ಸಿದ್ದಾಪುರ :
ಉಂಚಳ್ಳಿ ಫಾಲ್ಸ್ ನೋಡಲು ತೆರಳಿದ್ದ ಪ್ರವಾಸಿಯ ಬೈಕ್ ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿ ಓರ್ವ ಮೃತ ಪಟ್ಟು, ಇನ್ನೊರ್ವ ಗಂಭೀರ ಗಾಯಗೊಂಡ ಘಟನೆ ಸಿದ್ದಾಪುರ ತಾಲೂಕು ನಿಲ್ಕುoದ ಕ್ರಾಸ್ ಬಳಿ ನಡೆದ ಬಗ್ಗೆ ವರದಿ ಆಗಿದೆ. ಮೂರು ಬೈಕ್ ಗಳ ಮೇಲೆ ಆರು ಪ್ರವಾಸಿಗರು ಉಂಚಳ್ಳಿ ಫಾಲ್ಸ್ ನೋಡಲು ಬಂದಿದ್ದರೆನ್ನಲಾಗಿದೆ. ಪ್ರವಾಸ ಬಂದವರು ತಡಸ ನ ರಾಮನಕೊಪ್ಪದವರೆಂದು ಹೇಳಲಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
