ಮಾಜಿ ಸಿಎಂಗೆ ತಿರುಗೇಟು ನೀಡಿದ ಡಿಸಿಎಂ…..!

ಬೆಂಗಳೂರು:

     ನಾನು  ಟೆಂಟಲ್ಲಿ ಬ್ಲೂ ಫಿಲಂ ತೋರಿಸಿ ಜೀವನ ಮಾಡಿಕೊಂಡು ಬಂದವನು ಎಂದು ವಾಗ್ದಾಳಿ ನಡೆಸಿದ್ದ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ. ನಾನು ಬ್ಲೂ ಫಿಲಂ ತೋರಿಸಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ.

    ಖಾಸಗಿ ಟಿವಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ದೊಡ್ಡ ಆಲಹಳ್ಳಿ ಸುತ್ತಮುತ್ತ ಯಾವನಾದರೂ ಒಬ್ಬ ನಾನು ಬ್ಲೂ ಫಿಲಂ ತೋರಿಸಿದ್ದೀನಿ ಎಂದು ಹೇಳಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಕುಮಾರಸ್ವಾಮಿ ಕನಕಪುರಕ್ಕೆ ಬರಲಿ, ಬ್ಲೂ ಫಿಲಂ ಬಗ್ಗೆ ಮಾತಾಡಲಿ. ಲೋಕಸಭೆ ಚುನಾವಣೆಯಲ್ಲಿ ಗೊತ್ತಾಗುತ್ತೆ. ವಿಧಾನಸಭೆ ಚುನಾವಣೆಯಲ್ಲಿ ಕನಕಪುರಕ್ಕೆ ಬಂದು ಕುಮಾರಸ್ವಾಮಿ ಪ್ರಚಾರ ಮಾಡಿಲ್ಲ‌‌. ಬಂದು ಬ್ಲೂ ಫಿಲಂ ಬಗ್ಗೆ ಹೇಳಬೇಕಿತ್ತು, ಆಗ ಗೊತ್ತಾಗೋದು ಎಂದು ಟಾಂಗ್‌ ಕೊಟ್ಟರು.

    ನನಗೆ ಯಾರ್ ಬ್ರೇಕ್ ಹಾಕ್ತಾರೆ ರೀ, ಪ್ರಕೃತಿ ನಿಯಮ ಇದೆ. ನನಗೆ ಯಾರು ಬ್ರೇಕ್ ಗೀಕ್ ಹಾಕಲ್ಲ. ಕೆಲವರು ಲಿಮಿಟೇಶನ್ ದಾಟುತ್ತಾರೆ ಅಷ್ಟೇ. ಕುಮಾರಸ್ವಾಮಿ ಜೊತೆ ಗುದ್ದಾಟಕ್ಕೆ ನನಗೆ ಟೈಂ ಇಲ್ಲ. ಅಯ್ಯೋ ಪಾಪ ಅವರಿಗೆ ಪ್ರಾಬ್ಲಂ ಇದೆ. ಈಗಲೂ 21 ಥಿಯೇಟರ್ ಇವೆ. ನಮ್ಮದು ಎಲ್ಲಾದ್ರೂ ಉಂಟೇನ್ರಿ. ದೊಡ್ಡ ಆಲಹಳ್ಳಿ, ಕೋಡಹಳ್ಳಿ, ಸಾತನೂರಿನಲ್ಲಿ ಹೋಗಿ ಜನರನ್ನ ಕೇಳಿ. ಒಬ್ಬ ಏನಾದ್ರೂ ಡಿಕೆಶಿ ಬ್ಲೂ ಫಿಲ್ಮ್ ತೋರಿಸ್ತಿದ್ದ ಅಂದ್ರೆ ನಾನು ರಾಜಕೀಯ ನಿವೃತ್ತಿ ತಗೋತೀನಿ ಎಂದು ತಿರುಗೇಟು ಕೊಟ್ಟರು.

    ಇಂದಿರಾಗಾಂಧಿ ಹೆಸರಲ್ಲಿ ಥಿಯೇಟರ್ ಮಾಡಿದ್ದೆ. ಬೆಳಗಾವಿ ಸೆಷನ್‌ನಲ್ಲಿ ಓಪನ್ ಡಿಬೇಟ್‌ಗೆ ನಾನು ರೆಡಿ. ಮುಹೂರ್ತ ಗಳಿಗೆ ನೋಡ್ಕೊಂಡು ಬರಲಿ. ಡೂಪ್ಲಿಕೇಟ್ ಸಿಎಂ ಬಿರುದನ್ನ ಸಂತೋಷದಿಂದ ಸ್ವೀಕಾರ ಮಾಡುತ್ತೇನೆ ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link