ಖದೀಮರ ಕೈಚಳಕ ನೋಡಿ ದಂಗಾದ ಡಿಸಿಎಂ : ಕಾರಣ ಏನು ಗೊತ್ತಾ….?

ಬೆಂಗಳೂರು:

   ನಗರದ ಕೆಲ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡುವ ಕಾಮಗಾರಿಗೆ ಚಾಲನೆ ನೀಡುವ ವೇಳೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಶೂಗಳನ್ನೇ ಖದೀಮರು ಕದ್ದಿರುವ ಘಟನೆ ಸೋಮವಾರ ನಡೆದಿದೆ.ರಾಜ್ಯ ಸರ್ಕಾರವು ಬೆಂಗಳೂರಿನ ಆಯ್ದ ಮುಖ್ಯರಸ್ತೆಗಳಿಗೆ ವೈಟ್ ಟಾಪಿಂಗ್ ಅಳವಡಿಸಲು ನಿರ್ಧರಿಸಿದೆ. ವೈಟ್ ಟಾಪಿಂಗ್ ನಿಂದಾಗಿ, ಡಾಂಬರ್ ರಸ್ತೆಗಳನ್ನು ದೀರ್ಘಕಾಲ ಬಾಳಿಕೆ ಬರುವಂಥ ರಸ್ತೆಗಳನ್ನಾಗಿ ಪರಿವರ್ತಿಸುವ ಯೋಜನೆ ಇದಾಗಿದೆ.

   ಇದರ ಉದ್ಘಾಟನೆಯನ್ನು ರಾಜಾಜಿನಗರದ ಭಾಷ್ಯಂ ಸರ್ಕಲ್ ನಲ್ಲಿ ಜು. 15ರ ಬೆಳಗ್ಗೆ ಚಾಲನೆ ನೀಡಲಾಯಿತು. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಲ್ಲೇಶ್ವರಂ ಶಾಸಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾಮಗಾರಿ ಆರಂಭಕ್ಕಾಗಿ ಸಾಂಕೇತಿಕವಾಗಿ ಗುದ್ದಲಿ ಪೂಜೆಯನ್ನು ಗಣ್ಯರು ನೆರವೇರಿಸಲು ಮುಂದಾದಾಗ ಔಪಚಾರಿಕವಾಗಿ ಡಿಕೆಶಿ ಹಾಗೂ ಮೊದಲಾದ ಗಣ್ಯರು ತಮ್ಮ ಪಾದರಕ್ಷೆಗಳನ್ನು ಅಲ್ಲೇ ಪಕ್ಕದಲ್ಲೇ ಬಿಟ್ಟಿದ್ದರು.

   ಡಿಕೆಶಿಯವರೂ ಪೂಜೆ ನಡೆಯುವ ಅನತಿ ದೂರದಲ್ಲೇ ತಮ್ಮ ಶೂಗಳನ್ನು ಕಳಚಿ, ಪೂಜೆ ನಡೆಯುವ ಜಾಗಕ್ಕೆ ಬಂದರು. ಆದರೆ, ಇದೇ ಸಂದರ್ಭವನ್ನು ಬಳಸಿಕೊಂಡಿರುವ ಯಾರೋ ಖದೀಮರು ಡಿಕೆಶಿಯವರ ಶೂಗಳನ್ನೇ ಕದ್ದಿದ್ದಾರೆ.

   ಪೂಜೆ ಮುಗಿಸಿ ಬಂದ ಡಿಕೆಶಿಯವರಿಗೆ ತಮ್ಮ ಶೂಗಳನ್ನು ಯಾರೋ ಎಗರಿಸಿದ್ದಾರೆ ಎಂಬುದು ತಿಳಿದಿದೆ. ಅಲ್ಲೇ ಅಕ್ಕಪಕ್ಕ ಹುಡುಕಾಡಿದರೂ ಶೂಗಳು ಸಿಕ್ಕಿಲ್ಲ. ಆಗ, ಉಪ ಮುಖ್ಯಮಂತ್ರಿಗಳು, ತಮ್ಮ ಕಾರಿನತ್ತ ತೆರಳಿ ಅದರಲ್ಲಿದ್ದ ತಮ್ಮ ಬೇರೆ ಶೂಗಳನ್ನು ಧರಿಸಿಕೊಂಡು ಪ್ರಯಾಣ ಬೆಳೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap