
ದಾವಣಗೆರೆ: ಪೋಕ್ಸೋ ಕೇಸ್ನಲ್ಲಿ ವಚನಾನಂದ ಸ್ವಾಮೀಜಿ ಅವರನ್ನು ಗುರುವಾರ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಮಾರು ೫ ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಹಾಸ್ಟೆಲ್ನ ಬಾಲಕರಿಗೆ ಲೈಂಗಿಕ ದೌರ್ಜನ್ಯ ಆರೋಪ ವಿಚಾರವಾಗಿ ಡಿವೈಎಸ್ಪಿ ಬಸವರಾಜ್ ನೇತೃತ್ವದಲ್ಲಿ ಸ್ವಾಮೀಜಿಯವರ ವಿಚಾರಣೆ ನಡೆಯಿತು.
ವಿಚಾರಣೆ ಮುಗಿಸಿ ಠಾಣೆಯಿಂದ ಹೊರಬಂದ ಸ್ವಾಮೀಜಿಯವರು, ಬಳಿಕ ಹರಿಹರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ಗೆ ಒಳಗಾದರು. ಅಲ್ಲಿಗೆ ತೆರಳುವ ವೇಳೆ ಶ್ರೀಗಳು, ಕಾರು ಹತ್ತುವ ಮುನ್ನ ‘ಕಾನೂನಿಗೆ ಗೌರವಿಸುತ್ತೇವೆ, ಕಾನೂನನ್ನು ಪರಿಪಾಲಿಸುತ್ತೇವೆ’ ಎಂದು ಹೇಳಿದರು.
ಸಾರ್ವಜನಿಕ ಆಸ್ಪತ್ರೆಯ ತುರ್ತು ಚಿಕಿತ್ಸೆ ತಜ್ಞ ಡಾ.ರಾಘವೇಂದ್ರ ದುರ್ಗೋಜಿ ಅವರು ಸ್ವಾಮೀಜಿಗೆ ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸಿದರು. ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನಂತರ ಆದಿ ಯೋಗಿಯವರ ಪುಸ್ತಕ ಹಿಡಿದ ಸ್ವಾಮೀಜಿ ನಗುತ್ತಲೇ ಆಸ್ಪತ್ರೆಯಿಂದ ಹೊರಗಡೆ ಆಗಮಿಸಿ, ಕಾರು ಹತ್ತಿ ಮಠದತ್ತ ನಡೆದರು.
ಡಾ.ರಾಘವೇಂದ್ರ ದುರ್ಗೋಜಿ ಅವರು ಮಾತನಾಡಿ, ವಚನಾನಂದ ಸ್ವಾಮೀಜಿ ಅವರಿಗೆ ಪೋಕ್ಸೋ ಪ್ರಕರಣದಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆತಂದಿದ್ದರು. ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸಲಾಗಿದೆ. ಉಗುರು, ಬಟ್ಟೆ, ಕೂದಲು ಸೇರಿದಂತೆ ಪೋಕ್ಸೋ ಕೇಸ್??ಗೆ ಬೇಕಾಗುವ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಲಾಗಿದೆ. ಪಡೆಯಲಾದ ಸ್ಯಾಂಪಲ್ಗಳನ್ನು ಮೆಡಿಕಲ್ ಪರೀಕ್ಷೆಗೆ ಕಳಿಸಲಾಗುವುದು. ಬಟ್ಟೆ ಮಾದರಿ ಸಂಗ್ರಹ ಮಾಡಿದ್ದೇವೆ. ಅಲ್ಲದೆ ಆರೋಗ್ಯ ದೃಷ್ಟಿಯಿಂದ ಬಿಪಿ, ಶುಗರ್, ಪಲ್ಸ್ ಪರೀಕ್ಷೆ ಮಾಡಲಾಗಿದೆ. ಸ್ವಾಮೀಜಿಯವರು ಸದೃಢರಾಗಿದ್ದಾರೆ. ಮಾದರಿಗಳನ್ನು ಬಾತಿಯ ವಿಧಿ ವಿಜ್ಞಾನ ಕೇಂದ್ರ (ಎಫ್ಎಸ್ಎಲ್)ಕ್ಕೆ ಕಳುಹಿಸಲಾಗಿದೆ. ಮುಂದಿನ ೧೫ ದಿನಗಳಲ್ಲಿ ವರದಿ ಸಿಗಲಿದ್ದು, ಅದನ್ನು ಪೊಲೀಸರಿಗೆ ನೀಡಲಾಗುತ್ತದೆ” ಎಂದು ತಿಳಿಸಿದರು.
ಭಕ್ತರಿಂದ ಆಕ್ರೋಶ: ಪೋಕ್ಸೋ ಕೇಸ್ನಲ್ಲಿ ವಚನಾನಂದ ಸ್ವಾಮೀಜಿ ವಿಚಾರಣೆ ಹಿನ್ನೆಲೆಯಲ್ಲಿ ಮಠದ ಭಕ್ತರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ಸುತ್ತುವರಿದ ಭಕ್ತರ ದಂಡು, ಟ್ರಸ್ಟ್?ನವರ ಷಡ್ಯಂತ್ರದಿAದ ಕೇಸ್ ಆಗಿದೆ ಎಂದು ಆರೋಪಿಸಿದರು.
ಹೇಗಾದರು ಸ್ವಾಮಿಜಿಯನ್ನು ಜೈಲಿಗೆ ಕಳುಹಿಸಿ ಮಠ ಖಾಲಿ ಮಾಡಿಸಬೇಕೆಂದು ತಂತ್ರ ರೂಪಿಸಿದ್ದಾರೆ. ಈ ಕೇಸ್ ಎಲ್ಲಾ ಶುದ್ಧ ಸುಳ್ಳು ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಸ್ವಾಮೀಜಿ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ನಾವು ಸ್ವಾಮೀಜಿ ಪರವಾಗಿಯೇ ಇರುತ್ತೇವೆ. ಮುಂದೆ ಏನಾಗುತ್ತೋ ನಾವು ನೋಡುತ್ತೇವೆ. ಹರಿಹರದಲ್ಲಿ ಲೆಕ್ಕ ಕೊಡಿ ಎಂದು ಸಮಿತಿ ಅಧ್ಯಕ್ಷ ಪರಮೇಶ್ವರ ಗೌಡ್ರು ವಾಗ್ದಾಳಿ ನಡೆಸಿದರು.
ಹರಿಹರ ಗ್ರಾಮಾಂತರ ಠಾಣೆಯಲ್ಲಿ ವಚನಾನಂದ ಸ್ವಾಮೀಜಿ ವಿಚಾರಣೆ ಮುಂದುವರೆದಿದೆ. ಕಳೆದ ನಾಲ್ಕು ಗಂಟೆಗಳಿAದ ಗ್ರಾಮೀಣ ವಿಭಾಗದ ಡಿವೈಎಸ್ಪಿ ಬಸವರಾಜ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. ಹರಿಹರ ಗ್ರಾಮಾಂತರ ಪೊಲೀಸ್? ಠಾಣೆ ಎದುರು ವಚನಾನಂದ ಸ್ವಾಮೀಜಿ ಭಕ್ತರು ಜಮಾಯಿಸಿದ್ದರು.
ವಚನಾನಂದ ಶ್ರೀ ಭಕ್ತ, ಲೆಕ್ಕ ಕೊಡಿ ಚಳವಳಿ ಸಮಿತಿ ಅಧ್ಯಕ್ಷ ಪರಮೇಶ್ವರ ಗೌಡ ಮಾತನಾಡಿ, ಟ್ರಸ್ಟ್ ಅವರ ಷಡ್ಯಂತ್ರದಿAದ ಕೇಸ್ ಆಗಿದೆ. ಹೇಗಾದರು ಸ್ವಾಮೀಜಿಯನ್ನು ಜೈಲಿಗೆ ಕಳುಹಿಸಿ ಮಠ ಖಾಲಿ ಮಾಡಿಸಬೇಕೆಂದು ತಂತ್ರ ರೂಪಿಸಿದ್ದಾರೆ. ಈ ಕೇಸ್ ಎಲ್ಲಾ ಶುದ್ಧ ಸುಳ್ಳು. ಸ್ವಾಮಿಜಿ ಮೇಲೆ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ. ನಾವು ಸ್ವಾಮೀಜಿ ಪರವಾಗಿಯೇ ಇರುತ್ತೇವೆ. ಮುಂದೆ ಏನಾಗುತ್ತೋ, ನಾವು ನೋಡುತ್ತೇವೆ. ಜಾಮೀನಿಗಾಗಿ ಒಂದು ಲಕ್ಷ ಶ್ಯೂರಿಟಿ ಬಾಂಡ್ ನೀಡಿದ್ದೇವೆ. ಮಠದ ಹಣ ತಿಂದವರು ಎಸಿ ರೂಮ್ನಲ್ಲಿದ್ದಾರೆ, ನಾವು ಭಕ್ತರು ಇಲ್ಲಿ ಬಿಸಿಲಿನಲ್ಲಿದ್ದೇವೆ. ಕಾನೂನು ಮೇಲೆ ಭರವಸೆ ಇದೆ, ಶ್ರೀಗಳು ತನಿಖೆಗೆ ಸಹಕಾರ ನೀಡುತ್ತಾರೆ” ಎಂದು ಹೇಳಿದರು.








