ಹಂದಿಗುಂದ :
ಜೀವನದಲ್ಲಿ ಕಷ್ಟ ಕಾರ್ಪಣ್ಯಗಳು ಬಂದಾಗ ಮಾತ್ರ ದೇವರಿಗೆ ಮೊರೆ ಹೋಗಬಾರದು ಪ್ರತಿದಿನವೂ ದೇವರನ್ನು ಸ್ಮರಿಸಬೇಕು ದೇವರು ಪ್ರತಿ ಕಣಕಣದಲ್ಲೂ ಇದ್ದಾನೆಂದು ಬಂಡಿಗಣಿ ನೀಲ ಮಾಣಿಕ ಮಠದ ದಾನೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಗ್ರಾಮದ ಶ್ರೀ ಸಿದ್ದೇಶ್ವರ ಮಠದ ಆವರಣದಲ್ಲಿ ರವಿವಾರ ಐದನೆಯ ಪಾರಮಾರ್ಥಿಕ ಸಪ್ತಾಹದ ನಿಮಿತ್ಯವಾಗಿ ಆಶೀರ್ವಚನ ನೀಡಿದವರು ಮಾನವ ಜನ್ಮ ದೊಡ್ಡದು ಅಧರ್ಮ ಅನ್ಯಾಯ ಹುಸಿ ನುಡಿಯಬಾರದು. ಸತ್ಯವನ್ನು ಹೇಳಿ ಸತ್ಕಾರ್ಯವನ್ನು ಮಾಡಬೇಕೆಂದರು.
ಭಾವಲತ್ತಿ ವಿಜಯ ವೇದಾಂಗ ಶ್ರೀಗಳು ಮಾತನಾಡಿ ಸುಕ್ಷೇತ್ರ ಬಂಡಿಗಣಿ ಮಠವು ಜ್ಞಾನ,ಹಾಗೂ ದಾಸೋಹ ಪರಂಪರೆಯ ಭಕ್ತಿ ಪ್ರಧಾನ ಮಠ. ಭಕ್ತರ ಕಷ್ಟಗಳನ್ನು ದೂರ ಮಾಡಿ ಸನ್ಮಾರ್ಗದಲ್ಲಿ ಕೊಂಡೊಯ್ಯುವ ಶ್ರೀಮಠದ ಕಾರ್ಯ ಶ್ಲಾಘನೀಯ ಎಂದರು.ಶನಿವಾರ ರಾತ್ರಿ ಶಿವ ಭಜನೆಯೊಂದಿಗೆ ಜಾಗರಣೆ ನಡೆಯಿತು. ದಾನೇಶ್ವರ ಮಹಾಸ್ವಾಮಿಗಳು ಪುರ ಪ್ರವೇಶ ಮಾಡುತ್ತಿದ್ದಂತೆ ಮೊದಲು ಭಕ್ತರು ಸಿಡಿಮದ್ದು ಸಿಡಿಸುತ್ತಾ, ಕರಡಿಮಜಲು, ಕಹಳೆ ಓದುತ್ತಾ ಹಲಗೆವಾದನ ಜೊತೆಗೆ ಶ್ರೀ ಬಸವೇಶ್ವರ ವೃತ್ತದಿಂದ ಪಾದಯಾತ್ರೆಯ ಮೂಲಕ ಭಕ್ತರು ಅದ್ದೂರಿಯಾಗಿ ಮಹಿಳೆಯರು ಆರತಿ ಬೆಳಗಿ ಬರಮಾಡಿಕೊಂಡರು ಶ್ರೀ ಸಿದ್ದೇಶ್ವರರ ಕರ್ತೃ ಗದ್ದುಗೆ ದರ್ಶನ ಪಡೆದರು.
ನಂತರ ದಾಸೋಹ ಚಕ್ರವರ್ತಿ ಶ್ರೀ ದಾನೇಶ್ವರ ಅಪ್ಪಾಜಿಯವರಿಗೆ “ನಿಂದೆ ಆಡುವವರ ಗಂಡ” ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು. ಬೇರೆ ಬೇರೆ ಹಳ್ಳಿಗಳಿಂದ ಆಗಮಿಸಿದ ಭಕ್ತರು ಶ್ರೀ ಬಂಡಿಗಣಿ ಮಠ ಹಾಗೂ ಮಠದ ಶ್ರೀಗಳ ಬಗೆಗೆ ಇರುವ ಒಡನಾಟದ ಅನುಭವ ಹೇಳಿ, ಅನುಭವ ಕೇಳಿದರು. ಈ ಸಂದರ್ಭದಲ್ಲಿ ವೇದಮೂರ್ತಿ ಗುರುಲಿಂಗಯ್ಯ ಹಿರೇಮಠ, ಮಲ್ಲಿಕಾರ್ಜುನ ಖಾನಗೌಡ ,ಸಿದ್ದನಗೌಡ ಪಾಟೀಲ, ಮಲ್ಲಪ್ಪ ತಮದಡ್ಡಿ, ತಮ್ಮಣ್ಣ ನೀಲಗಿ, ಸುರೇಶ ಬಿ ಪಾಟೀಲ, ಶ್ರೀಕಾಂತ ಬಡಿಗೇರ, ಅಶೋಕ ಕಾಪಸಿ, ಸಂಗಪ್ಪ ಚಿಂಚಲಿ, ಶ್ರೀಶೈಲ ಚಿಂಚಲಿ, ಮಹಾಂತೇಶ ಚೌಗಲಾ, ಬಸವರಾಜ ನಾಯಕ ,ಲಕ್ಕಪ್ಪ ಕರಿಗಾರ, ದಯಾನಂದ ಬಂದಿ, ಪ್ರಕಾಶ ಬಂದಿ ಇದ್ದರು.