ಬೇಲ್ ಸಿಗುವ ಹುಮ್ಮಸಿನಲ್ಲಿದ್ದ ದರ್ಶನ್‌ಗೆ ನಿರಾಸೆ….!

ಬಳ್ಳಾರಿ :

   ನಟ ದರ್ಶನ್ ಅವರು ಶುಕ್ರವಾರ  ಜಾಮೀನು ಸಿಗುವ ನಿರೀಕ್ಷೆಯಲ್ಲಿ ಇದ್ದರು. ಆದರೆ, ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ಪರ ವಕೀಲರು ಸಮಯ ಕೇಳಿದ್ದರಿಂದ ಅರ್ಜಿ ವಿಚಾರಣೆ ಸೆಪ್ಟೆಂಬರ್ 30ಕ್ಕೆ ಮುಂದೂಡಿಕೆ ಆಗಿದೆ. ಈ ಕಾರಣಕ್ಕೆ ದರ್ಶನ್​ಗೆ ಟೆನ್ಷನ್ ಶುರುವಾಗಿದೆ. ಇದರ ಜೊತೆಗೆ ಒಂದು ವಿಚಾರದ ಬಗ್ಗೆ ಅವರಿಗೆ ಆತಂಕ ಶುರುವಾಗಿದೆ. ಇದೇ ವಿಚಾರ ಅವರ ಜಾಮೀನಿಗೆ ತೊಂದರೆ ತಂದೊಡ್ಡಬಹುದು ಎನ್ನುವ ಆತಂಕ ಶುರುವಾಗಿದೆ.

   ಸೋಮವಾರ  ಜಾಮೀನು ಸಿಗುವ ನಿರೀಕ್ಷೆಯಲ್ಲಿ ದರ್ಶನ್ ಇದ್ದಾರೆ. ಆದರೆ, ಜಾಮೀನು ಸಿಗೋದು ಅಷ್ಟು ಸುಲಭದಲ್ಲಿ ಇಲ್ಲ. ದರ್ಶನ್ ಅವರನ್ನು IT ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ. ಇದು ದರ್ಶನ್​ಗೆ ತೊಡಕಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

   ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಹಣದ ವ್ಯವಹಾರ ಕೂಡ ನಡೆದಿದೆ. ಇದರಿಂದ ದರ್ಶನ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ. ಈ ವಿಚಾರಣೆಯ ಕೆಲ ಅಂಶಗಳು, ಕೊಲೆ ಬಳಿಕ ಹಣ ವಹಿವಾಟು ಮೇಲೆ ಸರ್ಕಾರಿ ವಕೀಲರು ಅಪಸ್ವರ ತೆಗೆಯೋ ಸಾಧ್ಯತೆ ಇದೆ.ಕೊಲೆ ನಡೆದ ಸ್ಥಳದಲ್ಲಿ ಪವಿತ್ರಾಗೌಡ ಇಲ್ಲ ಎಂದು ಅವರ ಪರ ವಕೀಲರು ವಾದ ಮುಂದಿಟ್ಟಿದ್ದಾರೆ. ಐಟಿ ವಿಚಾರಣೆ ಹಾಗೂ ಪವಿತ್ರಾ ಗೌಡ ಅವರ ನಿಲವು ನೋಡಿಕೊಂಡು ದರ್ಶನ್ ಕಾನೂನು ಹೋರಾಟಕ್ಕೆ ಮುಂದಾಗುವ ಸಾಧ್ಯತೆ ಇದೆ. 

   ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿರೋದು ಕೆಳ ಹಂತದ ನ್ಯಾಯಾಲಯದಲ್ಲಿ. ಒಂದೊಮ್ಮೆ ಇಲ್ಲಿ ಜಾಮೀನು ಸಿಗದೇ ಇದ್ದರೆ ಹೈಕೋರ್ಟ್ ಹೋಗಬಹುದು. ಅಲ್ಲಿಯೂ ಅವರಿಗೆ ಬೇಲ್ ಸಿಗದೆ ಇದ್ದರೆ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇದೆ. ದರ್ಶನ್ ಅವರು ಇನ್ನೂ ಹಲವು ದಿನ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಬಂದೊದಗಬಹುದು.

Recent Articles

spot_img

Related Stories

Share via
Copy link
Powered by Social Snap