ಬೆಂಗಳೂರು :
ಶೀಘ್ರದಲ್ಲೇ ನಟ ದರ್ಶನ್‌ಗೆ ಜಾಮೀನು ಸಿಗುತ್ತದೆ ಎನ್ನುವ ನಿರೀಕ್ಷೆ ಕೆಲವರಲ್ಲಿದೆ. ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 27ಕ್ಕೆ ಮುಂದೂಡಲಾಗಿದೆ. ಅದು ದರ್ಶನ್ ಅಭಿಮಾನಿಗಳಿಗೆ ಸಿಹಿಸುದ್ದಿ ಕಂಡಿತ ಸಿಗುತ್ತದೆ ಎಂದು ಎನ್ನಲಾಗ್ತಿದೆ. ವಕೀಲರು ಕೂಡ ಇದೇ ಭರವಸೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅಭಿಮಾನಿಗಳ ಸಂಭ್ರಮ ಹೆಚ್ಚಾಗಿದೆ. ಇದೆಲ್ಲದರ ನಡುವೆ ಬಳ್ಳಾರಿ ಜೈಲಿನಿಂದ ದರ್ಶನ್ ಬೆಂಗಳೂರಿಗೆ ಯಾವ ಮಾರ್ಗದಲ್ಲಿ ಬರ್ತಾರೆ? ಎನ್ನುವ ಬಗ್ಗೆ ಬಿಸಿಬಿಸಿ ಚರ್ಚೆ ಆಗ್ತಿದೆ.
ಹೆಲಿಕಾಪ್ಟರ್ ಮೂಲಕ ದರ್ಶನ್ ಬಳ್ಳಾರಿಯಿಂದ ಬೆಂಗಳೂರಿಗೆ ಬರ್ತಾರೆ, ಈಗಾಗಲೇ ಹೆಲಿಕಾಪ್ಟರ್ ಬುಕ್ ಮಾಡುವ ಪ್ರಯತ್ನ ಶುರುವಾಗಿದೆ. ಅದಕ್ಕಾಗಿ ಅನುಮತಿ ಪಡೆದು ಕೊಳ್ಳುವ ಕೆಲಸ ಆರಂಭವಾಗಿದೆ ಎಂದು ವರದಿಯಾಗಿದೆ. ದರ್ಶನ್ ಯಾವುದೇ ತಪ್ಪು ಮಾಡಿಲ್ಲ. ಅವರು ಖಂಡಿತ ಬಿಡುಗಡೆ ಆಗಿ ಬರ್ತಾರೆ. ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಆರ್‌ಆರ್ ನಗರದ ಮನೆ ತಲುಪಲು ಒಂದಿಡಿ ದಿನ ಬೇಕು ಎಂದು ಕೆಲ ದಿನಗಳ ಹಿಂದೆ ದರ್ಶನ್ ಆಪ್ತ ಮಹೇಶ್ ಹೇಳಿದ್ದರು.
ನಟ ದರ್ಶನ್‌ಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಬಿಡುಗಡೆ ಆಗುವ ದಿನ ಅಭಿಮಾನಿಗಳು ಮೆರವಣಿಗೆ ಮೂಲಕ ಮನೆಗೆ ಕರೆತರುತ್ತಾರೆ. ಹಾಗಾಗಿ ಟ್ರಾಫಿಕ್ ಜಾಮ್ ಆಗಿ ಮನೆ ತಲುಪು ಒಂದು ದಿನ ಬೇಕಾಗುತ್ತದೆ ಎಂದು ನಿರ್ದೇಶಕ ಮಹೇಶ್ ವೈಭವಿಕರಿಸಿ ಹೇಳಿದ್ದರು. ಆದರೆ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರವಾಗಿ ತಿಂಗಳಾಗುತ್ತಾ ಬಂತು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆ ಎಂದು ಆರೋಪ ಕೇಳಿಬಂದಿತ್ತು. ಅದಕ್ಕೆ ಸಂಬಂಧಿಸಿದ ಫೋಟೊ ವೈರಲ್ ಆಗಿ ಭಾರೀ ವಿವಾದ ಸೃಷ್ಟಿಯಾಗಿತ್ತು. ಸದ್ಯ ಬಳ್ಳಾರಿ ಜೈಲಿನಲ್ಲಿ ದರ್ಶನ್ ದಿನ ದೂಡುತ್ತಿದ್ದಾರೆ. ಒಂದು ವೇಳೆ ಜಾಮೀನು ಸಿಕ್ಕರೆ ದರ್ಶನ್ ಅವರನ್ನು ಹೆಲಿಕಾಪ್ಟರ್‌ನಲ್ಲಿ ನಗರಕ್ಕೆ ಕರೆತರಲು ಆಪ್ತರು ಚಿಂತಿಸುತ್ತಿದ್ದಾರೆ ಎನ್ನಲಾಗ್ತಿದೆ. ಆದರೆ ಹೆಲಿಕಾಪ್ಟರ್ ಬುಕ್ ಮಾಡುವ ಯಾವುದೇ ಪ್ರಯತ್ನ ನಡೆಯುತ್ತಿಲ್ಲ, ಸದ್ಯಕ್ಕೆ ಕಾನೂನು ಹೋರಾಟ ಮಾತ್ರ ನಡೆಯುತ್ತಿದೆ ಎಂದು ದರ್ಶನ್ ಆಪ್ತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ದರ್ಶನ್ ಜೈಲಿನಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಆರೋಗ್ಯ ಸಮಸ್ಯೆಯಿಂದ ನೋವು ಅನುಭವಿಸುತ್ತಿದ್ದಾರೆ. ಇನ್ನು ರಸ್ತೆ ಮಾರ್ಗವಾಗಿ ಬಂದರೆ ಅಭಿಮಾನಿಗಳು ಮುತ್ತಿಕೊಂಡು ತಡವಾಗುವ ಸಾಧ್ಯತೆಯಿದೆ. ಅಲ್ಲದೇ ದರ್ಶನ್ ಪ್ರಕರಣದಲ್ಲಿ ಇನ್ನು ಆರೋಪಿಯಾಗಿ ಇದ್ದಾರೆ. ಇಂತಹ ಸಮಯದಲ್ಲಿ ಅಭಿಮಾನಿಗಳ ಅಭಿಮಾನದಿಂದ ಮತ್ತಷ್ಟು ಸಮಸ್ಯೆ ಆಗುವುದು ಬೇಡ ಎಂದು ಈ ಲೆಕ್ಕಾಚಾರ ಶುರುವಾಗಿದೆಯಂತೆ.
ಭದ್ರತೆ ದೃಷ್ಟಿಯಿಂದಲೂ ದರ್ಶನ್‌ನ ಹೆಲಿಕಾಪ್ಟರ್‌ನಲ್ಲಿ ಕರೆತರುವುದೇ ಲೇಸು ಎಂದು ಆಪ್ತರು ತೀರ್ಮಾನಿಸಿದ್ದಾರಂತೆ. ದರ್ಶನ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಹಣಕಾಸಿವ ವ್ಯವಹಾರ ಸಂಕಷ್ಟವಾಗಿ ಪರಿಣಮಿಸುವ ಸಾಧ್ಯತೆಯಿದೆ. ಪ್ರಕರಣ ಮುಚ್ಚಿ ಹಾಕಲು ಹಣದ ವ್ಯವಹಾರ ಮಾಡಿರುವ ಬಗ್ಗೆ ಐಟಿ ಅಧಿಕಾರಿಗಳು ವಿಚಾರಣೆಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಜೂನ್ 7ಕ್ಕೆ ಚಿತ್ರದುರ್ಗದಿಂದ ರೇಣುಕಾಸ್ವಾಮಿ ಅಪಹರಣ ನಡೆದಿತ್ತು. ಜೂನ್ 9 ರಂದು ಶವವಾಗಿ ಸಿಕ್ಕಿದ್ದರು. ಜೂನ್ 11ರಂದು ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿತ್ತು. ಬಳಿಕ ಇನ್ನುಳಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈಗಾಗಲೇ ಪ್ರಕರಣ ಸಂಬಂಧ ಪೊಲೀಸರು 3991 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.