ದರ್ಶನ್‌ ಬೇಲ್‌ ಕ್ಯಾನ್ಸಲ್‌ ಆಗುತ್ತಿದ್ದಂತೆ ಫುಲ್‌ ಟ್ರೋಲ್‌….!

ಬೆಂಗಳೂರು:

    ರೇಣುಕಾ ಸ್ವಾಮಿ ಕೊಲೆ ಆರೋಪದ ಮೇಲೆ ಜಾಮೀನಿನ ಮೇಲೆ ಹೊರಗಿದ್ದ ನಟ ದರ್ಶನ್‌ಗೆ  ಮತ್ತೆ ಸಂಕಷ್ಟ ಎದುರಾಗಿದೆ. ಹೈಕೋರ್ಟ್‌ ನೀಡಿದ್ದ ಜಾಮೀನನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್‌ ಮತ್ತೆ ಜೈಲಿಗಟ್ಟುವಂತೆ ಆದೇಶ ನೀಡಿದೆ. ಇದರ ಮಧ್ಯೆ, ದರ್ಶನ್‌ ನಟನೆಯ ಬಹು ನಿರೀಕ್ಷಿತ ಚಿತ್ರ ಡೆವಿಲ್‌  ಸಿನಿಮಾದ ಇದ್ರೆ ನೆಮ್ಮದಿಯಾಗಿರ್ಬೇಕು ಎನ್ನುವ ಸಾಂಗ್‌ ನಾಳೆ ಸ್ವತಂತ್ರ್ಯ ದಿನಾಚರಣೆಯಂದು ರಿಲೀಸ್‌ ಆಗಲಿದೆ. ಇದೀಗ ಆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಆಗುತ್ತಿದೆ. ಟ್ರೋಲಿಗರು ಇದ್ರೆ ಜೈಲಿನಲ್ಲಿ ನೆಮ್ಮದಿಯಾಗಿರಬೇಕು ಎಂದು ಟ್ರೋಲ್‌ ಮಾಡುತ್ತಿದ್ದಾರೆ.

    ಕೊಲೆ ಪ್ರಕರಣದಲ್ಲಿ, ದರ್ಶನ್, ಪವಿತ್ರಾ ಗೌಡ ಮತ್ತು ನಾಗರಾಜು ಆರ್., ಅನು ಕುಮಾರ್ @ ಅನು, ಲಕ್ಷ್ಮಣ್ ಎಂ, ಜಗದೀಶ್ @ ಜಗ್ಗ ಮತ್ತು ಪ್ರದೂಷ್ ಎಸ್ ರಾವ್ @ ಪ್ರದೂಷ್ ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಇಂದು ರದ್ದುಗೊಳಿಸಿದೆ. ಇದರಿಂದಾಗಿ ದಿ ಡೆವಿಲ್‌ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಈಗಾಗಲೇ ಚಿತ್ರ ತಂಡ ವಿದೇಶದಲ್ಲಿ ಸೇರಿದಂತೆ ಹಲವು ಕಡೆ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಇನ್ನೇನು ಕೆಲವೇ ಕೆಲಸಗಳು ಉಳಿದಿವೆ ಎಂದು ಹೇಳಲಾಗಿದೆ.

   ನಾಳೆ ದರ್ಶನ್‌ ನಟನೆಯ ಬಹು ನಿರೀಕ್ಷಿತ ಚಿತ್ರ ದಿ ಡೆವಿಲ್ ಸಿನಿಮಾದ ಇದ್ರೆ ನೆಮ್ಮದಿಯಾಗಿ ಇರ್ಬೇಕು ಹಾಡು ರಿಲೀಸ್‌ ಆಗುತ್ತಿದೆ. ಸಾಂಗ್‌ ರಿಲೀಸ್‌ ಕುರಿತು ಸ್ವತಃ ದರ್ಶನ್‌ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್‌ಡೇಟ್‌ ನೀಡಿದ್ದರು. ಆಗಸ್ಟ್ 15ರಂದು ಬೆಳಗ್ಗೆ 10.05ಕ್ಕೆ ರಿಲೀಸ್ ಆಗಲಿದೆ ಎಂದು ದರ್ಶನ್ ಬರೆದಿದ್ದರು. ಇದೀಗ ದರ್ಶನ್‌ ಮತ್ತೆ ಜೈಲು ಪಾಇದ್ರೆ ಜೈಲಲ್ಲಿ ನೆಮ್ದಿಯಾಗ್ ಇರ್ಬೇಕ್; ಬೇಲ್‌ ಕ್ಯಾನ್ಸಲ್‌ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡಲಾಗುತ್ತಿದೆ. 

   ಇದ್ರೆ ನೆಮ್ದಿಯಾಗ್ ಇರ್ಬೇಕ್’ ಎಂಬ ಹಾಡು ಬಿಡುಗಡೆಗೂ ಮೊದಲೇ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಸಂಚಲನ ಮೂಡಿಸಿದೆ. ದಿ ಡೆವಿಲ್‌ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಇದು ದರ್ಶನ್ ಅವರೊಂದಿಗಿನ ಅವರ ಮೊದಲ ಸಹಯೋಗವನ್ನು ಗುರುತಿಸುತ್ತದೆ. ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅವರ ಪ್ರಭಾವಶಾಲಿ ಸಂಗೀತಗಳಿಗೆ ಹೆಸರುವಾಸಿಯಾದ ಅಜನೀಶ್, ಇದೀಗ ಡೆವಿಲ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಕುತೂಹಲಕಾರಿಯಾಗಿ, ಚಿತ್ರದ ಆಡಿಯೋ ಹಕ್ಕುಗಳನ್ನು ಯೋಜನೆಯ ಪ್ರಾರಂಭದ ಸಮಯದಲ್ಲಿಯೇ ಸರಿಗಮ ಮ್ಯೂಸಿಕ್ ಲೇಬಲ್ ಪಡೆದುಕೊಂಡಿದೆ.

Recent Articles

spot_img

Related Stories

Share via
Copy link