ಜಗಳೂರು :
ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಹೊಂದಾಣಿಕೆಯಿಲ್ಲದೇ ಸಮ್ಮಿಶ್ರ ಸರ್ಕಾರ ಇಂದೋ ನಾಳೆ ಬೀಳುವ ಸ್ಥಿತಿಯಲ್ಲಿರುವುದನ್ನು ಮನಗಂಡು, ಹತಾಶ ಮನೋಭಾವನೆಯಿಂದ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ದ ಧಂಗೆ ಹೇಳುವ ಹೇಳಿಕೆ ನೀಡಿರುವುದು ಖಂಡನೀಯ ಯುವ ಮೋರ್ಚದ ಅಧ್ಯಕ್ಷ ಬಿದರಕೆರೆ ರವಿಕುಮಾರ್ ಆಕೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಬಿಜೆಪಿ ಯುವ ಮೋರ್ಚದ ನೇತೃತ್ವದಲ್ಲಿ ಶುಕ್ರುವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಮುಖ್ಯಮಂತ್ರಿಗಳ ಹೇಳಿಕೆಯನ್ನು ಖಂಡಿಸಿದರು.
ಸರ್ಕಾರ ನಡೆಸಬೇಕಾದ ಮುಖ್ಯಮಂತ್ರಿ ಕುಮಾರಸ್ವಾಮಿ ನಮ್ಮ ನಾಯಕರಾದ ಯಡಿಯೂರ ಪ್ಪನವರ ವಿರುದ್ದ ಹೇಳಿಕೆ ನೀಡಿರುವುದು ಖಂಡನೀಯ. ತಮ್ಮ ಆಂತರಿಕ ವಿಚಾರಗಳನ್ನು ಸರಿಪಡಿಸಿಕೊಂಡು ಸರ್ಕಾರ ನಡೆಸದಿದ್ದರೆ, ಕೂಡಲೇ ರಾಜೀನಾಮೆ ನೀಡಿ ಯಡಿಯೂರ ಪ್ಪನವರಿಗೆ ಅವಕಾಶ ಮಾಡಿಕೊಡಲಿ ಎಂದು ಒತ್ತಾಯಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಡಿ.ವಿ.ನಾಗಪ್ಪ ಮಾತನಾಡಿ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಜವಾಬ್ದಾಯುತ ಸ್ಥಾನದಲ್ಲಿದ್ದು ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಬೇಕಾದ ಇವರೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ಪಕ್ಷದ ವಿರುದ್ದ ಧಂಗೆ ಹೇಳಿ ಎಂದು ಸಾರ್ವಜನಿಕರಿಗೆ ಪ್ರಚೋದನೆ ನೀಡಿ ದ್ದಾರೆ. ಈ ಹೇಳಿಕೆಯನ್ನು ವಾಪಸ್ ಪಡೆಯದೇ ಇದ್ದಲ್ಲಿ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯ ಬಿಜೆಪಿ ಘಟಕದ ವತಿಯಿಂದ ರಾಷ್ಟ್ರಪತಿಯವರಿಗೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್.ಕೆ.ಮಂಜುನಾಥ್, ತಾಲೂಕು ಪಂಚಾಯ್ತಿ ಸದಸ್ಯರಾದ ಸಿದ್ದೇಶ್, ಶಂಕರ್ನಾ ಯ್ಕ, ಪಟ್ಟಣ ಪಂಚಾಯ್ತಿ ಸದಸ್ಯರಾದ ಎಂಎಲ್ ಎ ತಿಪ್ಪೇಸ್ವಾಮಿ, ಪಾಪಲಿಂಗ, ಸಿದ್ದಪ್ಪ, ಮುಖಂ ಡರಾದ ಬಿಸ್ತುವಳ್ಳಿ ಬಾಬು, ಸೂರಲಿಂಗಪ್ಪ, ಸೋಮನಹಳ್ಳಿ ಶ್ರೀನಿವಾಸ್, ಗೊಲ್ಲರಹಟ್ಟಿ ತಿಪ್ಪೇಶ್, ಪಾತಲಿಂಗ, ಇಂದ್ರೇಶ್, ಗೋಗುದ್ದು ಬಸವರಾಜ್, ನಾಗರಾಜ್, ಚಂದ್ರಪ್ಪ, ರಮೇಶ್, ಮಹೇಶ್, ಸ್ಲಂ ಮೋರ್ಚ ಓಬಳೇಶ್, ಶ್ಯಾಮಣ್ಣ, ರುದ್ರಮುನಿ, ಸತೀಶ್ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ