ಮಧುಗಿರಿ:
ಒಬ್ಬ ವಕೀಲರಾಗಿ ಸಂವಿಧಾನಾತ್ಮಕವಾಗಿ ಕಾನೂನು ಬದ್ಧವಾದ ರಾಜಕಾರಣಿಗಳ ಕರ್ತವ್ಯ ಏನು ಎಂಬುದರ ವಿಶ್ಲೇಷಣೆ ವ್ಯಾಖ್ಯಾನ ಮಾಡಿದ್ದಕ್ಕಾಗಿ ಕಾಂ ಗ್ರೆಸ್ ಪಕ್ಷವು ಕೆ.ಎನ್ ರಾಜಣ್ಣನವರ ರಾಜೀನಾಮೆ ಪಡೆದ ಕ್ರಮ ಸರಿಯಿಲ್ಲ ಹಾಗೂ ಬಾರ್ ಬಾರೀಕ್ ಮರ್ಡರ್ ಆಫ್ ಇಂಟರ್ ನಲ್ ಆಂಡ್ ಪಬ್ಲಿಕ್ ಡೆಮಾಕ್ರಸಿ, ಎಂದು ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ದತ್ತಾತ್ರೇಯ ಖಂಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೆ ಎನ್ ರಾಜಣ್ಣ ನವರು ಹುಟ್ಟಿನಿಂದಲೂ ನೇರ ನುಡಿ ಮತ್ತು ದಿಟ್ಟನಿರ್ಧಾರಗಳಿಗೆ ಹೆಸರಾದಂತಹವರು ಅತಂಹ ಕಳಂಕ ರಹಿತ ಸರ್ವ ಜನರ ಜನಾನುರಾಗಿದ್ದಂತಹ ಮತ್ತು ವೃತ್ತಿಯಲ್ಲಿ ವಕೀಲನಾಗಿ ಸೇವೆ ಸಲ್ಲಿಸಿದಂತಹ ವ್ಯಕ್ತಿಯಾಗಿದ್ದಾರೆ.
ಅಂತಹ ವ್ಯಕ್ತಿಯನ್ನು ಕೇವಲ ತಮ್ಮ ಪಕ್ಷದಲ್ಲಿ ರಾಜಕೀಯವಾಗಿ ಪ್ರಜಾಪ್ರಭುತ್ವವನ್ನು ಮತ್ತು ರಾಜಕೀಯ ಕ್ರಿಯಾಶೀಲತೆಯನ್ನು ಶೀಲಭಂಗ ಮಾಡಲು ಪ್ರಯತ್ನಿಸಿದಂತಹ ಹಲವಾರು ಪ್ರಕರಣಗಳಾದ ಹನಿ ಟ್ರಾಫ್ ಮೂಲಕ ರಾಜಕೀಯ ಜೀವನ ಹುನ್ನಾರದ ವಿರುದ್ಧ , ಏಕ ಚಕ್ರಾಧಿಪತ್ಯದ ವಿರುದ್ಧ,ಪಕ್ಷದ ಹೈಕಮಾಂಡ್ ನವರು ಸಹಕಾರ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದರಿಂದ ನಮ್ಮ ಶಾಸಕರು ಮಾಜಿ ಸಚಿವರು ಧ್ವನಿ ಎತ್ತಿದ್ದಕ್ಕೆ ಅವರ ರಾಜೀನಾಮೆ ಪಡೆದಿರುವುದು ಸೂಕ್ತವಲ್ಲ.
ಕೆ ಎನ್ ರಾಜಣ್ಣ ಅಭಿವೃದ್ಧಿಯ ಪಥ ಹಾಗೂ ಅಭಿವೃದ್ಧಿಯ ಚಿಂತನೆಗಳೊಂದಿಗೆ ಅಭಿವೃದ್ಧಿಯ ಕಾರ್ಯಗಳನ್ನು ಮಧುಗಿರಿ ತಾಲೂಕಿನಾದ್ಯಂತಹ ಅನುಷ್ಠಾನ ಗೊಳಿಸಿದಂತಹ ವ್ಯಕ್ತಿಯನ್ನು ಯಾವುದೇ ಕಾರಣಗಳಿಲ್ಲದೆ ಕೇವಲ ಪಕ್ಷದಲ್ಲಿನ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿದ್ದಕ್ಕೆ ಸಚಿವ ಸ್ಥಾನದಿಂದ ವಜಾ ಗೊಳಿಸಿರುವುದು ಅತ್ಯಂತ ಖಂಡನೀಯ.
ಆಂಟಿ ಡೆಮಾಕ್ರಾಟಿಕ್ ನಿರ್ಧಾರ ದಿಂದ ನಮ್ಮ ಮಧುಗಿರಿ ವಿಧಾನ ಸಭಾ ಕ್ಷೇತ್ರಕ್ಕೂ ಕ್ಷೇತ್ರದ ಎಲ್ಲಾ ವರ್ಗದ ಜನರಿಗೆ ತುಂಬಲಾರದ ನಷ್ಟದ ಜತೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಧಕ್ಕೆ ಉಂಟುಮಾಡುವಂತಾಗಿದೆ. ಇಂತಹ ಕಾರ್ಯವನ್ನು ನಮ್ಮ ತಾಲೂಕು ಬ್ರಾಹ್ಮಣ ಸಭಾವು ಪಕ್ಷಾತೀತಾ ಮನಸ್ಸಿಂದ ಖಂಡಿಸುತ್ತದೆ. ಸರ್ಕಾರ ಸೂಕ್ತ ನಿರ್ಧಾರ ತೆಗೆದು ಕೊಂಡು ಕಳಂಕ ರಹಿತ ಅಭಿವೃದ್ಧಿ ಪಥದ ವ್ಯಕ್ತಿಗೆ ಸಚಿವ ಸ್ಥಾನ ಮರುಕಳುಹಿಸಬೇಕೆಂದಿದ್ದಾರೆ.
