ಕೊರಟಗೆರೆ
ಮಾಜಿ ಜನಪ್ರಿಯ ಸಚಿವ ಸಿ ಚಿನ್ನಿಗಪ್ಪನವರ ಮಗ ಡಿಸಿ ಅರುಣ್ ಕುಮಾರ್ ಮುಂದಿನ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಗಳಿಗೆ ಜೆಡಿಎಸ್ ನಿಂದ ಯಾರೇ ಸ್ಪರ್ಧಿಸಿದರೂ ತನು ಮನ ಧನ ಅರ್ಪಿಸುವ ಮೂಲಕ ಅವರ ಗೆಲುವಿಗೆ ಟೂಂಕಾ ಕಟ್ಟಿ ನಿಲ್ಲುವುದಾಗಿ ಅಭಿಪ್ರಾಯ ಪಟ್ಟರು.
ಅವರು ಶುಕ್ರವಾರ ಕೊರಟಗೆರೆ ತಾಲೂಕಿನ ಕ್ಯಾಶವಾರ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಹಾಗೂ ಮಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡುತ್ತಾ ಮುಂದಿನ ದಿನಗಳಲ್ಲಿ ದೇವೇಗೌಡ ಕುಮಾರಸ್ವಾಮಿ ಆಶೀರ್ವಾದದೊಂದಿಗೆ ಕ್ಷೇತ್ರದಲ್ಲಿ ಜೆಡಿಎಸ್ ನ ಬೆಳವಣಿಗೆಗೆ ಮಾಜಿ ಶಾಸಕ ಹಾಗೂ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಸೇರಿದಂತೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಪಕ್ಷದ ಬೆಳವಣಿಗೆಗೆ ಕೈಜೋಡಿಸುವುದಾಗಿ ತಿಳಿಸಿದರು.
ಕೊರಟಗೆರೆ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಸಚಿವರಾಗಿ ಕೊರಟಗೆರೆ ಭಾಗದ ಜನರ ಮನೆ ಗೆದ್ದು ಮನೆಮಗ ಎಂಬುವ ರೀತಿಯಲ್ಲಿ ಜನರೊಟ್ಟಿಗೆ ಬೆಳೆದ ಸಿ ಚಿನ್ನಿಪ್ಪನವರ ಅಭಿಮಾನಿಗಳು ಕ್ಷೇತ್ರದಲ್ಲಿ ಬಹಳಷ್ಟು ಜನರಿದ್ದು ಸಿ . ಚೆನ್ನಿಗಪ್ಪನವರ ಹಾದಿಯಲ್ಲಿಯೇ ನಾನು ಸಹ ಬಡವರ ಪರವಾಗಿ ದೀನ ದಲಿತರ ಸಮಸ್ಯೆಗೆ ಸ್ಪಂದಿಸಿ ಕ್ಷೇತ್ರದ ಜನತೆಗೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಕೈಲಾದ ಸಹಾಯ ಮಾಡುವುದರ ಜೊತೆಗೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸುವುದಾಗಿ ಹೇಳಿದರು.
ಕ್ಯಾಶವಾರ ಗ್ರಾಮ ನಮ್ಮ ತಂದೆ ಕಾಲದಿಂದಲೂ ನಮ್ಮ ಕುಟುಂಬವನ್ನ ಹೆಚ್ಚು ಗೌರವಿಸಿ ಹಚ್ಚಿಕೊಂಡಂತ ಗ್ರಾಮವಾಗಿದ್ದು, ನಮ್ಮ ತಂದೆಯವರಿಗೆ ಈ ಗ್ರಾಮದಲ್ಲಿ ಅತಿ ಹೆಚ್ಚು ಮತ ಬೀಳುತ್ತಿದ್ವು ಜನರು ನಮ್ಮ ತಂದೆ ಹಾಗೂ ನಮ್ಮ ಕುಟುಂಬದವರ ಮೇಲೆ ಇಟ್ಟಿರುವ ಅಭಿಮಾನ ಅದರ ಋಣ ತೀರಿಸುವ ದೃಷ್ಟಿಯಿಂದ ನಮ್ಮ ತಂದೆ ಚಿನ್ನಿಗಪ್ಪ ಹಾಗೂ ತಾಯಿಯವರ ಹೆಸರಿನಲ್ಲಿ ಈ ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಹಣ ಸಹಾಯಕ್ಕೆ ನನ್ನ ಹತ್ತಿರ ಬಂದಂತ ಸಂದರ್ಭದಲ್ಲಿ ನಾನು ಕೈಲಾದ ಸಹಾಯ ಮಾಡಿದ್ದು, ದೇವಸ್ಥಾನ ಪೂರ್ಣಗೊಂಡಿದ್ದು ಉದ್ಘಾಟನಾ ಸಂದರ್ಭದಲ್ಲಿ ನನಗೆ ಸ್ವಲ್ಪ ಅನಾರೋಗ್ಯವಿದ್ದ ಕಾರಣ ಬರಲು ಸಾಧ್ಯವಾಗಿರಲಿಲ್ಲ ಜನರು ಸತತವಾಗಿ ನನ್ನೊಟ್ಟಿಗೆ ಸಂಪರ್ಕ ಇಟ್ಟುಕೊಂಡು ದೇವಾಲಯಕ್ಕೆ ಒಂದು ಬಾರಿ ಬನ್ನಿ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ದಿನ ದೇವಸ್ಥಾನದ ಪೂಜಾ ಕಾರ್ಯಕ್ರಮಕ್ಕೆ ಭಾಗವಹಿಸಿದ್ದು, ನಮ್ಮ ತಂದೆಯವರು ಈ ಗ್ರಾಮದ ಮೇಲಿಟ್ಟಿರುವ ಅಭಿಮಾನದ ರೀತಿಯಲ್ಲಿಯೇ ನಾನು ಸಹ ತಾಲೂಕಿನ ಪ್ರತಿ ಗ್ರಾಮಗಳ ಮೇಲೆ ಅಭಿಮಾನವಿಟ್ಟು ಕೈಲಾದ ಸಹಾಯ ಮಾಡುವುದಾಗಿ ಅಭಿಪ್ರಾಯಪಟ್ಟರು.
ಚನ್ನಪಟ್ಟಣ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸರಿಸುಮಾರು 25,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ನಾನು ಸಹ ಕೆಲವು ಮುಖಂಡರುಗಳ ಜೊತೆಯಲ್ಲಿ ಇಡೀ ಕ್ಷೇತ್ರ ಸುತ್ತಿದ್ದೇನೆ ಕುಮಾರಸ್ವಾಮಿ ಅವರ ಮೇಲೆ ಮತದಾರರಿಗೆ ಬಹಳಷ್ಟು ಒಲವಿದೆ, ನಿಖಿಲ್ ಸ್ವಾಮಿ ಗೆಲುವು ಖಚಿತ ಎಂದು ಭವಿಷ್ಯ ನುಡಿದರು.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಹನುಮಂತ ರಾಯಪ್ಪ, ವಡ್ಡಗೆರೆ ಗಂಗಣ್ಣ, ಗುಂಡನ ಪಾಳ್ಯ ನಟರಾಜ್ ಹಾಗೂ ಪಾರ್ಥಣ್ಣ, ಕ್ಯಾಶವಾರ ಮುಖಂಡರುಗಳಾದಂತಹ ಲೋಕೇಶ್, ಮಂಜುನಾಥ್, ನಾರಾಯಣಪ್ಪ, ಮಲ್ಲಣ್ಣ, ಲಕ್ಷ್ಮೇಶ್, ನಾರಾಯಣಪ್ಪ, ನಂಜಪ್ಪ , ಬ್ರಹ್ಮಚಾರ್, ದೊಡ್ಡ ರಾಮಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.