ದಾವಣಗೆರೆ:
ಗೋವಾದಿಂದ ಯಶವಂತಪುರಕ್ಕೆ ಸಂಚರಿಸುತ್ತಿದ್ದ 17310 ಸಂಖ್ಯೆ ವಾಸ್ಕೋಡಿಗಾಮ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಾಗಣೆ ಮಾಡುತ್ತಿದ್ದ 43 ಸಾವಿರ ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳುವಲ್ಲಿ ದಾವಣಗೆರೆ ಆರ್‌ಪಿಎಫ್ ಪೊಲೀಸರು ಯಶಸ್ವಿಯಾಗಿದ್ದಾರೆ.ಹಾವೇರಿ ಮತ್ತು ದಾವಣಗೆರೆ ರೈಲ್ವೆ ನಿಲ್ದಾಣದ ನಡುವೆ ಕರ್ತವ್ಯದಲ್ಲಿದ್ದ ದಾವಣಗೆರೆ ಆರ್‌ಪಿಎಫ್ ಎಎಸ್‌ಐ ಲಕ್ಷ್ಮವ್ವ ಎನ್. ಪಾಟೀಲ್ ನೇತೃತ್ವದಲ್ಲಿ ಮುಖ್ಯ ಪೇದೆ ಜೆ.ಜಗದೀಶ್, ಮಹಿಳಾ ಪೇದೆ ವೈ. ಸಂಗೀತಾ, ಗೃಹರಕ್ಷಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ 43,763 ರೂ. ಮೌಲ್ಯದ ವಿವಿಧ ಬ್ರಾಂಡ್‌ಗಳ ಒಟ್ಟು 53 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ವಸ್ತುಗಳನ್ನು ದಾವಣಗೆರೆಯ ಆರ್‌ಪಿಎಫ್ ಪೋಸ್ಟ್‌ಗೆ ತರಲಾಯಿತು. ಅಗತ್ಯ ಕಾನೂನು ವಿಧಿ-ವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಮದ್ಯದ ಬಾಟಲಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಸೂಕ್ತ ಸ್ವೀಕೃತಿಯಡಿ ದಾವಣಗೆರೆ ಅಬಕಾರಿ ನಿರೀಕ್ಷಕರಿಗೆ ಹಸ್ತಾಂತರ ಮಾಡಿದ್ದಾರೆ.








