ಬೆಂಗಳೂರು:
ಈಗಾಗಲೇ ರಾಜ್ಯದ ನೆರೆಯ ಕೇರಳ, ಗುಜರಾತ್, ಛತ್ತೀಸ್ ಗಢ ರಾಜ್ಯಗಳಲ್ಲಿ ಡಿಸಿಸಿ ಬ್ಯಾಂಕ್ ಗಳನ್ನು ಬಂದ್ ಮಾಡಲಾಗಿದೆ. ಕೇವಲ ಪತ್ತಿನ ಸಂಘಗಳು, ಅಪೆಕ್ಸ್ ಬ್ಯಾಂಕ್ ಉಳಿಸಿಕೊಳ್ಳಲಾಗಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಡಿಸಿಸಿ ಬ್ಯಾಂಕ್ ಗಳನ್ನು ( DCC Bank ) ಬಂದ್ ಮಾಡಿ, ಕೇವಲ ಅಪೆಕ್ಸ್ ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಂಘಗಳನ್ನು ಉಳಿಸಿಕೊಳ್ಳುವಂತ ಚಿಂತನೆಯನ್ನು ರಾಜ್ಯ ಸರ್ಕಾರ ನಡೆಸಿದೆ.
ಈ ಬಗ್ಗೆ ಮಂಗಳವಾರ ಸದನದಲ್ಲಿ ಬಿಜೆಪಿಯ ಡಾ.ವೈಎ ನಾರಾಯಣಸ್ವಾಮಿ ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರು, ರಾಜ್ಯದಲ್ಲಿ ಅಪೆಕ್ಸ್ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಂಘ ಮಾತ್ರ ಉಳಿಸಿಕೊಂಡು, ಡಿಸಿಸಿ ಬ್ಯಾಂಕ್ ಗಳನ್ನು ಮುಚ್ಚುಲು ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಉತ್ತರಿಸಿದ್ದಾರೆ.
ಇನ್ನೂ ಮುಂದುವರೆದು ಮಾತನಾಡಿದ ಅವರು, ಈಗಾಗಲೇ ಗುಜರಾತ್, ಕೇರಳ ಹಾಗೂ ಛತ್ತೀಸ್ ಗಢದಲ್ಲಿ ಡಿಸಿಸಿ ಬ್ಯಾಂಕ್ ಗಳನ್ನು ಮುಚ್ಚಿ, ಅಪೆಕ್ಸ್ ಬ್ಯಾಂಕ್ ಜೊತೆಗೆ ವಿಲೀನಗೊಳಿಸಲಾಗಿದೆ. ಆ ಬಗ್ಗೆ ಅಧಿಕಾರಿಗಳನ್ನು ಅಧ್ಯಯನ ನಡೆಸೋದಕ್ಕೆ ಈ ರಾಜ್ಯಗಳಿಗೆ ಕಳುಹಿಸಿ, ವರದಿ ನೀಡಿದ ಬಳಿಕ, ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ