ತುಮಕೂರು: ಕೊಬ್ಬರಿ : ತ್ವರಿತ ಗತಿಯಲ್ಲಿ ಖರೀದಿಗೆ ಡಿಸಿ ಸೂಚನೆ

ತುಮಕೂರು :

ಜನತೆಯ ಕಲ್ಯಾಣಕ್ಕಾಗಿಯೇ ಸರ್ಕಾರವು ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ರೈತರ ಶೋಷಣೆ ಬಗ್ಗೆ ದೂರು ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಶ್ರೀನಿವಾಸ .ಕೆ ಎಚ್ಚರಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಅನ್ಯಾಯ/ಅಕ್ರಮ ಆಗಿರುವುದು ಕಂಡುಬAದಲ್ಲಿ ಪರಾಮರ್ಶಿಸಿ ತಕ್ಷಣ ಕ್ರಮಕೈಗೊಳ್ಳಿ, ರೈತರಿಗೆ ತೊಂದರೆ ನೀಡುವರಿಗೆ ಯಾವುದೇ ಮಣೆ ಹಾಕದೆ, ರೈತಾಪಿ ವರ್ಗದವರಿಗೆ ಸರ್ಕಾರದ ಯೋಜನೆಯ ಲಾಭ ತಲುಪುವಂತೆ ನೋಡಿಕೊಂಡು ಬದ್ಧತೆಯಿಂದ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು

ಹೆಚ್ಚುವರಿ ಖರೀದಿ ಕೇಂದ್ರ:

     ಚಿಕ್ಕನಾಯಕನಹಳ್ಳಿ ಹೆಚ್ಚುವರಿಯಾಗಿ 1 ಖರೀದಿ ಕೇಂದ್ರವನ್ನು ಹಾಗೂ ತುರುವೆಕೆರೆ ತಾಲೂಕುನಲ್ಲಿ 2 ಖರೀದಿ ಕೇಂದ್ರವನ್ನು ಹೆಚ್ಚುವರಿಯಾಗಿ ತೆರಯಲು ಜಿಲ್ಲಾಧಿಕಾರಿಗಳು ಸೂಚಿಸಿದರು,

      ಉಂಡೆ ಕೊಬ್ಬರಿ ಖರೀದಿಗಾಗಿ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ 2,68,617 ಕ್ವಿಂಟಾಲ್ ಕೊಬ್ಬರಿ 17,510 ರ?ಯೆತರಿಂದ ನೋಂದಣಿಯಾಗಿದ್ದು, ಇದರಲ್ಲಿ ಜೂನ್ 19 2023ರ ಅಂತ್ಯಕ್ಕೆ 12,080 ರೈತರಿಂದ 1,84,514 ಕ್ವಿಂಟಾಲ್ ಕೊಬ್ಬರಿಯನ್ನು ಖರೀದಿಮಾಡಲಾಗಿದ್ದು, ಉಳಿದ 5430 ರೈತರಿಂದ 84,102 ಕ್ವಿಂಟಾಲ್ ಕೊಬ್ಬರಿಯನ್ನು ತ್ವರಿತಗತಿಯಲ್ಲಿ ರೈತರಿಂದ ಖರೀದಿ ಮಾಡಲು ಜಿಲ್ಲಾಧಿಕಾರಿಗಳು ಕೃಷಿ ಮಾರಾಟ ಇಲಾಖೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap