ಕಂಡ ಕಂಡಲ್ಲಿ ಡಾರ್ಲಿಂಗ್ ಅನ್ನುವ ಮುನ್ನ ಎಚ್ಚರ….!

 ನವದೆಹಲಿ

     ಕಂಡ ಕಂಡಲ್ಲಿ ಡಾರ್ಲಿಂಗ್ ಅನ್ನೋ ಪದ ಬಳಸುವ ಮುನ್ನ ಎಚ್ಚರ. ನಿಮ್ಮ ಪ್ರೀತಿ ಪಾತ್ರರನ್ನು ಡಾರ್ಲಿಂಗ್‌ ಎಂದು ಕರೆದು ಪ್ರೀತಿಯಿಂದ ಮಾತನಾಡಿ, ಆದರೆ ಅದೇ ಪದವನ್ನು ಅಭ್ಯಾಸ ಮಾಡಿಕೊಂಡರೆ ನಿಮಗೆ ತೊಂದರೆ. ಡಾರ್ಲಿಂಗ್..ಡಾರ್ಲಿಂಗ್.. ಎಂದು ಅನೇಕ ಬಾರಿ ಕರೆದು ಅದನ್ನೇ ಅಭ್ಯಾಸ ಮಾಡಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಬಾಯಿತಪ್ಪಿ ಕೂಡ ಡಾರ್ಲಿಂಗ್ ಎನ್ನಬೇಡಿ. ಈ ಡಾರ್ಲಿಂಗ್ ಎನ್ನುವ ಪದ ಅಷ್ಟೊಂದು ಅಪಾಯಕಾರಿನಾ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

     ನಿಮ್ಮ ಪ್ರೀತಿ ಪಾತ್ರರು ಅಥವಾ ನಿಮ್ಮ ಆತ್ಮೀಯರನ್ನು ಬಿಟ್ಟು ಅಪರಿಚಿತರನ್ನು ಡಾರ್ಲಿಂಗ್​ ಎಂದು ಕರೆದರೆ ಕ್ರಿಮಿನಲ್​ ಅಪರಾಧವಾಗುತ್ತದೆ ಎಂದು ಕೋಲ್ಕತ್ತಾ ಹೈಕೋರ್ಟ್​ ತಿಳಿಸಿದೆ. ಮಹಿಳಾ ಪೇದೆಯೊಬ್ಬರ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಕೋಲ್ಕತ್ತಾ ಹೈಕೋರ್ಟ್​ ಅಪರಿಚಿತ ಮಹಿಳೆಯರನ್ನು ಡಾರ್ಲಿಂಗ್​ ಎಂದು ಕರೆದರೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ದಾಖಲಾಗುತ್ತದೆ ಎಂದು ಕೋರ್ಟ್​ ಹೇಳಿದೆ. ಐಪಿಸಿ ಸೆಕ್ಷನ್​ 354A ಮತ್ತು 509ರ ಅಡಿಯಲ್ಲಿ ಇದು ಕ್ರಿಮಿನಲ್​ ಅಪರಾಧವಾಗುತ್ತದೆ ಎಂದು ಕೋರ್ಟ್‌ ವಿವರಿಸಿದೆ.

    ಮದ್ಯ ಸೇವಿಸಿದ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ಕರ್ತವ್ಯದಲ್ಲಿದ್ದ ಮಹಿಳಾ ಪೇದೆಗೆ ಡಾರ್ಲಿಂಗ್ ಎಂದು ಕರೆದಿರುವ ಪ್ರಕರಣ ಕೋಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್​ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಜೆ ಸೇನ್​ಗುಪ್ತಾ ವಾದ-ಪ್ರತಿವಾದಗಳನ್ನು ಆಲಿಸಿ ಪರಿಚಿತರನ್ನು ಡಾರ್ಲಿಂಗ್​ ಎಂದು ಕರೆದರೆ. ಸೆಕ್ಷನ್​ 354A ಅಡಿಯಲ್ಲಿ ಲೈಂಗಿಕ ಕಿರುಕುಳ ಅಪರಾಧಕ್ಕೆ ಇದು ಸೇರುತ್ತದೆ ಎಂದು ಹೇಳಿದ್ದಾರೆ.

    ಕೋಲ್ಕತ್ತಾ ಹೈಕೋರ್ಟ್ ಪ್ರಕಾರ ಯಾವ ವ್ಯಕ್ತಿಯೂ ಮಹಿಳೆಯನ್ನು ನಿಂದಿಸುವಂತಿಲ್ಲ. ಪರಿಚಿತ ಮಹಿಳೆ, ಪೊಲೀಸ್​​ ಪೇದೆ ಅಥವಾ ಯಾರೇ ಆಗಲಿ, ಆಕೆಯನ್ನು ನಿಂದಿಸುವ ಉದ್ದೇಶದಿಂದ ಡಾರ್ಲಿಂಗ್​ ಎಂದು ಕರೆದ ವ್ಯಕ್ತಿ ಕುಡಿದಿರಲಿ ಅಥವಾ ಇಲ್ಲದಿರಲಿ, ಯಾರೇ ಆಗಲಿ ಅವರ ವಿರುದ್ಧ ಸೆಕ್ಷನ್​ 354A ಅಡಿಯಲ್ಲಿ ಲೈಂಗಿಕ ಕಿರುಕುಳ ಅಡಿಯಲ್ಲಿ ಪ್ರಕರಣ ದಾಖಲಾಗಲಿದೆ. ಅಪರಿಚಿತರಿಗೆ ಡಾರ್ಲಿಂಗ್​ ಎನ್ನುವುದು ಆಕ್ಷೇಪಾರ್ಹ ಎಂದು ಕೋಲ್ಕತ್ತಾ ಹೈಕೋರ್ಟ್‌ ಪೀಠವು ವಿವರಿಸಿದೆ.

    ಕಳೆದ ವರ್ಷ ದುರ್ಗಾ ಪೂಜೆಯ ಹಿಂದಿನ ದಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮಹಿಳಾ ಕಾನ್‌ಸ್ಟೆಬಲ್ ಮತ್ತು ಇತರ ಸಿಬ್ಬಂದಿಗಳನ್ನು ಒಳಗೊಂಡ ಪೊಲೀಸ್ ತಂಡವು ಕೋಲ್ಕತ್ತಾದ ಲಾಲ್ ಟಿಕ್ರೆ ಕಡೆಗೆ ತೆರಳುತ್ತಿದ್ದರು. ಈ ವೇಳೆ ಪೊಲೀಸರಿಗೆ ವ್ಯಕ್ತಿಯೊಬ್ಬ ಗಲಾಟೆ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತು.

    ಆ ಆರೋಪಿಯನ್ನು ಬಂಧಿಸಿ ಕೆಲವು ಪೊಲೀಸರು ಠಾಣೆಗೆ ಕರೆದೊಯ್ದರು ಬಳಿಕ ಮಹಿಳಾ ಕಾನ್‌ಸ್ಟೆಬಲ್ ಸೇರಿದಂತೆ ಒಂದಿಬ್ಬರು ಪೊಲೀಸರು ಸ್ಥಳದಲ್ಲೇ ಇದ್ದರು ಕತ್ತಲಾದ ಕಾರಣ ಸಮೀಪದ ಅಂಗಡಿಯೊಂದರ ಬೆಳಕಿನಲ್ಲಿ ನಿಂತಿದ್ದರು.

   ಈ ವೇಳೆ ಅಲ್ಲಿಗೆ ಬಂದ ವ್ಯಕ್ತಿ ಮಹಿಳಾ ಕಾನ್‌ಸ್ಟೆಬಲ್ ಅನ್ನು ನಿಂದಿಸುವ ಉದ್ದೇಶದಿಂದ ಡಾರ್ಲಿಂಗ್‌ ಎಂದು ಕರೆದಿದ್ದಾನೆ. ಈ ಪ್ರಕರಣ ಕೋರ್ಟ್‌ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಕೋರ್ಟ್ ಇದೊಂದು ಕ್ರಿಮಿನಲ್‌ ಪ್ರಕರಣ ಎಂದು ಪರಿಗಣಿಸಿ ಆರೋಪಿಗೆ ಮೂರು ತಿಂಗಳು ಜೈಲು ಶಿಕ್ಷೆ ಹಾಗೂ ಸಾವಿರ ರೂಪಾಯಿ ದಂಡ ವಿಧಿಸಿದೆ ಎಂದು ವರದಿಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap