ಶಿರಾ:

ನಿರ್ಮಾಣಗೊಂಡ ಕೇವಲ 15 ದಿನಕ್ಕೆ ಡಾಂಬರ್ ರಸ್ತೆಯು ಕಿತ್ತು ಹೋಗಿ ಸಾರ್ವಜನಿಕರ ಸಂಚಾರಕ್ಕೂ ತೊಂದರೆಯಾಗಿದ್ದು, ಈ ಕೂಡಲೇ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ನೂತನ ಡಾಂಬರ್ ರಸ್ತೆ ಮಾಡಿಸುವಂತೆ ಒತ್ತಾಯಿಸಿ ನೇರಲಗುಡ್ಡ ಗ್ರಾಮಸ್ಥರು ಗುರುವಾರ ರಸ್ತೆಯ ಮಧ್ಯದಲ್ಲಿಯೇ ನಿಂತು ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯ ನೇರಲಗುಡ್ಡ ಗ್ರಾಮದ ಗೇಟ್‍ನಿಂದ ಗ್ರಾಮದ ಒಳಗೆ ಹೋಗುವ ರಸ್ತೆಗೆ ಕಳೆದ 15 ದಿನಗಳ ಹಿಂದಷ್ಟೆ ನೂತನ ಡಾಂಬರ್ ರಸ್ತೆ ಮಾಡಲಾಗಿತ್ತು. ರಸ್ತೆಯನ್ನು ನಿರ್ಮಿಸಿ ಇನ್ನೂ 15 ದಿನ ಕಳೆದಿಲ್ಲವಾದರೂ ಕಳಪೆ ಕಾಮಗಾರಿಯಿಂದಾಗಿ ಸದರಿ ರಸ್ತೆಯು ಮಣ್ಣಿನ ರಸ್ತೆಯಂತೆ ಕಿತ್ತು ಹೋಗುತ್ತಿದ್ದು, ಇದರಿಂದ ಪ್ರಯಾಣಿಕರಿಗೂ ತೊಂದರೆಯಾಗಿ ಸರ್ಕಾರದ ಹಣವೂ ಪೋಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಈ ಕೂಡಲೇ ಸದರಿ ರಸ್ತೆಯನ್ನು ನೂತನವಾಗಿ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಜಿಲ್ಲಾ ಸಚಿವರನ್ನು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








