ಸುಪ್ರೀಂ ನೆರವಿನಿಂದ IIT ಧನಬಾದ್ ನಲ್ಲಿ ಸೀಟು ಪಡೆದ ದಲಿತ ಯುವಕ….!

ನವದೆಹಲಿ

ಇತ್ತೀಚಿಗೆ ಸುಪ್ರೀಂಕೋರ್ಟ್ IIT ಧನಬಾದ್ ಸೀಟು ಹಂಚಿಕೆ ಪ್ರಾಧಿಕಾರಕ್ಕೆ ನಿರ್ದೇಶನ ನೀಡುವ ಮೂಲಕ ಉತ್ತರ ಪ್ರದೇಶದ 18 ವರ್ಷದ ದಲಿತ ಯುವಕ ಅತುಲ್ ಕುಮಾರ್ ಅವರು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಕೋರ್ಸ್ ಸೇರಲು ಅವಕಾಶ ಮಾಡಿಕೊಟ್ಟಿತ್ತು. ಬಡ ಕುಟುಂಬಕ್ಕೆ ಸೇರಿದ ಕುಮಾರ್ ತಂದೆ ದಿನಗೂಲಿ ನೌಕರನಾಗಿದ್ದು, 17,500 ಶುಲ್ಕ ಪಾವತಿಸಲು ಗಡುವು ಮೀರಿದ ನಂತರ ಐಐಟಿ ಧನ್‌ಬಾದ್‌ನಲ್ಲಿ ಸೀಟು ಕಳೆದುಕೊಂಡಿದ್ದರು.

ಸುಚಿತ್ರಾ ಕಲ್ಯಾಣ್ ಮೊಹಂತಿ ಅವರೊಂದಿಗಿನ ಸಂದರ್ಶನದಲ್ಲಿ, ಕುಮಾರ್ ತಮ್ಮ ಹೋರಾಟದ ಪ್ರಯಾಣ ಮತ್ತು ಆರ್ಥಿಕ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಆಯ್ದ ಭಾಗಗಳು ಇಲ್ಲಿದೆ.

ಸುಪ್ರೀಂಕೋರ್ಟ್ ನನ್ನ ರಕ್ಷಣೆಗೆ ಬಂದು ಸಹಾಯ ಮಾಡಿದೆ ಎಂಬುದರಲ್ಲಿ ಸಂದೇಹವಿಲ್ಲ. ನಾನು ಐಐಟಿ ಧನಬಾದ್‌ಗೆ ಪ್ರವೇಶ ಪಡೆಯಲು ಸಿಜೆಐ ಅವರ ಆದೇಶ ತುಂಬಾ ನೆರವಾಗಿದೆ. ಅವರು ಇಲ್ಲದಿದ್ದರೆ, ನಾನು ಸೀಟು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಯಾವುದೇ ಯಶಸ್ವಿ ಅಭ್ಯರ್ಥಿಗೆ ಯಾವುದೇ ಅಡಚಣೆ ಉಂಟಾಗಬಾರದು ಎಂದು ಸಿಜೆಐ ಹೇಳಿದ್ದರು. ನಮ್ಮ ಸಿಜೆಐ ಸರ್ ಅವರಿಗೆ ನಾನು ಋಣಿಯಾಗಿದ್ದೇನೆ. ಕೃತಜ್ಞನಾಗಿದ್ದೇನೆ. ಅವರಿಂದಾಗಿ ನನಗೆ ಮತ್ತೆ ಅಲ್ಲಿ ಸೀಟು ಸಿಕ್ಕಿತು.

ಒಂದು ವೇಳೆ ಸುಪ್ರೀಂಕೋರ್ಟ್ ಈ ರೀತಿ ಆದೇಶ ನೀಡಿದ್ದರೆ, ನನ್ನ ಜೀವನದಲ್ಲಿ ಸ್ವಲ್ಪ ವಿಷಾದಿವಿರುತಿತ್ತು. ಐಐಟಿ ಧನ್‌ಬಾದ್‌ನಿಂದ ನನ್ನ ಬಿ ಟೆಕ್ ಮಾಡಲು ಸಾಧ್ಯವಾಗಲಿಲ್ಲ ಅನ್ನುವ ಕೊರಗು ಕಾಡುತಿತ್ತು. ಮತ್ತೊಂದೆಡೆ, ನಾನು JEE ಮೇನ್ಸ್ 2025 ಪರೀಕ್ಷೆಗೆ ಕುಳಿತುಕೊಳ್ಳಲು ಪ್ರಯತ್ನಿಸಬಹುದಿತ್ತು.

ಸಿದ್ಧತೆಗಳಲ್ಲಿ ಕೆಲವು ಏರಿಳಿತಗಳಿತ್ತು. ಪ್ರಸಕ್ತ ವರ್ಷದ ಪ್ರಶ್ನೆಗಳನ್ನು ಊಹಿಸುವುದು ಕಷ್ಟ. ಆದರೆ ನನ್ನ ಕಠಿಣ ಪರಿಶ್ರಮದ ಫಲವಾಗಿ ಆಳವಾದ ತಯಾರಿ ನಡೆಸಿ, ಉತ್ತಮ ಅಂಕಗಳನ್ನು ಗಳಿಸಿದೆ. ಯಶಸ್ಸಿಗೆ ಶಾರ್ಟ್ ಕಟ್ ಇಲ್ಲ. 

ನನ್ನ ಪರಿಸ್ಥಿತಿಯನ್ನು ಲೆಕ್ಕಿಸದೆ ನನ್ನ ಪೋಷಕರು ನನ್ನ ಅಧ್ಯಯನವನ್ನು ತುಂಬು ಹೃದಯದಿಂದ ಬೆಂಬಲಿಸಿದ್ದಾರೆ. ಅವರು ಯಾವಾಗಲೂ ನನ್ನನ್ನು ಪ್ರೋತ್ಸಾಹಿಸುತ್ತಿದ್ದರು. ನನಗೆ ಒಂದು ಗುರಿ ಇತ್ತು: ಕಷ್ಟಪಟ್ಟು ಅಧ್ಯಯನ ಮಾಡಿದೆ. 12ನೇ ತರಗತಿವರೆಗೆ ಅದು ಗಣಿತವಾಗಿತ್ತು. ಆದರೆ advanced JEEಗೆ ಕೋಚಿಂಗ್ ತೆಗೆದುಕೊಳ್ಳಲು ಪ್ರಾರಂಭಿಸಿದಾಗ, ಗಣಿತಕ್ಕೆ ಸಂಬಂಧಿಸಿದ ತೊಂದರೆಗಳು ಇನ್ನಷ್ಟು ಗಂಭೀರವಾದವು. ಆ ನಂತರ ಕೆಮಿಸ್ಟ್ರಿ ನನ್ನ ನೆಚ್ಚಿನ ವಿಷಯವಾಯಿತು. ಆದರೆ ನಾನು ಗಣಿತವನ್ನು ನಿರ್ಲಕ್ಷಿಸಲಿಲ್ಲ.

 

ನನ್ನ ಬಿ ಟೆಕ್ ನಂತರ, ಉತ್ತಮ ಸ್ಥಾನದಲ್ಲಿರುವ ಕಂಪನಿಯಲ್ಲಿ ಕೆಲಸ ಮಾಡಲು ಬಯಸುತ್ತೇನೆ ಮತ್ತು ಕೆಲವು ವರ್ಷಗಳನ್ನು ಪೂರ್ಣಗೊಳಿಸಿದ ನಂತರ, ನನ್ನ ಬಳಿ ಸ್ವಲ್ಪ ಹಣವಿದ್ದರೆ ಸ್ಟಾರ್ಟ್-ಅಪ್ ಪ್ರಾರಂಭಿಸಲು ಪ್ರಯತ್ನಿಸುತ್ತೇನೆ.

Recent Articles

spot_img

Related Stories

Share via
Copy link
Powered by Social Snap