71 ಮೀಟರ್
ಇಂದಿನ ನೀರಿನ ಮಟ್ಟ-03.87 ಟಿಎಂಸಿ
5. ಮಲಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ – 633.80 ಮೀಟರ್
ಇಂದಿನ ನೀರಿನ ಮಟ್ಟ – 08.39 ಟಿಎಂಸಿ
6. ಲಿಂಗನಮಕ್ಕಿ ಜಲಾಶಯ
ಗರಿಷ್ಠ ನೀರಿನ ಮಟ್ಟ – 554.44 ಮೀಟರ್
ಇಂದಿನ ನೀರಿನ ಮಟ್ಟ – 24.64 ಟಿಎಂಸಿ
7. ಕಬಿನಿ ಜಲಾಶಯ
ಗರಿಷ್ಠ ನೀರಿನ ಮಟ್ಟ – 698.13 ಮೀಟರ್
ಇಂದಿನ ನೀರಿನ ಮಟ್ಟ – 8.10 ಟಿಎಂಸಿ
8. ಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ – 657.73 ಮೀಟರ್
ಇಂದಿನ ನೀರಿನ ಮಟ್ಟ – 17.74 ಟಿಎಂಸಿ
9. ಘಟಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ – 662.91 ಮೀಟರ್
ಇಂದಿನ ನೀರಿನ ಮಟ್ಟ -19.91 ಟಿಎಂಸಿ
10. ಹೇಮಾವತಿ ಜಲಾಶಯ
ಗರಿಷ್ಠ ನೀರಿನ ಮಟ್ಟ -890.58 ಮೀಟರ್
ಇಂದಿನ ನೀರಿನ ಮಟ್ಟ – 9.87 ಟಿಎಂಸಿ
11. ಸೂಫಾ ಜಲಾಶಯ
ಗರಿಷ್ಠ ನೀರಿನ ಮಟ್ಟ- 564.00 ಮೀಟರ್
ಇಂದಿನ ನೀರಿನ ಮಟ್ಟ- 43.59 ಟಿಎಂಸಿ
12. ಹಾರಂಗಿ ಜಲಾಶಯ
ಗರಿಷ್ಠ ನೀರಿನ ಮಟ್ಟ- 871.38 ಮೀಟರ್
ಇಂದಿನ ನೀರಿನ ಮಟ್ಟ- 3.11 ಟಿಎಂಸಿ
13. ವರಾಹಿ ಜಲಾಶಯ
ಗರಿಷ್ಠ ನೀರಿನ ಮಟ್ಟ- 594.36 ಮೀಟರ್
ಇಂದಿನ ನೀರಿನ ಮಟ್ಟ- 5.22 ಟಿಎಂಸಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ