ಬೆಂಗಳೂರು:
ದರ್ಶನ್ ರನ್ನು ಭೇಟಿಯಾಗಲು ಬಂದ ವಿಜಯಲಕ್ಷ್ಮಿ ಹಣ್ಣು ಹಂಪಲುಗಳನ್ನು ತಂದು ಕೊಟ್ಟಿದ್ದಾರೆ.ಜೊತೆಗೆ ಪ್ರಕರಣದ ಬಗ್ಗೆ ಪತಿ ಜೊತೆ ಮಾತನಾಡಿರುವ ವಿಜಯಲಕ್ಷ್ಮಿ ಪತಿಗೆ ಧೈರ್ಯ ಹೇಳಿಬಂದಿದ್ದಾರೆ. ಈ ವೇಳೆ ದರ್ಶನ್ ಅಳಿಯ ಕೂಡಾ ಜೊತೆಗಿದ್ದರು. ದರ್ಶನ್ ನ್ಯಾಯಾಂಗ ಬಂಧನ ಅವಧಿ ನಾಳೆಗೆ ಮುಕ್ತಾಯವಾಗಲಿದ್ದು ಈ ಹಿನ್ನಲೆಯಲ್ಲಿ ವಿಜಯಲಕ್ಷ್ಮಿ ಭೇಟಿ ನೀಡಿ ಗಂಡನಿಗೆ ಧೈರ್ಯ ಹೇಳಿದ್ದಾರೆ.
ಇದರ ಜೊತೆಗೆ ವಿಜಯಲಕ್ಷ್ಮಿ ತರುಣ್ ಸುಧೀರ್ ಮತ್ತು ಸೋನಾಲ್ ಮದುವೆ ಬಗ್ಗೆ ದರ್ಶನ್ ಗೆ ವಿಜಯಲಕ್ಷ್ಮಿ ಮಾಹಿತಿ ನೀಡಿದ್ದಾರೆ. ಇದಕ್ಕೆ ದರ್ಶನ್ ಕೂಡಾ ಇಬ್ಬರಿಗೂ ಒಳ್ಳೆಯದಾಗಲಿ ಎಂದು ಹರಸಿದ್ದಾರೆ ಎನ್ನಲಾಗಿದೆ. ತರುಣ್ ಮತ್ತು ಸೋನಾಲ್ ಮದುವೆಗೆ ದರ್ಶನ್ ಅವರೇ ಮುಖ್ಯ ಕಾರಣ. ಆದರೆ ಇಬ್ಬರ ಮದುವೆಗೆ ದರ್ಶನ್ ರೇ ಇಲ್ಲ ಎನ್ನುವುದು ಎಲ್ಲರ ಬೇಸರಕ್ಕೆ ಕಾರಣವಾಗಿತ್ತು.
ಆದರೆ ಈಗ ನವ ವಿವಾಹಿತರಿಗೆ ದರ್ಶನ್ ಜೈಲಿನಿಂದಲೇ ಹಾರೈಸಿದ್ದಾರೆ. ಮದುವೆ ಬಳಿಕವೂ ಮಾಧ್ಯಮಗಳ ಜೊತೆ ಮಾತನಾಡುವಾಗ ತರುಣ್ ಮದುವೆಗೆ ದರ್ಶನ್ ಬರಲಾಗಲಿಲ್ಲ ಎಂಬ ಬೇಸರ ಹೊರಹಾಕಿದ್ದರು. ತಮ್ಮ ಮದುವೆ ಆಮಂತ್ರಣವನ್ನೂ ತರುಣ್ ಮೊದಲು ದರ್ಶನ್ ಗೇ ನೀಡಿದ್ದರು.