82 ಲಕ್ಷ ರೂ. ಹಣದ ದಾಖಲೆ ತೋರಿಸದ ದರ್ಶನ್‌, ಕೃಷಿಯಿಂದ ಬಂತು ಎಂದ ದಾಸ

ಬೆಂಗಳೂರು

     ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ  ಸಂಬಂಧಪಟ್ಟಂತೆ ‌ನಟ ದರ್ಶನ್  ಗ್ಯಾಂಗ್‌ ಬಳಿಯಿಂದ ಸೀಜ್‌ ಮಾಡಿಕೊಳ್ಳಲಾದ 82 ಲಕ್ಷ ರೂ. ನಗದಿಗೆ ಯಾವುದೇ ದಾಖಲೆ ತೋರಿಸಲು ದರ್ಶನ್‌ ವಿಫರಾಗಿದ್ದಾರೆ. ಇದು ಕೃಷಿ ಹಾಗೂ ಪಶು ಸಂಗೋಪನೆಯಿಂದ ಬಂದುದಾಗಿ ತಿಳಿಸಿದ್ದಾರೆ. ಆದರೆ ಐಟಿ ಹಾಗೂ ಪೊಲೀಸರು ಈ ಹೇಳಿಕೆಯ ಸತ್ಯಶೋಧನೆಗೆ ಇಳಿದಿದ್ದು, ಕೊಲೆ ಪ್ರಕರಣದ ಸಾಕ್ಷಿ ನಾಶಕ್ಕೆ ಬಳಸಲಾಗಿದೆ ಎಂದು ತರ್ಕಿಸಿದ್ದಾರೆ.

    ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸಾಕ್ಷಿ ನಾಶಕ್ಕೆ 82 ಲಕ್ಷ ರೂ. ನಗದು ಹಣ ಸಂಗ್ರಹ ಆರೋಪ ಹಿನ್ನೆಲೆಯಲ್ಲಿ ದರ್ಶನ್ ಹೇಳಿಕೆ ಪಡೆಯಲಾಗಿದೆ. ಐಟಿ ಅಧಿಕಾರಿಗಳ ಮುಂದೆ A2 ಆರೋಪಿ ದರ್ಶನ್‌ ಹಾಗೂ ಪತ್ನಿ ವಿಜಯಲಕ್ಷ್ಮಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಕೃಷಿ ಮತ್ತು ಪಶು ಸಂಗೋಪನೆಯಿಂದ ಹಣ ಬಂದಿದ್ದಾಗಿ ದರ್ಶನ್ ಐಟಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ.

    ಆದರೆ ಈ ಹಣಕ್ಕೆ ನನ್ನ ಬಳಿ ದಾಖಲೆಗಳು ಇಲ್ಲ. ಈ ಬಗ್ಗೆ ಐಟಿ ರಿಟರ್ನ್ಸ್ ವೇಳೆ ಮಾಹಿತಿ ನೀಡುತ್ತೇನೆ ಎಂದಿದ್ದಾರೆ. ಸಾಲ ಕೊಟ್ಟಿದ್ದು, ಸಾಲ ಪಡೆದಿದ್ದರ ಬಗ್ಗೆ ಪ್ರಶ್ನೆಗೆ ಉತ್ತರಿಸಿದ್ದಾರೆ. ಮೋಹನ್ ರಾಜ್‌ಗೆ ಸಾಲವಾಗಿ ಹಣ ನೀಡಿದ್ದೆ. 2024 ಫೆಬ್ರವರಿಯಲ್ಲಿ ಸಾಲ ಕೊಟ್ಟು ಮೇನಲ್ಲಿ ವಾಪಸ್ ಪಡೆದಿದ್ದೆ. 3 ವರ್ಷದಿಂದ ಕೃಷಿಗೆ 25 ಲಕ್ಷ ರೂಪಾಯಿ ಮತ್ತು ಹುಟ್ಟುಹಬ್ಬಕ್ಕೆ ಗಿಫ್ಟ್ ರೂಪದಲ್ಲಿ 15 ಲಕ್ಷ ರೂಪಾಯಿ ಹಣ ಪಡೆದಿದ್ದಾಗಿ ಹೇಳಿಕೆ ನೀಡಿದರು. 

    ಈ ಹಣಕ್ಕೆ ನನ್ನ ಬಳಿ ಯಾವುದೇ ದಾಖಲೆ ಇಲ್ಲ. ಮೋಹನ್ ರಾಜ್‌ಗೆ ಬಿಟ್ಟರೆ ಯಾರಿಗೂ ನಗದು ರೂಪದಲ್ಲಿ ಸಾಲ ಕೊಟ್ಟಿಲ್ಲ. ಆರು ವರ್ಷದಿಂದ ನಾನು ಸಾಲ ಕೊಟ್ಟಿಲ್ಲ ಪಡೆದೂ ಇಲ್ಲ. ಉಳಿದ ಹಣದ ಬಗ್ಗೆ ಮಾಹಿತಿ ಗೊತ್ತಿಲ್ಲ ಎಂದು ದರ್ಶನ್ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದರು. ದರ್ಶನ್, ವಿಜಯಲಕ್ಷ್ಮಿ, ಪ್ರಧೋಷ್, ನಿಖಿಲ್ ಹಾಗೂ ಕೇಶವಮೂರ್ತಿ ಮನೆಯಲ್ಲಿ 82 ಲಕ್ಷ ರೂಪಾಯಿ ಹಣ ಸಿಕ್ಕಿತ್ತು.

Recent Articles

spot_img

Related Stories

Share via
Copy link