ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕಕ್ಕೆ ಕೆ ಎಲ್‌ ದರ್ಶನ್‌ ಆಯ್ಕೆ

ಕೊರಟಗೆರೆ 

     ತುಮಕೂರು ಜಿಲ್ಲಾ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಕೊರಟಗೆರೆ ಬಿಜೆಪಿ ಘಟಕದ ಮಂಡಲ ಅಧ್ಯಕ್ಷ ಕೆ.ಎಲ್ ದಶ೯ನ್ ಆಯ್ಕೆಯಾಗಿದ್ದಾರೆ.

    ಕೆ ಎಲ್ ದರ್ಶನ್ ಆಯ್ಕೆ ನಂತರ ಮಾತನಾಡಿ ಅಖಿಲ ಭಾರತ ವೀರಶೈವ ಮಹಾಸಭಾ  ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಆಯ್ಕೆ ಮಾಡಿದ ಅಧ್ಯಕ್ಷರು ಉಪಾಧ್ಯಕ್ಷರಾದಿಯಾಗಿ ಎಲ್ಲಾ ಸದಸ್ಯರಿಗೂ ಹಾಗೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನನ್ನ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ನನ್ನ ಮೇಲೆ ಇಟ್ಟಿರುವಂತ ನಂಬಿಕೆಯನ್ನು ಹುಸಿ ಮಾಡಿದ ರೀತಿಯಲ್ಲಿ ನನ್ನ ಜವಾಬ್ದಾರಿಯನ್ನ ನಿರ್ವಹಿಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  ಅಖಿಲ ಭಾರತ ವೀರಶೈವ ಮಹಾಸಭಾ ಒಂದು ದೊಡ್ಡ ಮಟ್ಟದ ಸಂಘಟನೆಯಾಗಿದ್ದು ಇದು ಸಮುದಾಯದ ಏಳಿಗೆಗೆ ಅವಿರತ ಶ್ರಮ ಹಾಕುತ್ತಿದ್ದು, ದೊಡ್ಡ ಮಟ್ಟದ ಸಮುದ್ರ ಮಾದರಿಯಲ್ಲಿರುವ ದೊಡ್ಡ ಮಟ್ಟದ ಸಂಘಟನೆಯಲ್ಲಿ ನಾನು ಸಹ ಕೈಜೋಡಿಸಿ ಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮ ವಹಿಸುವುದಾಗಿ ತಿಳಿಸಿದರು.

   ಅಖಿಲ ಭಾರತ ವೀರಶೈವ ಸಂಘಟನೆ ಒಂದು ಪಕ್ಷಕ್ಕೆ ಸೀಮಿತವಾಗಿರದೆ, ಇಡೀ ಸಮುದಾಯವನ್ನು ಪಕ್ಷಾತೀತವಾಗಿ ಕೊಂಡೊಯ್ಯುವಂತ ಕೆಲಸ ಪ್ರಾರಂಭ ಅಂತದಿಂದಲೂ ನಡೆಯುತ್ತಿದ್ದು, ಸಮುದಾಯವನ್ನ ರಾಜಕೀಯವಾಗಿ , ಶೈಕ್ಷಣಿಕವಾಗಿ ಸಾಮಾಜಿಕ ಹಾಗೂ ಧಾರ್ಮಿಕವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುವಂಥ ಕೆಲಸ ಅಖಿಲ ಭಾರತ ವೀರಶೈವ ಸಂಘದಿಂದ ಸತತವಾಗಿ ನಡೆಯುತ್ತಿದ್ದು ಇದಕ್ಕೆ ನಾವು ಸಹ ಕೈಜೋಡಿಸಿ ಸಮುದಾಯದ ಅಭಿವೃದ್ಧಿಗೆ ನಮ್ಮ ಕೈಲಾದ ಸಹಾಯ ಮಾಡುವಂತಹ ಅವಕಾಶ ಜನಾಂಗ ನನಗೆ ಕಲ್ಪಿಸಿರುವುದು ಬಹಳ ಸಂತಸ ತಂದಿದೆ ಎಂದು ಅಭಿಪ್ರಾಯಪಟ್ಟರು.

Recent Articles

spot_img

Related Stories

Share via
Copy link