ಬೆಂಗಳೂರು :
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಹತ್ಯೆ ಯಲ್ಲಿ ತನ್ನ ಪಾತ್ರದ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಪೊಲೀಸರು ನ್ಯಾಯಾಲಯಕ್ಕೆ ಆರೋಪಿಗಳ ವಶಕ್ಕೆ ನೀಡಿರುವ ರಿಮ್ಯಾಂಡ್ ಕಾಪಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ಉಲ್ಲೇಖಿಸಲಾಗಿದೆ.
ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದನೆಂಬ ಆರೋಪದ ಮೇಲೆ ದರ್ಶನ್ ಮತ್ತು ಆತನ ಗ್ಯಾಂಗ್ ಚಿತ್ರಹಿಂಸೆ ನೀಡಿ ಬರ್ಬರವಾಗಿ ಹತ್ಯೆಗೈದಿತ್ತು. ಈ ಪ್ರಕರಣದಲ್ಲಿ ನಟ ದರ್ಶನ್ ನೀಡಿರುವ ಸ್ವಇಚ್ಛಾ ಹೇಳಿಕೆ ಈಗ ಬಹಿರಂಗಗೊಂಡಿದೆ.
ಕೊಲೆ ನಡೆದ ಬಳಿಕ ಪ್ರಕರಣದಲ್ಲಿ ಎಲ್ಲಿಯೂ ತನ್ನ ಹೆಸರು ಬರದಂತೆ ಮಾಡಲು ನಾನು ಎ 14 ಆರೋಪಿ ಪ್ರದೋಶ್ ಗೆ 30 ಲಕ್ಷ ರೂ. ಕೊಟ್ಟಿದೆ. ಈ ಹಣದಲ್ಲಿ ಪೊಲೀಸರು, ಲಾಯರ್ ಮತ್ತು ಶವ ವಿಲೇವಾರಿಯ ಖರ್ಚು ವೆಚ್ಚವನ್ನು ನೋಡಿಕೊಳ್ಳಲು ಹೇಳಿದ್ದೆ ಎಂದು ನಟ ದರ್ಶನ್ ಸ್ವಇಚ್ಛಾ ಹೇಳಿಕೆ ದಾಖಲಿಸಿದ್ದಾರೆ.
ದರ್ಶನ್ ಹೇಳಿಕೆ ಪಡೆದ ಬಳಿಕ ಪೊಲೀಸರು ಪ್ರದೋಶ್ ಮನೆಯಿಂದ ದರ್ಶನ್ ನೀಡಿದ್ದ ಹಣವನ್ನು ವಶಪಡಿಸಿಕೊಂಡಿದ್ದರು.